ಈಕ್ವೆಡಾರ್ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ – Kannada News | Ecuadorean presidential candidate Fernando Villavicencio killed at campaign event
Fernando Villavicencio Death: ಈಕ್ವೆಡಾರ್(Ecuador)ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಷ್ಟ್ರಪತಿ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಲಾಗಿದೆ. ಚುನಾವಣಾ ಪ್ರಚಾರ ಮುಗಿಸಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ,
ಫರ್ನಾಂಡೊ ವಿಲ್ಲಾವಿಸೆನ್ಸಿಯೋ
ಈಕ್ವೆಡಾರ್(Ecuador)ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಷ್ಟ್ರಪತಿ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಲಾಗಿದೆ. ಚುನಾವಣಾ ಪ್ರಚಾರ ಮುಗಿಸಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ, ಕಾರಿನ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯಿಂದ ಏಕಾಏಕಿ ಗುಂಡಿನ ದಾಳಿ ಎನ್ನುವ ವಿಚಾರ ತಿಳಿದುಬಂದಿದೆ.
ಈಕ್ವೆಡಾರ್ನ ಕ್ವಿಟೊ ನಗರದಲ್ಲಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಹತ್ಯೆ ನಡೆದಿದೆ, ಈಕ್ವೆಡಾರ್ ರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 20ರಂದು ಚುನಾವಣೆ ನಡೆಯಲಿದೆ. ಫರ್ನಾಂಡೊ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಧ್ವನಿ ಎತ್ತಿದ್ದರು.
Published On – 7:11 am, Thu, 10 August 23