EBM News Kannada
Leading News Portal in Kannada

ನಮ್ಮ 2047ರ ಗುರಿಗೆ ಭಾರತದ ಡಿಜಿಟಲ್ ಮಿಷನ್ಅತ್ಯಂತ ನಿರ್ಣಾಯಕ

0


ನವ ಭಾರತದ ಪರಿಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯರಲ್ಲಿ ಹೆಚ್ಚಿನ ಪ್ರಮಾಣದ ವಿಶ್ವಾಸ ಮತ್ತು ಆಶಾವಾದದ ಪ್ರೇರಣೆಯನ್ನುಂಟು ಮಾಡಿದೆ. ಜಾಗತಿಕ ಮತ್ತು ಪ್ರಾದೇಶಿಕ ರಾಜಕೀಯ ಚಿತ್ರಣದ ಕುರಿತ ಹಲವು ವಿಷಯಗಳ ಬಗ್ಗೆ ನಾವು ವಿಶ್ವಾಸದಿಂದ ಮತ್ತು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು, ಒಲಿಂಪಿಕ್ಸ್ ಸೇರಿದಂತೆ ಕ್ರೀಡೆಯ ಎಲ್ಲಾ ವಿಭಾಗಗಳಲ್ಲಿ ಅದ್ವೀತಿಯ ಸಾಧನೆಗಳನ್ನು ದಾಖಲು ಮಾಡುತ್ತಿರುವುದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿರುವುದು (ವಿಶ್ವದಲ್ಲೇ ಮೊದಲು) ಸೇರಿದಂತೆ ಕೆಲವು ಆಯಾಮಗಳನ್ನು ಹೆಸರಿಸಬಹುದು, ಅವುಗಳಿಂದಾಗಿ ನವ ಭಾರತ ಅಂತಿಮವಾಗಿ ಉದಯವಾಗುತ್ತಿದೆ ಎಂಬುದನ್ನು ನಂಬಲು ಕಾರಣವಾಗಿದೆ. ಭಾರತದ ಆರ್ಥಿಕ ಪರಿವರ್ತನೆ ಸದ್ಯ ಪ್ರಗತಿಯಲ್ಲಿದೆ, ಕ್ಷಿಪ್ರ ಡಿಜಿಟಲೀಕರಣ ಗಣನೀಯ ಪ್ರಮಾಣದಲ್ಲಿ ಚಾಲ್ತಿಯಲ್ಲಿದ್ದು, ಅದು ನವ ಭಾರತ ಉದಯಿಸುತ್ತಿರುವುದಕ್ಕೆ ಮತ್ತೊಂದು ಪ್ರಕಾಶಿಸುತ್ತಿರುವ ಉದಾಹರಣೆಯಾಗಿದೆ.

ಕೋವಿಡ್ನಿಂದ ಸಂಕಷ್ಟ ಅನುಭವಿಸಿದ ದೇಶಗಳು ಮತ್ತು ಸಂಸ್ಥೆಗಳು ಜಗತ್ತಿನಾದ್ಯಂತ ಡಿಜಿಟಲ್ಗೆ ಪರಿವರ್ತನೆಯಾಗುವ ಮುನ್ನವೇ ಪ್ರಸಕ್ತ ಸರಕಾರ ಡಿಜಿಟಲ್ ಆರ್ಥಿಕತೆಗೆ (ಮತ್ತು ಡಿಜಿಟಲ್ ವಿತರಣಾ ವಿಧಾನಗಳಿಗೆ) ಸಕ್ರಿಯವಾಗಿ ಒತ್ತಾಯಿಸುತ್ತಿದೆ. ಡಿಜಿಟಲ್ ಇಂಡಿಯಾ ಮಿಷನ್ ಅನ್ನು 2015ರಲ್ಲಿಯೇ ಆರಂಭಿಸಲಾಯಿತು ಮತ್ತು ಭಾರತ ಸರಕಾರವು ಸಾರ್ವಜನಿಕ ಸರಕುಗಳ ವಿತರಣೆಯಲ್ಲಿ ಮಾತ್ರವಲ್ಲದೆ ಆರ್ಥಿಕತೆಯ ವಿವಿಧ ಘಟಕಗಳಿಗೆ ವಿಶಿಷ್ಟವಾದ ವೇದಿಕೆಯನ್ನು ನೀಡುವ ಮೂಲಕ ಭಾರತೀಯ ಆರ್ಥಿಕತೆಯ ಬೆಳವಣಿಗೆ ಮತ್ತು ಸಾಮರ್ಥ್ಯ ಸೃಷ್ಟಿಯಲ್ಲಿ ಕ್ರಾಂತಿಯನ್ನು ಮಾಡುವುದನ್ನು ನಾವು ನೋಡಿದ್ದೇವೆ. ಇದು ಕೃಷಿ, ಸಾರಿಗೆ, ಆರೋಗ್ಯ ಮತ್ತು ಶಿಕ್ಷಣದಂತಹ ನಿರ್ಣಾಯಕ ಉದ್ಯಮಗಳಲ್ಲಿ ಹೊಸ ವ್ಯವಹಾರ ಮಾದರಿಗಳಿಗೆ ಕಾರಣವಾಗುತ್ತದೆ ಮತ್ತು ಈ ಎಲ್ಲಾ ವಲಯಗಳಲ್ಲೂ ಮೂಲಭೂತ ಪರಿವರ್ತನೆಗೆ ಒಳಗಾಗುತ್ತಿವೆ. ಈ ಡಿಜಿಟಲೀಕರಣವು ವ್ಯವಸ್ಥೆಯಲ್ಲಿನ ಸೋರಿಕೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಾಂಸ್ಥಿಕ ಆರ್ಥಿಕತೆಯನ್ನು ಸಕ್ರಿಯಗೊಳಿಸುತ್ತದೆ, ಹೆಚ್ಚುತ್ತಿರುವ ಜಿಎಸ್ಟಿ ನೋಂದಣಿಗಳು ಮತ್ತು ಸಂಗ್ರಹಣೆಗಳು ಅದರ ಯಶಸ್ಸಿನ ಉತ್ತಮ ಮಾನದಂಡವಾಗಿ ಕಾರ್ಯನಿರ್ವಹಿಸುತ್ತವೆ.

ವ್ಯಕ್ತಿಗಳು ಮತ್ತು ಉದ್ಯಮಗಳು ಅನುಕೂಲಕ್ಕಾಗಿ, ವೇಗ ಮತ್ತು ದಕ್ಷತೆಗಾಗಿ ಅದನ್ನು ಹತೋಟಿಗೆ ತರುವುದರಿಂದ ಭಾರತದ ಸಾಮರ್ಥ್ಯ ಪಥ ಪರಿವರ್ತಕವಾಗಿ ಬದಲಾಗಲಿದೆ, ಇವುಗಳ ಸಂಯೋಜನೆಯು ವ್ಯಾಪಾರದ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತ (ಮತ್ತು ವಿಶ್ವ) ಡಿಜಿಟಲ್ಗೆ ಸಾಗುತ್ತಿದ್ದಂತೆ, ಅದರ ಆಧಾರವಾಗಿರುವ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು ಕೈಗಾರಿಕಾ ಕ್ರಾಂತಿಯ ನಂತರ ರೈಲು ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸಿದಷ್ಟೇ ಪರಿಣಾಮವನ್ನು ಬೀರುತ್ತವೆ. ಇದು ಆರ್ಥಿಕತೆಯ ವಿವಿಧ ಕ್ಷೇತ್ರಗಳ ಮೇಲೆ ಗಂಭೀರ ಮತ್ತು ಗಾಢ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ನಾಗರಿಕರಿಗೆ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ. ಜನ ಧನ್ ಯೋಜನೆ, ಕೋವಿನ್, ಯುಪಿಐ ಮತ್ತು ಒಎನ್ಡಿಸಿ ಮತ್ತಿತರರು ಡಿಜಿಟಲ್ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಉದಾಹರಣೆಗಳಾಗಿವೆ. ವಿಶಾಲ ಆರ್ಥಿಕ ಪೂರಕ ವ್ಯವಸ್ಥೆಯಲ್ಲಿನ ಹಣಕಾಸು ಸಂಸ್ಥೆಗಳು ಬಹುಶಃ ಭಾರತದ ಸಾಮರ್ಥ್ಯವನ್ನು ಹಣಕಾಸು ಸೇರ್ಪಡೆಯಲ್ಲಿ ಸದೃಢವಾಗಿ ಅಳವಡಿಸಿಕೊಂಡಿವೆ ಮತ್ತು ಹಣಕಾಸಿನ ಉತ್ಪನ್ನಗಳ ಅಳವಡಿಕೆಯಲ್ಲಿ ಗಮನಾರ್ಹವಾದ ಸುಲಭವಾಗಿಸಿದೆ. ಉದಾಹರಣೆಗೆ, ಪ್ರಧಾನ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳು 3-ಪಟ್ಟು ಅಂದರೆ 2015ರ ಮಾರ್ಚ್ 1ರಲ್ಲಿ 147.2 ಮಿಲಿಯನ್ನಿಂದ 2022 ಆಗಸ್ಟ್ನಲ್ಲಿ 462.5 ಮಿಲಿಯನ್ ಹೆಚ್ಚಾಗಿವೆ. ಇದು ಬ್ಯಾಂಕ್ ವ್ಯಾಪ್ತಿಗೆ ಒಳಪಡದ ಬಹು ದೊಡ್ಡ ಜನಸಂಖ್ಯೆಯ ಭಾಗವನ್ನು ಒಳಗೊಂಡಿದೆ.

ಈ ಡಿಜಿಟಲೀಕರಣದಿಂದಾಗಿ ವ್ಯಾಪಕ ಪ್ರಮಾಣದ ಅವಕಾಶಗಳು ಲಭ್ಯವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ವಿಶೇಷವಾಗಿ ಬಿ ಟು ಸಿ (ಬ್ಯುಸಿನೆಸ್ ಟು ಕಾಮರ್ಸ್) ವಲಯದಲ್ಲಿ ಸೇರಿದಂತೆ ಭಾರತೀಯ ಉದ್ಯಮ ವಲಯದಲ್ಲಿ ವ್ಯಾಪಕ ರೀತಿಯಲ್ಲಿ ಬಳಕೆಯಲ್ಲಿರುವುದು ಭಾರತೀಯ ನಾಗರಿಕರಿಗೆ ಅತ್ಯಧಿಕ ಪ್ರಯೋಜನಗಳನ್ನು ಕಲ್ಪಿಸಿದೆ. ವಾಸ್ತವವಾಗಿ, ಡಿಜಿಟಲ್ಗಾಗಿ ಸರಕಾರದ ಉತ್ತೇಜನವು ಎಷ್ಟು ಒತ್ತಡವಾಗಿದೆಯೆಂದರೆ, ಭಾರತದಲ್ಲಿ ಇತ್ತೀಚಿನ ‘ಡಿಜಿಟಲ್ ವ್ಯವಹಾರ ಸಮೀಕ್ಷೆ’ (ಆಗಸ್ಟ್ 2023)ಯಲ್ಲಿ, ಶೇ. 25ರಷ್ಟು ಮಧ್ಯಮ-ದೊಡ್ಡ ಉದ್ಯಮಗಳು ಡಿಜಿಟಲೀಕರಣದತ್ತ ಸಾಗಲು, ಡಿಜಿಟಲ್ ವ್ಯವಹಾರ ಮಾದರಿಯನ್ನು ಅಳವಡಿಸಿಕೊಳ್ಳಲು ಸರಕಾರದ ಒತ್ತಡವು ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ಐಡಿಸಿಯಲ್ಲಿ ಡಿಜಿಟಲ್ ವಹಿವಾಟನ್ನು ವ್ಯಾಖ್ಯಾನಿಸಲಾಗುತ್ತಿದೆ, ಅದರಲ್ಲಿ ಮೌಲ್ಯ ಸೃಷ್ಟಿ ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿದರೆ, ಅವುಗಳಲ್ಲಿ ಆಂತರಿಕ ಮತ್ತು ಬಾಹ್ಯ ಪ್ರಕ್ರಿಯೆಗಳು, ಎಷ್ಟು ಸಂಸ್ಥೆಗಳು ಗ್ರಾಹಕರು, ಪ್ರಜೆಗಳು, ಪೂರೈಕೆದಾರರು ಮತ್ತು ಪಾಲುದಾರರೊಂದಿಗೆ ತೊಡಗಿಸಿಕೊಂಡಿವೆ ಎಂಬುದು, ಅದು ಹೇಗೆ ಆಕರ್ಷಿಸುತ್ತದೆ, ನಿರ್ವಹಿಸುತ್ತದೆ ಮತ್ತು ಸಿಬ್ಬಂದಿಯನ್ನು ಉಳಿಸಿಕೊಳ್ಳುತ್ತದೆ ಮತ್ತು ಅದು ಯಾವ ಬಗೆಯ ಉತ್ಪನ್ನಗಳು, ಸೇವೆಗಳು ಮತ್ತು ಅನುಭವವನ್ನು ನೀಡುತ್ತದೆ ಎಂಬುದು ಮುಖ್ಯವಾಗುತ್ತದೆ.

ನಮ್ಮ ಬಲಿಷ್ಠ ಡೆವಲಪರ್ ಸಮುದಾಯ ಮತ್ತು ಐಟಿ ಸೇವೆಗಳಲ್ಲಿರುವ ಸಾಂಪ್ರದಾಯಿಕ ಸಾಮರ್ಥ್ಯದಿಂದಾಗಿ ಭಾರತೀಯ ಉದ್ಯಮಗಳು ಡಿಜಿಟಲ್ ಅಳವಡಿಕೆಯಲ್ಲಿ ಜಾಗತಿಕ ಗೆಳೆಯರನ್ನು ಗಮನಾರ್ಹವಾಗಿ ಹಿಂದೆ ಬಿಟ್ಟಿಲ್ಲ ಎಂಬುದು ಪ್ರೋತ್ಸಾಹದಾಯಕವಾಗಿದೆ. ಐಡಿಸಿಯ ಡಿಜಿಟಲ್ ಬ್ಯುಸಿನೆಸ್ ಸಮೀಕ್ಷೆಯು, ಸಿಇಒಗಳು ಇಂದು ಮೂರನೇ ಒಂದು ಭಾಗದಷ್ಟು ಭಾರತೀಯ ಕಂಪೆನಿಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ನಡೆಸುತ್ತಿದ್ದಾರೆ ಎಂದು ಸೂಚಿಸುತ್ತದೆ.

ಆದರೆ ಇನ್ನೂ ಶೇ. 25ಕ್ಕೂ ಅಧಿಕ ಉದ್ಯಮಗಳು ಡಿಜಿಟಲ್ ಕಾರ್ಯಸೂಚಿಯನ್ನು ಮುನ್ನಡೆಸಲು ಕಳೆದ 2 ವರ್ಷಗಳಲ್ಲಿ ಮುಖ್ಯ ಡಿಜಿಟಲ್ ಅಧಿಕಾರಿ/ಮುಖ್ಯ ಡೇಟಾ ಅಧಿಕಾರಿಯಂತಹ ಹೊಸ ಪದನಾಮಗಳನ್ನು ಸೃಷ್ಟಿಸಿವೆ. ಡಿಜಿಟಲ್ ವ್ಯವಹಾರ ವಿಧಾನಗಳು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ತ್ವರಿತ ನಿರ್ಧಾರ ಕೈಗೊಳ್ಳುವುದನ್ನು ಸಕ್ರಿಯಗೊಳಿಸುತ್ತದೆ, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವುದನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮುಖ್ಯವಾಗಿ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂಬುದನ್ನು ಉದ್ಯಮಗಳು ಅರಿತುಕೊಂಡಿವೆ. ಈ ಡಿಜಿಟಲ್ ಸ್ಪರ್ಶವು ಕೇವಲ ಉದ್ಯಮಗಳ ಸಂರಕ್ಷಣೆಗೆ ಮಾತ್ರವಲ್ಲ, ಭಾರತೀಯ ಗ್ರಾಹಕರು ಸಹ ಇದನ್ನು ಅತ್ಯುತ್ಸಾಹದಿಂದ ಅಳವಡಿಸಿಕೊಂಡಿದ್ದಾರೆ. 850 ಮಿಲಿಯನ್ ಅಂತರ್ಜಾಲ ಚಂದಾದಾರರು, 1.1 ಬಿಲಿಯನ್ ಮೊಬೈಲ್ ಚಂದಾದಾರರು, ಅವರಲ್ಲಿ 630ಕ್ಕೂ ಅಧಿಕ ಮಿಲಿಯನ್ ಜನರು ಸ್ಮಾರ್ಟ್ಫೋನ್ ಬಳಕೆದಾರರು, 398 ಮಿಲಿಯನ್ ಜನರು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತವು ಈಗಾಗಲೇ ಜನರ ಜತೆ ಸಂಪರ್ಕವನ್ನು ಹೊಂದಿದೆ. ಈ ಸಂಪರ್ಕ ಹೊಂದಿರುವ ಜನಸಂಖ್ಯೆಯು ಡಿಜಿಟಲ್ ಅನ್ನು ಅಳವಡಿಸಿಕೊಳ್ಳುತ್ತಿದೆ – ಡಿಜಿಲಾಕರ್ 137 ಮಿಲಿಯನ್ಗಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ, ಯುಪಿಐ 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು ಕೋವಿನ್ 1.1 ಬಿಲಿಯನ್ ವ್ಯಕ್ತಿಗಳನ್ನು ನೋಂದಾಯಿಸಿದೆ.

ಉದ್ಯಮಗಳು ಮತ್ತು ಗ್ರಾಹಕರು ಡಿಜಿಟಲ್ ಅನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದರೊಂದಿಗೆ ಭಾರತವು ಡಿಜಿಟಲ್ಗೆ ಬದಲಾಗುತ್ತಿರುವುದು ವಾಸ್ತವವಾಗಿದೆ, ಬದಲಾಯಿಸಲಾಗುತ್ತಿದೆ ಮತ್ತು ಅದು ವ್ಯಾಪಕವಾಗಿದೆ ಎಂಬುದು ಸ್ಪಷ್ಟವಾಗಿದೆ. ಡಿಜಿಟಲ್ ಆರ್ಥಿಕತೆಯು 2026ರ ವೇಳೆಗೆ ಭಾರತದ ಜಿಡಿಪಿಯ ಶೇ. 20ರಷ್ಟು ಕೊಡುಗೆ ನೀಡಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಖಾತೆಯ ಗೌರವಾನ್ವಿತ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಇತ್ತೀಚೆಗೆ ಹೇಳಿದ್ದಾರೆ. ಐಡಿಸಿ ಸಂಶೋಧನೆಯು ಭಾರತದ ಡಿಜಿಟಲ್ ಸಂಭವನೀಯತೆಗಳ ಬಗ್ಗೆ ಏರುಮುಖಿಯಾಗಿದೆ – ಎರಡು ವರ್ಷಗಳ ಹಿಂದೆ, ಶೇ.34.8 ರಷ್ಟು ಭಾರತೀಯ ವ್ಯವಹಾರಗಳು ಅವರ ಆದಾಯದ ಶೇ. 50ರಷ್ಟು ಅಥವಾ ಹೆಚ್ಚಿನವು ಡಿಜಿಟಲ್ ವ್ಯವಹಾರ ಮಾದರಿಗಳಿಂದ ಮಾಡಿದ್ದವು. ಇಂದು, ಆ ಸಂಖ್ಯೆ ಶೇ. 50ರಷ್ಟು ಮತ್ತು 3 ವರ್ಷಗಳಲ್ಲಿ ಐಡಿಸಿ ಶೇ.62ರಷ್ಟು ಭಾರತೀಯ ಉದ್ಯಮಗಳು ತಮ್ಮ ಆದಾಯದ ಶೇ. 50 ಕ್ಕಿಂತ ಅಧಿಕ ಡಿಜಿಟಲ್ ವ್ಯವಹಾರ ಮಾದರಿಗಳಿಂದ ಪಡೆಯಬೇಕೆಂದು ನಿರೀಕ್ಷಿಸುತ್ತದೆ. ಈ ಎಲ್ಲಾ ಕಾರಣಗಳಿಂದಿದಾಗಿ ಡಿಜಿಟಲ್ ವಲಯದಲ್ಲಿ ನವ ಭಾರತದ ಭವಿಷ್ಯವು ಮತ್ತಷ್ಟು ಉಜ್ವಲವಾಗಿದೆ.. !

ಲೇಖನದ ಮೂಲ

1. https://www.pib.gov.in/PressReleasePage.aspx?PRID=1854909

2. PR_No.08of2023.pdf (trai.gov.in)

3. Forbes Advisor. https://www.forbes.com/advisor/in/business/social-media-statistics/#:~:text=Active Social Media Penetration in,of the country’s entire population.

4. https://pib.gov.in/PressReleaseIframePage.aspx?PRID=1885962

5. IDC Research

Leave A Reply

Your email address will not be published.