EBM News Kannada
Leading News Portal in Kannada

ಇಸ್ರೋದಿಂದ ಸ್ವದೇಶೀ ನಿರ್ಮಿತ ಪರಮಾಣು ಗಡಿಯಾರ ಸೃಷ್ಟಿ, ನ್ಯಾವಿಗೇಷನ್ ಉಪಗ್ರಹಗಳಲ್ಲಿ ಬಳಕೆ

0
ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಸ್ವದೇಶೀ ತಂತ್ರಜ್ಞಾನ ಬಳಸಿಕೊಂಡು ಪರಮಾಣು ಗಡಿಯಾರವನ್ನು ಅಭಿವೃದ್ಧಿ ಪಡಿಸಿದೆ.
ಅಹಮದಾಬಾದ್ ನಲ್ಲಿರುವ ಇಸ್ರೋ ಸ್ಪೇಸ್​ ಅಪ್ಲಿಕೇಷನ್​​ ಸೆಂಟರ್ ನಲ್ಲಿ ಈ ಗಡಿಯಾರವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಉಪಗ್ರಹಗಳಿರುವ ಸ್ಥಳವನ್ನು ನಿಖರವಾಗಿ ಕಂಡು ಹಿಡಿಯಬಹುದಾಗಿದೆ.
ಸಧ್ಯ ಗಡಿಯಾರವನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ಯಶಸ್ವಿಯಾದ ಬಳಿಕ ಮುಂದಿನ ದಿನಗಳಲ್ಲಿ ಉಡಾವಣೆಗೊಳ್ಳುವ ಉಪಗ್ರಹಗಳಲ್ಲಿ ಇದನ್ನು ಅಳವಡಿಸಲಾಗುವುದು ಎಂಡು ಇಸ್ರೋ ಹೇಳಿದೆ.
ಪರಮಾಣು ಗಡಿಯಾರವೊಂದು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.ಇದುವರೆಗೆ ಈ ಗಡಿಯಾರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು, ಇನ್ನು ಮುಂದೆ ನಾವು ತಯಾರಿಸಿದ ಗಡಿಯಾರವನ್ನೇ ಬಳಸಿಕೊಲ್ಳಲಾಗುವುದ್. ಈ ತಂತ್ರಜ್ಞಾನವನ್ನು ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ನಾವೂ ಒಬ್ಬರಾಗಿದ್ದೇವೆ ಎಂದು ಇಸ್ರೋ ಎಸ್​ಎಸಿ ನಿರ್ದೇಶಕ  ತಾಪನ್​ ಮಿಶ್ರಾ ಹೇಳಿದ್ದಾರೆ.
ನ್ಯಾವಿಗೇಷನ್ಉಪಗ್ರಹಗಳ ಉಡಾವಣೆ ಸಮಯದಲ್ಲಿ ಈ ಗಡಿಯಾರಗಳನ್ನು ಅಳವಡಿಸುವುದರಿಂದ ಉಪಗ್ರಹ ಎಲ್ಲೇ ಇದ್ದರೂ ಸುಲಭವಾಗಿ ಗುರುತಿಸಲು ಸಾಧ್ಯವಿದೆ, ಇದರಿಂದ ಉಪಗ್ರಹದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದರು.
Leave A Reply

Your email address will not be published.