Ultimate magazine theme for WordPress.

‘ಜುಲೈ ಬದಲಿಗೆ ಸೆಪ್ಟೆಂಬರ್​​ನಿಂದ ಕಾಲೇಜುಗಳನ್ನು ಓಪನ್​​ ಮಾಡಿ‘ – ಯುಜಿಸಿಗೆ ತಜ್ಞರ ಸಮಿತಿ ಶಿಫಾರಸ್ಸು

0

ಬೆಂಗಳೂರು(ಏ.25): ದೇಶಾದ್ಯಂತ ಜುಲೈನಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಸೆಪ್ಟೆಂಬರ್​​ನಿಂದ ಶುರು ಮಾಡುವಂತೆ ಯುಜಿಸಿಗೆ ಸಮಿತಿ ಶಿಫಾರಸ್ಸು ಮಾಡಿದೆ. ಕೊರೋನಾ ವೈರಸ್​ ತಡೆಗೆ ಮುಂಜಾಗೃತ ಕ್ರಮವಾಗಿ ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್​ ಮಾಡಿ ಆದೇಶಿಸಿತ್ತು. ಕ್ಲಾಸ್​ ರೂಮ್​​ಗಳು ಶಟ್​​ಡೌನ್​​ ಆಗಿರುವುದರಿಂದ ಪರೀಕ್ಷೆಗಳು ಯಾವಾಗ ನಡೆಸಬೇಕು? ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು? ಎನ್ನುವುದರ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಯಜಿಸಿ 7 ಜನರ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿಯೂ ಯುಜಿಸಿಗೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಸೆಪ್ಟೆಂಬರ್​​ ತಿಂಗಳಿನಿಂದ ಕಾಲೇಜುಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಮಾರಕ ಕೊರೋನಾ ವೈರಸ್​​ ದೇಶದಲ್ಲಿ ಶರ ವೇಗದಲ್ಲಿ ಹರಡುತ್ತಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲ. ಹಾಗಾಗಿ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ. ವಿವಿಗಳು ನೀಡಿದ ವೇಳಾಪಟ್ಟಿಯಂತೆ ಕಾಲೇಜುಗಳು ಆರಂಭವಾಗದ ಕಾರಣ ಸಾಧ್ಯವಾದರೇ ವರ್ಷಾಂತ್ಯ ಅಥವಾ ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳನ್ನು ಜುಲೈನಲ್ಲಿ ಆನ್​​ಲೈನ್​​ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ.

ಮಾರ್ಚ್​​ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್​ಡೌನ್ ತಂತ್ರ ಕೇಂದ್ರ ಅನುಸರಿಸಿದೆ. ಈ ಮಧ್ಯೆ ಸಮಿತಿಯೂ ಸೆಪ್ಟೆಂಬರ್​​ನಿಂದ ಕಾಲೇಜು ಆರಂಭಿಸುವಂತೆ ಶಿಫಾರಸ್ಸು ಮಾಡಿದ ಕಾರಣ ವರದಿ ಅನುಸಾರ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳ ಕುರಿತು ಯುಜಿಸಿ ಮಾರ್ಗಸೂಚಿ ಹೊರಡಿಸಲಿದೆ.

Leave A Reply

Your email address will not be published.