EBM News Kannada
Leading News Portal in Kannada

ಪಾಕಿಸ್ತಾನದ ನವಾಬ್​ಶಾಹ್​ನಲ್ಲಿ ಹಳಿ ತಪ್ಪಿದ ರೈಲು, 15 ಮಂದಿ ಸಾವು, 50 ಮಂದಿಗೆ ಗಂಭೀರ ಗಾಯ – Kannada News | Pakistan: 50 injured as 7 bogies of Hazara Express derail near Nawabshah

0


ನಯನಾ ರಾಜೀವ್ |

Updated on:Aug 06, 2023 | 3:28 PM


ಪಾಕಿಸ್ತಾನದ ನವಾಬ್​ಶಾಹ್​ನಲ್ಲಿ ಹಜಾರಾ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಹಜಾರಾ ಎಕ್ಸ್​ಪ್ರೆಸ್​ ರೈಲಿನ 8 ಬೋಗಿಗಳು ಹಳಿತಪ್ಪಿದೆ.

ರೈಲು

Image Credit source: India Today


ಪಾಕಿಸ್ತಾನದ ನವಾಬ್​ಶಾಹ್​ನಲ್ಲಿ ಹಜಾರಾ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಹಜಾರಾ ಎಕ್ಸ್​ಪ್ರೆಸ್​ ರೈಲಿನ 8 ಬೋಗಿಗಳು ಹಳಿತಪ್ಪಿದೆ. ಈ ಅಪಘಾತದಲ್ಲಿ ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸಹಾರಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಈ ನಿಲ್ದಾಣವು ಶಹಜಾದ್‌ಪುರ ಮತ್ತು ನವಾಬ್‌ಶಾಹ್ ನಡುವೆ ಇದೆ. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Published On – 3:14 pm, Sun, 6 August 23

ತಾಜಾ ಸುದ್ದಿ

Leave A Reply

Your email address will not be published.