ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಫೋಟ, 7 ಮಂದಿ ಸಾವು – Kannada News | Bomb Blast: UC chairman among seven dead in blast near Balochistan’s Panjgur
Pakistan Bomb Blast: ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಪೋಟಗೊಂಡಿದ್ದು 7 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಬಲೂಚಿಸ್ತಾನದ ಪಂಜ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
Image Credit source: Tribune.com
ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಪೋಟ(Bomb Blast) ಗೊಂಡಿದ್ದು 7 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಬಲೂಚಿಸ್ತಾನದ ಪಂಜ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಲ್ಗತಾರ್ ಯೂನಿಯನ್ ಕೌನ್ಸಿಲ್ ಮುಖ್ಯಸ್ಥ ಸೇರಿ 7 ಜನ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಯೂನಿಯನ್ ಕೌನ್ಸಿಲ್ ಮುಖ್ಯಸ್ಥ ಇಸ್ತಿಕ್ ಯಾಕೂಬ್ ಕುಟುಂಬ ಸದಸ್ಯರು, ಭದ್ರತಾ ಸಿಬ್ಬಂದಿ ಸೇರಿ 7 ಜನ ಸಾವು
ಮದುವೆ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಯಾಕೂಬ್ ಗುರಿಯಾಗಿಸಿಕೊಂಡು ನೆಲಬಾಂಬ್ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆಗೀಡಾದ ರಾಜಕಾರಣಿ ಇಶಾಕ್ ಯಾಕೂಬ್ ಬಲೂಚಿಸ್ತಾನದ ಅವಾಮಿ ಪಕ್ಷದವರಾಗಿದ್ದು ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ.
ಮತ್ತಷ್ಟು ಓದಿ: ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಟೋ ಚಾಲಕ ಪುರಷೋತ್ತಮ ಮನೆ ನವೀಕರಿಸಿ ಯುಗಾದಿ ಗಿಫ್ಟ್ ನೀಡಿದ ಟ್ರಸ್ಟ್
ಪಾಕಿಸ್ತಾನದ ತಾಲಿಬಾನ್ನ ಹಿಂದಿನ ಭದ್ರಕೋಟೆಯಲ್ಲಿ ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಗಳನ್ನು ತುಂಬಿದ ವಾಹನವನ್ನು ಸ್ಫೋಟಿಸಿದ ಕೆಲವೇ ಗಂಟೆಗಳ ನಂತರ ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ವಾಯುವ್ಯ ಗಡಿಯಲ್ಲಿ ಸ್ಪೋಟ ಸಂಭವಿಸಿತ್ತು.