ಭಾರತದಲ್ಲಿ ಒಪ್ಪೋ A58 ಸ್ಮಾರ್ಟ್ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ ಬಂಪರ್ ಫೋನ್ – Kannada News | Oppo A58 4G was launched in India with 50MP Camera and 33W wired SuperVOOC fast charging support
Oppo A58 4G: ಒಪ್ಪೋ A58 4ಜಿ ಸ್ಮಾರ್ಟ್ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 6GB RAM + 128GB ರೂಪಾಂತರಕ್ಕೆ ಕೇವಲ 14,999 ರೂ. ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಮೊಬೈಲ್ (Mobile) ಲಾಂಚ್ ಮಾಡುತ್ತಿರುವ ಒಪ್ಪೋ ಇದೀಗ ಅಂತಹದೆ ಫೋನಿನೊಂದಿಗೆ ಮತ್ತೆ ಬಂದಿದೆ. ಇಂದು ದೇಶದಲ್ಲಿ ಒಪ್ಪೋ ಎ58 4ಜಿ (Oppo A58 4G) ಸ್ಮಾರ್ಟ್ಫೋನ್ ಅನಾವರಣಗೊಂಡಿದೆ. ಇದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ವೇಗದ ಚಾರ್ಜಿಂಗ್ ಬೆಂಬಲ, ಬಲಿಷ್ಠ ಪ್ರೊಸೆಸರ್ ಆಯ್ಕೆ ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಒಪ್ಪೋ A58 ಬೆಲೆ ಎಷ್ಟು?:
ಒಪ್ಪೋ A58 4ಜಿ ಸ್ಮಾರ್ಟ್ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 6GB RAM + 128GB ರೂಪಾಂತರಕ್ಕೆ ಕೇವಲ 14,999 ರೂ. ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಸೇಲ್ ಕಾಣುತ್ತಿದೆ. ನೀವು ICICI, HDFC, ಮತ್ತು ಕೋಟಕ್ ಬ್ಯಾಂಕ್ ಸೇರಿದಂತೆ ಆಯ್ದ ಬ್ಯಾಂಕ್ಗಳ ಕಾರ್ಡ್ ಮೂಲಕ ಪಡೆದುಕೊಂಡರೆ ಹೆಚ್ಚುವರಿ ರಿಯಾಯಿತಿಗಳು ಮತ್ತು ಇತರ ಕೊಡುಗೆಗಳನ್ನು ಪಡೆಯಬಹುದು.
ಬಜೆಟ್ ಪ್ರಿಯರು ಗಮನಿಸಿ: ಇಂದಿನಿಂದ ಮಾರಾಟ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ಮೋಟೋ G14 ಫೋನ್
ಒಪ್ಪೋ A58 4G ಫೀಚರ್ಸ್:
ಈ ಫೋನ್ 90Hz ನ ರಿಫ್ರೆಶ್ ದರದೊಂದಿಗೆ 6.72-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್ಗಳು) ಡಿಸ್ಪ್ಲೇಯನ್ನು ಹೊಂದಿದೆ. G52 MC2 GPU ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಇಂಡೋನೇಷಿಯನ್ ಪ್ರತಿರೂಪದಂತೆಯೇ, ಇದು Android 13-ಆಧಾರಿತ ColorOS 13.1 ನೊಂದಿಗೆ ರನ್ ಆಗುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ ಹಿಂಬದಿ ಡ್ಯುಯಲ್ ಕ್ಯಾಮೆರಾ ಘಟಕವಿದ್ದು 2-ಮೆಗಾಪಿಕ್ಸೆಲ್ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಹಿಂಭಾಗದ ಕ್ಯಾಮೆರಾ ಜೊತೆ ಎಲ್ಇಡಿ ಫ್ಲ್ಯಾಷ್ ಜೋಡಿಸಲಾಗಿದೆ.
ಒಪ್ಪೋ A58 4G 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಫೋನ್ 5ಜಿ ಆಯ್ಕೆ ಪಡೆದುಕೊಂಡಿಲ್ಲ. ಬ್ಲೂಟೂತ್ v5.3, 4G, NFC, GPS ಮತ್ತು USB ಟೈಪ್-ಸಿ ಸಂಪರ್ಕವನ್ನು ನೀಡುತ್ತದೆ.