EBM News Kannada
Leading News Portal in Kannada

ಐಫೋನ್ 17 ಸರಣಿಯ ಫೋನ್‌ಗಳ ಬಿಡುಗಡೆ : ವೈಶಿಷ್ಯ ಮತ್ತು ದರಗಳ ಕುರಿತು ಇಲ್ಲಿದೆ ಮಾಹಿತಿ…

0


ಹೊಸದಿಲ್ಲಿ : ಆ್ಯಪಲ್ ಸಂಸ್ಥೆಯು ಐಫೋನ್ 17 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಐಫೋನ್ 17 ಸರಣಿಯಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಆ್ಯಪಲ್ ವಾಚ್ ಸರಣಿ 11, ವಾಚ್ ಅಲ್ಟ್ರಾ 3, ವಾಚ್ ಎಸ್ಇ ಮತ್ತು ಏರ್ಪಾಡ್ಸ್ ಪ್ರೊ 3 ಬಿಡುಗಡೆ ಮಾಡಿದೆ. ಐಫೋನ್ ಏರ್ ಮಾದರಿಯು ಹಿಂದಿನ ಪ್ಲಸ್ ಮಾದರಿಗಳಿಗೆ ಪರ್ಯಾಯವಾಗಿದೆ. ಇದು ಅತ್ಯಂತ ಹಗುರವಾದ ಮಾದರಿಯಾಗಿದೆ.

ಐಫೋನ್ 17 ಸರಣಿಗಳಲ್ಲಿ ಅತ್ಯುತ್ತಮ ತಂತ್ರಜ್ಞಾನದ ಅಪ್ಡೇಟ್‌ಗಳನ್ನು ಕಾಣಬಹುದಾಗಿದೆ. ಪ್ರೊ ಮಾದರಿಗಳಲ್ಲಿ ಇನ್ನಷ್ಟು ವರ್ಧಿತ ವೈಶಿಷ್ಟ್ಯಗಳು ಇರಲಿವೆ.

ಐಫೋನ್ 17

ಐಫೋನ್ 17ನಲ್ಲಿ ಪ್ರೋಮೋಶನ್ ಡಿಸ್ಪ್ಲೆ 120 ಎಚ್ಜೆಡ್ ರಿಫ್ರೆಶ್ ರೇಟ್ ಸ್ಕ್ರೀನ್ ಹೊಂದಿದೆ. ಪ್ರೊ ಸರಣಿಯಂತೆ ಉದ್ದವಾಗಿ 6.3 ಇಂಚು ಇದೆ. ಇದಲ್ಲದೆ ಸೂಪರ್ ರೆಟಿನಾ ಎಚ್‌ಡಿಆರ್‌ ಸ್ಕ್ರೀನ್, ಹೊಸದಾದ ಸೆರಾಮಿಕ್ ಶೀಲ್ಡ್–2ನಿಂದ ರಕ್ಷಣೆ ಹೊಂದಿದೆ. ಇದು ಹೆಚ್ಚು ಗಟ್ಟಿಯಾಗಿದ್ದು, ಮೂರು ಪಟ್ಟು ಉತ್ತಮ ಸ್ಕ್ರ್ಯಾಚ್ ನಿರೋಧಕತೆಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಐಫೋನ್ 17 ಮೂಲ ಮಾದರಿ 256 ಜಿಬಿ ಸಂಗ್ರಹಣಾ ಸಾಮರ್ಥ್ಯದಿಂದ ಪ್ರಾರಂಭವಾಗುತ್ತಿದೆ. ಇದು ಹಿಂದಿನ ಮಾದರಿಗಳಿಗಿಂತ ಎರಡು ಪಟ್ಟು ಎಂಟ್ರಿ ಸ್ಟೋರೇಜ್ ಅನ್ನು ಒದಗಿಸುತ್ತದೆ. ಹೊಸ ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾ, ಆಪ್ಟಿಕಲ್-ಗುಣಮಟ್ಟದ 2x ಟೆಲಿಫೋಟೊ ಹೊಂದಿರುವ 48MP ಫ್ಯೂಷನ್ ಕ್ಯಾಮೆರಾ ಮತ್ತು ಮ್ಯಾಕ್ರೊ ಛಾಯಾಗ್ರಹಣವನ್ನು ಬೆಂಬಲಿಸುವ ಹೊಸ 48MP ಫ್ಯೂಷನ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ.

ಐಫೋನ್ 17 ಐದು ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ 799 ಡಾಲರ್‌ನಿಂದ ಪ್ರಾರಂಭವಾಗುತ್ತಿದೆ.

ಐಫೋನ್ 17 ಏರ್

ಐಫೋನ್ 17 ಏರ್ ವಿಶ್ವದ ಅತ್ಯಂತ ತೆಳುವಾದ ಸ್ಲಾಬ್-ಶೈಲಿಯ ಫೋನ್ ಆಗಿದೆ. Galaxy S25 ಎಡ್ಜ್ ಮತ್ತು 5.6ಎಂಎಂ ಫ್ರೇಮ್‌ನೊಂದಿಗೆ 5.8ಎಂಎಂ ಫಾರ್ಮ್ ಫ್ಯಾಕ್ಟರ್ ಹೊಂದಿದೆ.

ಪೋನ್ ಹಿಂಭಾಗವು ಸೆರಾಮಿಕ್ ಶೀಲ್ಡ್ ಅನ್ನು ಹೊಂದಿದೆ, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಇದೆ. ಏರ್ ಮಾದರಿಯು 120Hzವರೆಗಿನ ಪ್ರೋಮೋಷನ್‌ನೊಂದಿಗೆ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಐಫೋನ್ 17 ಏರ್ ಡಿಸ್ಪ್ಲೇ ಗಾತ್ರ 6.5 ಇಂಚುಗಳಿದೆ. ಹೊಸ ತೆಳುವಾದ ಮತ್ತು ತಿಳಿ ಟೈಟಾನಿಯಂ ಐಫೋನ್ A19 Pro, N1 ಮತ್ತು C1X ಚಿಪ್‌ಗಳನ್ನು ಹೊಂದಿದೆ.

ಐಫೋನ್ 17 ಏರ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. ಇದರ ಬೆಲೆ 999 ಡಾಲರ್‌ನಿಂ ಪ್ರಾರಂಭವಾಗುತ್ತಿದೆ.

ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್

(Photo credit: macrumors.com)

ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಆ್ಯಪಲ್ ವಿನ್ಯಾಸಗೊಳಿಸಿದ ವಾಪೌರ್ ಚೇಂಬರ್‌ನೊಂದಿಗೆ ಹೊಸ A19 ಪ್ರೊ ಚಿಪ್ ಅನ್ನು ಹೊಂದಿವೆ. ಎರಡೂ ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಬಾಳಿಕೆಯನ್ನು ಹೊಂದಿವೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ.

ಮುಖ್ಯ ಕ್ಯಾಮೆರಾ ಸೇರಿ ಹಿಂಭಾಗದಲ್ಲಿ ಮೂರು 48MP ಫ್ಯೂಷನ್ ಕ್ಯಾಮೆರಾಗಳನ್ನು ಹೊಂದಿವೆ, ಇದರಲ್ಲಿ ಅಲ್ಟ್ರಾ ವೈಡ್ ಮತ್ತು ಪ್ರೊ ಮಾದರಿಗಳಲ್ಲಿ 8x ಜೂಮ್ ಅನ್ನು ಸಕ್ರಿಯಗೊಳಿಸುವ ಹೊಚ್ಚ ಹೊಸ ಟೆಲಿಫೋಟೊ ಸಹ ಇದೆ. 18MP ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾವನ್ನು ಕೂಡ ಹೊಂದಿವೆ.

ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಚಲನಚಿತ್ರ ನಿರ್ಮಾಪಕರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ನಿರ್ಮಿಸಲಾದ ಇಂಡಸ್ಟ್ರೀ ಫಸ್ಟ್ ವಿಡಿಯೊ ವೈಶಿಷ್ಟ್ಯಗಳನ್ನು ಹೊಂದಿವೆ.

ಐಫೋನ್ 17 ಪ್ರೊ ಬೆಲೆ 1,099 ಡಾಲರ್‌ನಿಂದ ಪ್ರಾರಂಭವಾಗುತ್ತದೆ. ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ 1,199 ಡಾಲರ್‌ನಿಂದ ಪ್ರಾರಂಭವಾಗುತ್ತದೆ.

Leave A Reply

Your email address will not be published.