Ultimate magazine theme for WordPress.

15 ದಿನದಲ್ಲಿ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಬೇಕು- ಸುಪ್ರೀಂಕೋರ್ಟ್

0

ದೆಹಲಿ, ಜೂನ್ 5: ಕೊರೊನಾ ವೈರಸ್ ಲಾಕ್‌ಡೌನ್‌ ಜಾರಿಯಾದ ಬಳಿಕ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ದೇಶದ ಪ್ರಮುಖ ನಗರಗಳಿಗೆ ವಲಸೆ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರು ಈಗ ಸ್ವಂತ ಊರುಗಳಿಗೆ ವಾಪಸ್ ಹೋಗಿದ್ದಾರೆ. ಇದರಿಂದ ಕೈಗಾರಿಕೆ, ಕಂಪನಿ ಹಾಗೂ ಇನ್ನಿತರ ಕಚೇರಿಗಳು ಬಂದ್ ಆಗಿದ್ದವು.

ಲಾಕ್‌ಡೌನ್‌ನಿಂದ ಕಂಪನಿಗಳು, ಗಾರ್ಮೆಂಟ್ಸ್, ಕೈಗಾರಿಕೆಗಳು ನಷ್ಟ ಅನುಭವಿಸಿದ ಹಿನ್ನೆಲೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆಗಳು ವರದಿಯಾಗಿದೆ.

ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಸ್ವ-ಇಚ್ಛೆಯಿಂದ ಈ ಬಗ್ಗೆ ಸರ್ಕಾರದ ಬಳಿ ಮಾಹಿತಿ ಕೇಳಿತ್ತು. ”ಕಾರ್ಮಿಕರ ಸಾಗಣೆ ಪ್ರಕ್ರಿಯೆ ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ. 15 ದಿನದಲ್ಲಿ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಿಕೊಡಿ” ಎಂದು ರಾಜ್ಯಗಳಿಗೆ ಸುಪ್ರೀಂಕೋರ್ಟ್ ತಿಳಿಸಿದೆ. ಜೊತೆಗೆ ಊರುಗಳಿಗೆ ವಾಪಸ್ ಆಗಿರುವ ”ವಲಸೆ ಕಾರ್ಮಿಕರಿಗೆ ಉದ್ಯೋಗಗಳನ್ನು ಸೃಷ್ಟಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ದೇಶಾದ್ಯಂತ ಸುಮಾರು 1 ಕೋಟಿ ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಗಿದೆ. ಇದಕ್ಕಾಗಿ ಜೂನ್ 3ನೇ ತಾರೀಕಿನವರೆಗೂ 4200ಕ್ಕೂ ಹೆಚ್ಚು ಶ್ರಮಿಕ್ ರೈಲು ಸಂಚರಿಸಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

Leave A Reply

Your email address will not be published.