ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು – Kannada News | Afghanistan have banned girls over the age of 10 from attending school in some country
ತಾಲಿಬಾನ್ ತನ್ನ ಕ್ರೂರ ನಿರ್ಧಾರಗಳಿಗಾಗಿ ಪ್ರಪಂಚದಾದ್ಯಂತ ಕುಖ್ಯಾತವಾಗಿದೆ. ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ
Image Credit source: The Guardian
ತಾಲಿಬಾನ್(Taliban) ತನ್ನ ಕ್ರೂರ ನಿರ್ಧಾರಗಳಿಗಾಗಿ ಪ್ರಪಂಚದಾದ್ಯಂತ ಕುಖ್ಯಾತವಾಗಿದೆ. ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ. 10 ವರ್ಷದ ನಂತರ ಹೆಣ್ಣುಮಕ್ಕಳು ಓದುವ ಹಕ್ಕನ್ನು ತಾಲಿಬಾನ್ ಸರ್ಕಾರ ಕಸಿದುಕೊಂಡಿದೆ. ಹೊಸ ಆದೇಶಕ್ಕೆ ಸುಮಾರು 223 ದಿನಗಳ ಮೊದಲು, ಹೆಣ್ಣುಮಕ್ಕಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದನ್ನು ನಿಷೇಧಿಸಲಾಯಿತು. ಈ ಹಿಂದೆ 6ನೇ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಓದಲು ಅವಕಾಶವಿತ್ತು.
ತಾಲಿಬಾನ್ ಈ ಹಿಂದೆ ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂದು ಹೇಳಿತ್ತು. ತಾಲಿಬಾನ್ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿತ್ತು. ತಾಲಿಬಾನ್ ಈಗ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ 10 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರನ್ನು ಪ್ರಾಥಮಿಕ ಶಾಲೆಗೆ ಸೇರಿಸದಂತೆ ಸೂಚನೆ ನೀಡಿದೆ ಎಂದು ಬಿಬಿಸಿ ಪರ್ಷಿಯನ್ ವರದಿ ಮಾಡಿದೆ.
ಮತ್ತಷ್ಟು ಓದಿ: Girls Education: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದ ತಾಲಿಬಾನ್
ಎರಡು ವರ್ಷಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತ್ತು. ಇದರ ನಂತರ, ಆರನೇ ತರಗತಿಗಿಂತ ಹೆಚ್ಚಿನ ಶಾಲೆಗಳಿಗೆ ಹಾಜರಾಗಲು ಹುಡುಗಿಯರನ್ನು ನಿರ್ಬಂಧಿಸಲಾಯಿತು. 683 ದಿನಗಳ ಹಿಂದೆ ತಾಲಿಬಾನ್‌ಗಳು 11 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರಿಗೆ ಶಾಲೆಗೆ ಹೋಗದಂತೆ ಸೂಚನೆ ನೀಡಿದ್ದರು. 223 ದಿನಗಳ ಹಿಂದೆ ಹುಡುಗಿಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಲಾಗಿತ್ತು. ಪುರುಷರಿಲ್ಲದೆ ಹೋಟೆಲ್ಗೆ ಹೋಗುವಂತಿರಲಿಲ್ಲ, ಉದ್ಯಾನಗಳಿಗೆ ತೆರಳುವಂತಿಲ್ಲ ಎಂದೂ ಹೇಳಿತ್ತು.