EBM News Kannada
Leading News Portal in Kannada

ಬ್ಲ್ಯಾಕ್‌ಬೆರಿ ಕಮ್‌ಬ್ಯಾಕ್; ಕೀ2 ಭರ್ಜರಿ ಬಿಡುಗಡೆ

0

ನ್ಯೂಯಾರ್ಕ್: ಸ್ಮಾರ್ಟ್‌ಫೋನ್ ರಂಗಕ್ಕೆ ಪ್ರತಿಷ್ಠಿತ ಬ್ಲ್ಯಾಕ್‌ಬೆರಿ ಭರ್ಜರಿ ಪುನರಾಗಮನವನ್ನು ಮಾಡಿಕೊಂಡಿದೆ. ಒಂದು ಕಾಲದಲ್ಲಿ ಅತಿ ಬೇಡಿಕೆಯನ್ನು ಕಾಯ್ದುಕೊಂಡಿರುವ ಬ್ಲ್ಯಾಕ್‌ಬೆರಿ ಮಾರಾಟ ಪರವಾನಗಿಯನ್ನು 2016ರಲ್ಲಿ ಕೆನೆಡಾ ಸಂಸ್ಥೆಯಿಂದ ಪಡೆದಿರುವ ಚೀನಾ ಉತ್ಪಾದಕ ಸಂಸ್ಥೆ ಟಿಸಿಎಲ್ ಕಮ್ಯೂನಿಕೇಷನ್, ಅತಿ ನೂತನ ಬ್ಲ್ಯಾಕ್‌ಬೆರಿ ಕೀ2 (BlackBerry KEY2) ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿರುವ ಬ್ಲ್ಯಾಕ್‌ಬೆರಿ ಕೀಒನ್‌ರ ಉತ್ತರಾಧಿಕಾರಿಯಾಗಲಿದೆ.

ಬೆಲೆ: ಅಂದಾಜು 43,800 ರೂ. ($649 or 649 euros)

ಬಣ್ಣಗಳು: ಕಪ್ಪು ಮತ್ತು ಗ್ರೇ.
ಭಾರತಕ್ಕೆ ಯಾವಾಗ?: ಪ್ರಸಕ್ತ ಸಾಲಿನಲ್ಲೇ.

ವಿಶೇಷತೆಗಳು:
ಸಿರೀಸ್ 7 ಅಲ್ಯೂಮಿನಿಯಂ ಅಲಾಯ್ ಫ್ರೇಮ್,
ಟೆಕ್ಚರ್ಡ್ ಡೈಮಂಡ್ ಗ್ರಿಪ್ ಬ್ಯಾಕ್ ಪ್ಯಾನೆಲ್,
ಜನಪ್ರಿಯ QWERTY ಕೀಬೋರ್ಡ್,
ಇಂಟೆಲಿಜೆಂಟ್ ಶಾರ್ಟ್‌ಕಟ್,
ಆಂಡ್ರಾಯ್ಡ್ 8.1 ಒರಿಯೋ,
4.5 ಇಂಚುಗಳ ಸಂಪೂರ್ಣ HD (1080×1620 ಪಿಕ್ಸೆಲ್ಸ್) ಡಿಸ್‌ಪ್ಲೇ,
64 ಬಿಟ್ ಒಕ್ಟಾ ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 660 SoC

ಸ್ಟೋರೆಜ್:
6GB RAM
64GB/128GB ಇಂಟರ್ನಲ್ ಸ್ಟೋರೆಜ್,
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ:
ಡ್ಯುಯಲ್ ಕ್ಯಾಮೆರಾ,
ಎರಡು 12 MP ಕ್ಯಾಮೆರಾ,
LED ಫ್ಲ್ಯಾಶ್, HDR, 4K ವೀಡಿಯೋ ರೆಕಾರ್ಡಿಂಗ್, 30FPS ಡ್ಯುಯಲ್ PDAF
portrait mode ಹಾಗೂ optical zoom,
8 MP ಫ್ರಂಟ್ ಕ್ಯಾಮೆರಾ,
ಸಂಪೂರ್ಣ HD ವೀಡಿಯೋ ರೆಕಾರ್ಡಿಂಗ್.

ಬ್ಯಾಟರಿ: 3500mAh (ಎರಡು ದಿನಗಳ ಬ್ಯಾಟರಿ ಲೈಫ್)

ಕನೆಕ್ಟಿವಿಟಿ: 4G LTE (ಎರಡು ಸಿಮ್ ಕಾರ್ಡ್‌ಗಳಿಗೂ), Bluetooth v5.0 LE, GPS, GLONASS, Beidou, NFC, a 3.5mm headphone jack ಮತ್ತು USB Type-C.
ಸೆನ್ಸಾರ್: accelerometer, ambient light sensor, gyroscope, hall effect sensor, fingerprint sensor, magnetometer, proximity sensor.
ಆಯಾಮ: 151.4×71.8×8.5mm
ಭಾರ: 168 grams.

Leave A Reply

Your email address will not be published.