Ultimate magazine theme for WordPress.

WhatsApp: ಗ್ರೂಪ್ ಕಾಲ್​​ನಲ್ಲಿ ಹೊಸ ಅಪ್ಡೇಟ್ ತಂಡ ವಾಟ್ಸ್ಆ್ಯಪ್!

0

ಲಾಕ್​ಡೌನ್​ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್​ ಆ್ಯಪ್​​ಗಳ ಬಳಕೆ ಹೆಚ್ಚು ಕಂಡುಬಂದಿದ್ದು, ಇದೀಗ ವಾಟ್ಸ್​ ಆ್ಯಪ್​​​ ಕೂಡ ವಿಡಿಯೋ ಕಾಲ್​ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ.

ಈವರೆಗೆ ವಾಟ್ಸ್​ಆ್ಯಪ್​ನಲ್ಲಿ ನಾಲ್ವರು ಮಾತ್ರ ವಿಡಿಯೋ ಕಾಲ್​ ಬಳಸಬಹುದಾಗಿತ್ತು. ಮುಂದಿನ ಆವೃತ್ತಿಯಲ್ಲಿ ಹೆಚ್ಚು ಜನರು ವಿಡಿಯೋ ಕಾಲ್​ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ. ಆದರೆ ಎಷ್ಟು ಸಂಖ್ಯೆಯಲ್ಲಿ ಬಳಸಬಹುದು ಎಂಬುದನ್ನು ಹೇಳಿಲ್ಲ.

ಲಾಕ್​ಡೌನ್​ ಅವಧಿಯಲ್ಲಿ ಜೂಮ್​ ಆ್ಯಪ್​​​ ಜನಪ್ರಿಯಗಳಿಸಿತ್ತು. ಹೆಚ್ಚು ಜನರು ಡೌನ್​ಲೋಡ್​ ಮಾಡಿಕೊಂಡು ಬಳಸುತ್ತಿದ್ದರು. ಆದರೆ ಕೇಂದ್ರ ಗೃಹ ಇಲಾಖೆ ಜೂಮ್​ ಆ್ಯಪ್​ನಲ್ಲಿ ನ್ಯೂನತೆಗಳಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ಹೇಳಿದೆ. ಹಾಗಾಗಿ ಹೆಚ್ಚಿನವರು ಈ ಆ್ಯಪ್​

ಲಾಕ್​ಡೌನ್​ ಸಂದರ್ಭದಲ್ಲಿ ಅನೇಕರು ವರ್ಕ್​ ಫ್ರಮ್​ ಹೋಮ್​ ಮಾಡುತ್ತಿದ್ದಾರೆ. ಉಪನ್ಯಾಸಕರು ಕೂಡ ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿ ಮಾಡುತ್ತಿದ್ದಾರೆ. ಅದಕ್ಕೆಂದೆ ಗೂಗಲ್​ ಪ್ಲೇ ಸ್ಟೋರ್​, ಆ್ಯಪ್​ ಸ್ಟೋರ್​ನಲ್ಲಿ ದೊರೆಯುವ ವಿಡಿಯೋ ಕಾನ್ಫರೆನ್ಸ್​ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಇದೀಗ ವಾಟ್ಸ್​ಆ್ಯಪ್​ ಕೂಡ ಏಕಕಾಲಕ್ಕೆ ಅಧಿಕ ಜನರು ವಿಡಿಯೋ ಕಾಲಿಂಗ್​ ಫೀಚರ್​ ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ. ಸದ್ಯದಲ್ಲೇ ವಾಟ್ಸ್​ ಆ್ಯಪ್​ ಅಪ್ಡೇಟ್​​ ಮಾಡುವ ಮೂಲಕ​​ ಬಳಕೆದಾರರಿಗೆ ಸಿಗಲಿದೆ

Leave A Reply

Your email address will not be published.