EBM News Kannada
Leading News Portal in Kannada

ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್​ಗೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಹತ್ಯೆ – Kannada News | Man who threatened america president Joe Biden, Kamala Harris killed in FBI raid

0


ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್​ಗೆ ಬೆದರಿಕೆ ಹಾಕಿದ್ದ ಶಂಕಿತನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಹತ್ಯೆ ಮಾಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌(Joe Biden) ಹಾಗೂ ಕಮಲಾ ಹ್ಯಾರಿಸ್​(Kamala Harris)ಗೆ ಬೆದರಿಕೆ ಹಾಕಿದ್ದ ಶಂಕಿತನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಹತ್ಯೆ ಮಾಡಿದೆ. ಸಾಲ್ಟ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿರುವ ಕ್ರೆಹ್ ಡೆಲೆವ್ ರಾಬರ್ಟ್‌ಸನ್ ಅವರ ಮನೆಯಲ್ಲಿ ಬೆಳಗ್ಗೆ 6.15 ಕ್ಕೆ ಗುಂಡಿನ ದಾಳಿ ನಡೆದಿದೆ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ರಾಬರ್ಟ್‌ಸನ್ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ್ದರು, ರಾಬರ್ಟ್‌ಸನ್‌ನ ಮನೆಯಲ್ಲಿ ಎಫ್‌ಬಿಐ ಏಜೆಂಟ್‌ಗಳು ಬಂಧನ ಮತ್ತು ಶೋಧ ವಾರಂಟ್ ನೀಡಲು ಪ್ರಯತ್ನಿಸುತ್ತಿದ್ದಾಗ ಗುಂಡಿನ ದಾಳಿ ಸಂಭವಿಸಿದೆ.

ಎಫ್​ಬಿಐ ಅಧಿಕಾರಿಗಳು ಬಂಧನದ ವಾರೆಂಟ್ ಹಾಗೂ ಶೋಧ ನಡೆಸಲು ಮುಂದಾಗುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಹೆಚ್ಚಿನ ವಿವರಗಳನ್ನು ನೀಡಲು ಎಫ್‌ಬಿಐ ನಿರಾಕರಿಸಿದೆ.

ಮತ್ತಷ್ಟು ಓದಿ: Ukraine: ಕೊನೆಗೂ ಯುದ್ಧ ಭೂಮಿ ಉಕ್ರೇನ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, 500 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಸಹಾಯ

ಗುಂಡಿನ ದಾಳಿ ಸಂದರ್ಭದಲ್ಲಿ ರಾಬರ್ಟ್​ಸನ್ ಶಸ್ತ್ರಸಜ್ಜಿತನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಕುರಿತು ಎಫ್​ಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಆತ ಜೋ ಬೈಡನ್ ಅವರನ್ನು ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ.
ರಾಬರ್ಟ್​ಸನ್ ಓರ್ವ ಉದ್ಯಮಿ, ಆದರೆ ರಾಜ್ಯ ದಾಖಲೆಗಳ ಪ್ರಕಾರ ಕಳೆದ ವರ್ಷ ಅವರ ವ್ಯಾಪಾರಕ್ಕೆ ನೀಡಿದ್ದ ಲೈಸೆನ್ಸ್​ ಮುಗಿದಿದೆ.

ಆದರೆ ಅವರಿಗೆ ನೀಡಿದ ಪರವಾನಗಿಯನ್ನು ಅಪಡೇಟ್ ಮಾಡಿಸಿಲ್ಲ. ಲಿಂಕ್ಡ್​ಇನ್​ನಲ್ಲಿ ರಾಬರ್ಟ್​ಸನ್ 45 ವರ್ಷಗಳ ಕಾಲ ಸ್ಟ್ರಕ್ಚರಲ್ ಸ್ಟೀಲ್ ಮತ್ತು ವೆಲ್ಡಿಂಗ್ ಇನ್ಸ್​ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವುದಾಗಿ ಬರೆದುಕೊಂಡಿದ್ದಾರೆ. ಅವರು ನಿವೃತ್ತರಾದ ಮೇಲೆ ಮರಗೆಲಸ ಉದ್ಯಮ ಶುರು ಮಾಡಿದ್ದರು.

ಜೋ ಬೈಡನ್ ಈಗ ಪಶ್ಚಿಮ ಯುನೈಟೆಡ್ ಸ್ಟೇಟ್ಸ್​ನ ಪ್ರವಾಸದಲ್ಲಿದ್ದಾರೆ. ಬುಧವಾರ ನ್ಯೂ ಮೆಕ್ಸಿಕೋದಲ್ಲಿ ತಂಗಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉತಾಹ್​ಗೆ ಭೇಟಿ ನೀಡುವವರಿದ್ದರು, ಅದಕ್ಕೂ ಮುನ್ನವೇ ಎನ್​ಕೌಂಟರ್ ನಡೆದಿದೆ.

Published On – 8:29 am, Thu, 10 August 23

ತಾಜಾ ಸುದ್ದಿ

Leave A Reply

Your email address will not be published.