EBM News Kannada
Leading News Portal in Kannada

ಥೇಟ್ ವಾಟ್ಸ್​ಆ್ಯಪ್ ರೀತಿಯ ಹೊಸ ಆ್ಯಪ್ ಬಿಡುಗಡೆ ಮಾಡಿದ ಪಾಕಿಸ್ತಾನ: ಯಾವುದು?, ಏನು ಫೀಚರ್ಸ್ ಇದೆ? – Kannada News | Pakistan has launched Beep Pakistan App its own alternative to WhatsApp

0


Beep Pakistan App: ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ. ಇದು ಆಡಿಯೋ ಅಥವಾ ವಿಡಿಯೋ ಸೋರಿಕೆಯಾಗುವ ಅಪಾಯವನ್ನು ನಿವಾರಿಸುತ್ತದೆ.

ಥೇಟ್ ವಾಟ್ಸ್​ಆ್ಯಪ್ ರೀತಿಯ ಹೊಸ ಆ್ಯಪ್ ಬಿಡುಗಡೆ ಮಾಡಿದ ಪಾಕಿಸ್ತಾನ: ಯಾವುದು?, ಏನು ಫೀಚರ್ಸ್ ಇದೆ?

Beep Pakistan vs WhatsApp

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ಗೆ (WhatsApp) ಸೆಡ್ಡು ಹೊಡೆಯುವಂತಹ ಆ್ಯಪ್ ಒಂದನ್ನು ಪಾಕಿಸ್ತಾನ ತನ್ನ ದೇಶದಲ್ಲಿ ಬಿಡುಗಡೆ ಮಾಡಿದೆ. ವಾಟ್ಸ್​ಆ್ಯಪ್ ಪ್ರತಿಸ್ಪರ್ಧಿಯ ಹೆಸರನ್ನು ಪಾಕ್ ದೇಶ ಬೀಪ್ ಪಾಕಿಸ್ತಾನ್ ಎಂದು ಹೆಸರಿಸಿದೆ. ‘ಬೀಪ್ ಪಾಕಿಸ್ತಾನ್’ (Beep Pakistan) ಅಪ್ಲಿಕೇಶನ್ ಅನ್ನು ಪಾಕಿಸ್ತಾನದ ಐಟಿ ಸಚಿವಾಲಯವು ದೇಶದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ (ಎನ್‌ಐಟಿಬಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. “ಈ ದಿನವು ಪಾಕಿಸ್ತಾನದ ಐಟಿ ಉದ್ಯಮಕ್ಕೆ ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ. ನಾವು ದೇಶದ ಮೊದಲ ಸಂವಹನ ಅಪ್ಲಿಕೇಶನ್‌ ಆಗಿರುವ ಬೀಪ್ ಪಾಕಿಸ್ತಾನವನ್ನು 30 ದಿನಗಳ ಪ್ರಾಯೋಗಿಕ ಚಾಲನೆಯಲ್ಲಿ ಪ್ರಾರಂಭಿಸುತ್ತಿದ್ದೇವೆ” ಎಂದು ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಐಟಿ ಸಚಿವ ಅಮಿನುಲ್ ಹಕ್ ಹೇಳಿದ್ದಾರೆ.

ಪಾಕಿಸ್ತಾನದ ಐಟಿ ಸಚಿವರ ಪ್ರಕಾರ, ಸೈಬರ್‌ ಅಟಾಕ್‌ಗಳನ್ನು ತಗ್ಗಿಸುವುದು ಆ ಅಪ್ಲಿಕೇಶನ್​ನ ಗುರಿಯಾಗಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ. ಇದು ಆಡಿಯೋ ಅಥವಾ ವಿಡಿಯೋ ಸೋರಿಕೆಯಾಗುವ ಅಪಾಯವನ್ನು ನಿವಾರಿಸುತ್ತದೆ. ಈ ಅಪ್ಲಿಕೇಶನ್‌ನ ದೊಡ್ಡ ಪ್ರಯೋಜನವೆಂದರೆ ಇದು 100% ಸುರಕ್ಷಿತವಾಗಿದೆ, ಏಕೆಂದರೆ ಅದರ ಸರ್ವರ್ ಮತ್ತು ಮೂಲ ಕೋಡ್ ಪಾಕಿಸ್ತಾನದಲ್ಲಿರುತ್ತದೆ” ಎಂದು ಪಾಕಿಸ್ತಾನದ ಐಟಿ ಸಚಿವರು ಹೇಳಿದ್ದಾರೆ.

Flipkart Big Saving Days: ವಿಶೇಷ ಆಫರ್ ಸೇಲ್ ನಡೆಸುತ್ತಿದೆ ಫ್ಲಿಪ್​ಕಾರ್ಟ್, ಇಲ್ಲಿದೆ ಡೀಟೇಲ್ಸ್!

ಇದನ್ನೂ ಓದಿ

ಆ್ಯಪ್ ಪ್ರಸ್ತುತ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಲಭ್ಯ:

ಮೊದಲ ಹಂತದಲ್ಲಿ, ಪಾಕಿಸ್ತಾನದ IT ಮತ್ತು ಸಂವಹನ ಸಚಿವಾಲಯ ಮತ್ತು NITB (ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ) ನಡುವಿನ ಆಂತರಿಕ ಸಂವಹನಕ್ಕಾಗಿ ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಎರಡನೇ ಹಂತದಲ್ಲಿ, ಆ್ಯಪ್ ಅನ್ನು ಕ್ರಮೇಣ ಇತರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ವಿಸ್ತರಿಸಲಾಗುವುದು. ಮೂರನೇ ಹಂತದಲ್ಲಿ ಆ್ಯಪ್ ಪಾಕಿಸ್ತಾನದಾದ್ಯಂತ ಜನಸಾಮಾನ್ಯರಿಗೆ ಲಭ್ಯವಾಗಲಿದೆ.

ಈ ವರ್ಷದ ಅಂತ್ಯದ ವೇಳೆಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯ:

ಪಾಕಿಸ್ತಾನದ ಐಟಿ ಸಚಿವಾಲಯವು ಈ ವರ್ಷದ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಅಪ್ಲಿಕೇಶನ್ ಅನ್ನು ಹೊರತರುವ ಗುರಿಯನ್ನು ಹೊಂದಿದೆ. ಆ್ಯಪ್ ಕ್ರಮೇಣ ದೇಶಾದ್ಯಂತ ವಾಟ್ಸ್​ಆ್ಯಪ್​ಗೆ ಪರ್ಯಾಯವಾಗಲಿದೆ ಎಂದು ಪಾಕಿಸ್ತಾನದ ಐಟಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ‘ಬೀಪ್ ಪಾಕಿಸ್ತಾನ್’ ಅಪ್ಲಿಕೇಶನ್ ಈ ವರ್ಷದ ಕೊನೆಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ರಾಷ್ಟ್ರವ್ಯಾಪಿ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್‌ನ ಪ್ರಮುಖ ಲಕ್ಷಣಗಳು:

‘ಬೀಪ್ ಪಾಕಿಸ್ತಾನ್’ ಚಾಟ್ ಅಪ್ಲಿಕೇಶನ್ ವೈಶಿಷ್ಟ್ಯಗಳು ಆಡಿಯೋ ಮತ್ತು ವಿಡಿಯೊ ಕರೆಗಳಿಗೆ ಬೆಂಬಲವನ್ನು ಒಳಗೊಂಡಿವೆ. ಇದರಲ್ಲಿ ತ್ವರಿತ ಸಂದೇಶಗಳನ್ನು ಕಳುಹಿಸುಸಬಹುದು. ಈ ಯೋಜನೆಯು 2020 ರಲ್ಲಿ ಪ್ರಾರಂಭವಾಗಿದೆ. ಉಳಿದಂತೆ ವಾಟ್ಸ್​ಆ್ಯಪ್​ನಲ್ಲಿರುವ ಎಲ್ಲ ಫೀಚರ್ಸ್ ಇದರಲ್ಲೂ ಇರಲಿದೆ ಎಂದು ಹೇಳಲಾಗಿದೆ. ಇನ್ನು ಈ ಆ್ಯಪ್ ಪಾಕಿಸ್ತಾನದ ಹೊರಗೆ ಲಭ್ಯವಾಗುವ ಬಗ್ಗೆ ಸರ್ಕಾರ ಖಚಿತ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಅಪ್ಲಿಕೇಶನ್ ದೇಶದ ಹೊರಗೆ ಪ್ರಾರಂಭವಾಗದಿರುವ ಸಾಧ್ಯತೆಯಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್‌ಗಾಗಿ ಕೆಲವು ಆಂಡ್ರಾಯ್ಡ್ APK ಫೈಲ್‌ಗಳು ಲಭ್ಯವಿದೆ.

Published On – 12:14 pm, Thu, 10 August 23

ತಾಜಾ ಸುದ್ದಿ

Leave A Reply

Your email address will not be published.