EBM News Kannada
Leading News Portal in Kannada

Lockdown; ಮನೆಯಲ್ಲಿ ಕುಳಿತು ಕಾಲ ಕಾಳೆಯುತ್ತಿರುವ ಮಕ್ಕಳಿಗೆ ಇಲ್ಲಿದೆ ಕಲಿಕಾ ಆ್ಯಪ್

0

ಕೊರೋನಾ ಲಾಕ್​ ಡೌನ್​ನಿಂದಾಗಿ ಮನೆಯಲ್ಲಿ ಟಿವಿ ನೋಡುತ್ತಾ, ಆಟವಾಡುತ್ತಾ ಕಾಲ ಕಳೆಯುತ್ತಿರುವ ಮಕ್ಕಳಿಗೆ ಪಾಠದ ಕುರಿತಾಗಿ ಕೊಂಡಿ ಬೆಸೆಯಲು ಗೂಗಲ್​ ಪ್ಲೇಸ್ಟೋರ್​ನಲ್ಲಿ ಅನೇಕ ಕಿರುತಂತ್ರಾಂಶಗಳಿರುವ ಕಲಿಕಾ ಆ್ಯಪ್​ ಲಭ್ಯವಿದೆ. ಈ ಆ್ಯಪ್​ಗಳು ಮಕ್ಕಳ ಬೆಳವಣೆಗೆಗೆ ಸಹಾಯವಾಗುತ್ತದೆ. ಹಾಗಾಗಿ, ಮಕ್ಕಳ ಬೌದ್ಧಿಕ ಬೆಳವಣೆಗೆಯ ಜೊತೆಗೆ ಕೆಲ ಮಾಹಿತಿಯನ್ನು ನೀಡುವ ಆ್ಯಪ್​​ಗಳ ಮಾಹಿತಿ ಇಲ್ಲಿದೆ.

Pettson’s Inventions Deluxe:

ಮಕ್ಕಳ ಸೃಜನಶೀಲತೆ ಅಭಿವೃದ್ಧಿ ಪಡಿಸುವ ಪೆಟ್ಸನ್​ ಆ್ಯಪ್​ ನಲ್ಲಿ ಮಕ್ಕಳು ಆವಿಷ್ಕಾರವನ್ನು ಮಾಡಬೇಕಾಗುತ್ತದೆ. ಆ್ಯಪ್​ನಲ್ಲಿರುವ ಪೆಟ್ಸನ್​ ಮತ್ತು ಆತನ ಬೆಕ್ಕಿನ ಸಹಾಯದಿಂದ ಹೊಸ ಯಂತ್ರಗಳನ್ನು ಕಂಡುಹಿಡಿಯುತ್ತಾ ಸಾಗಬೇಕು. ಈ ಆ್ಯಪ್​ನ ಬಳಕೆಯಿಂದ ಮಕ್ಕಳಲ್ಲಿ ತರ್ಕ,

Mussila Music School:

ಕಲೆ, ಸಂಗೀತ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮ್ಯುಸಿಲಾ ಆ್ಯಪ್ ಅನ್ನು ತಯಾರಿಸಲಾಗಿದೆ​. ಈ ಆ್ಯಪ್​ ಮೂಲಕ ಮಕ್ಕಳಿಗೆ ಸಂಗೀತ ಜ್ಞಾನವನ್ನು ತಿಳಿಸಿಕೊಡುತ್ತದೆ. ಅಂತೆಯೇ, ಅಲಂಕಾರಿಕ ಬಟ್ಟೆಗಳು, ವಸ್ತುಗಳ ಹುಡುಕಾಟವನ್ನು ಹೇಳಿಕೊಡುತ್ತದೆ.

Hello Numbers:

ನಂಬರ್​ಎಲೈವ್​​ ಕಂಪೆನಿ ತಯಾರಿಸಿದ ಈ ಆ್ಯಪ್​ನಲ್ಲಿ ಮಕ್ಕಳಿಗೆ ಶೂನ್ಯದ ಪರಿಕಲ್ಪನೆಯನ್ನು, ಸಂಖ್ಯೆಯನ್ನು ಸರಳವಾಗಿ ಹೇಳಿಕೊಡುವ ಆಟಗಳನ್ನು ಅಳವಡಿಸಲಾಗಿದೆ. ಅಂತೆಯೇ, ಮಕ್ಕಳಿಗೆ ಅನುಗುಣವಾದ ಮನೋರಂಜನೆ, ಕಾಲ್ಪನಿಕ ಪಾತ್ರಗಳು, ಆಡಿಯೋ, ಅ್ಯನಿಮೇಷನ್​​ ಆಟಗಳು ಇದರಲ್ಲಿದೆ.Slice Fractions​:

ಇಂಗ್ಲಿಷ್​ ಸೇರಿದಂತೆ ವಿಶ್ವದ 14 ಭಾಷೆಗಳಲ್ಲಿ ಲಭ್ಯವಿರುವ ಗಣಿತ ಆ್ಯಪ್​. 5 ರಿಂದ 12 ವರ್ಷದ ವರೆಗಿನ ಮಕ್ಕಳ ಕಲಿಕೆಗೆ ಉಪಯುಕ್ತವಾಗಿದ್ದು, ಗಣಿತ ಲೆಕ್ಕವನ್ನು ಬಿಡಿಸಲು ಅನೇಕ ಆಟವನ್ನು ಅಳವಡಿಸಲಾಗಿದೆ. ಜೊತೆಗೆ 140ಕ್ಕೂ ಅಧಿಕ ಭೌತವಿಜ್ಞಾನ ಪಜಲ್​ಗಳನ್ನೂ ನೀಡಲಾಗಿದೆ.

Leave A Reply

Your email address will not be published.