Ultimate magazine theme for WordPress.

ಲಾಕ್‌ಡೌನ್ ಬಳಿಕ ಬಾಗಿಲು ತೆರೆದ ಅಯೋಧ್ಯೆ ರಾಮಮಂದಿರ

0

ಲಕ್ನೋ, ಜೂನ್ 8: ಉತ್ತರ ಪ್ರದೇಶದ ಅಯೋಧ್ಯದಲ್ಲಿರುವ ತಾತ್ಕಾಲಿಕ ಶ್ರೀರಾಮಮಂದಿರವನ್ನು ತೆರೆಯಲಾಗಿದ್ದು, ಮಥುರಾದಲ್ಲಿರುವ ಬಹುತೇಕ ದೇವಾಲಯಗಳು ಮುಚ್ಚಿವೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳುಗಳ ಕಾಲ ಮುಚ್ಚಿದ್ದ ಶ್ರೀರಾಮಮಂದಿರವನ್ನು ತೆರಯಲಾಗಿದೆ. ಸಾಕಷ್ಟು ಮಂದಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುತ್ತಾರೆ. ಕೊರೊನಾ ವೈರಸ್ ಭೀತಿಯಿಂದಾಗಿ ರಾಮಮಂದಿರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ರಾಮ್‌ಲಲ್ಲಾ ವಿಗ್ರಹವನ್ನು ಸ್ಥಳಾಂತರ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ದೇಗುಲದ ಸಮೀಪದಲ್ಲೇ ಇರುವ ಮಾನಸ ಭವನಕ್ಕೆ ರಾಮ್‌ಲಲ್ಲಾ ವಿಗ್ರಹವನ್ನು ಸ್ಥಳಾಂತರ ಮಾಡಲಾಗಿತ್ತು.

ಮಥುರಾದಲ್ಲಿ ಕೇವಲ ಎರಡು ದೇವಸ್ಥಾನಗಳು ಮಾತ್ರ ತೆರೆದಿವೆ. ಕೃಷ್ಣ ಜನ್ಮಸ್ಥಾನ ದೇವಸ್ಥಾನ ಇಂದಿನಿಂದ ತೆರೆಯಲಿದೆ. ದ್ವಾರಕಾದೀಶ ದೇವಸ್ಥಾನ ಜೂನ್ 10ರ ಬಳಿಕ ತೆರೆಯಲಾಗುತ್ತದೆ.

ದೇವಸ್ಥಾನವು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ, 4 ರಿಂದ ರಾತ್ರಿ 8 ಗಂಟೆಯವರಗೆ ತೆರೆದಿರಲಿದೆ. ದ್ವಾರಕಾದೀಶ ದೇವಸ್ಥಾನ ಜೂನ್ 10ರ ಬಳಿಕ ತೆರೆಯಲಿದೆ ಎಂದು ರಾಕೇಶ್ ಚತುರ್ವೇದಿ ತಿಳಿಸಿದ್ದಾರೆ.

Leave A Reply

Your email address will not be published.