EBM News Kannada
Leading News Portal in Kannada

ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಸರ್ಫರಾಜ್ ಕೊರೋನಾ ವೈರಸ್​ಗೆ ಬಲಿ

0

ಪಾಕಿಸ್ತಾನ ಪ್ರಥಮ ದರ್ಜೆ ಕ್ರಿಕೆಟ್​ನ ಪ್ರಮುಖ ಮಾಜಿ ಆಟಗಾರ ಜಾಫರ್ ಸರ್ಫರಾಜ್ ಮಾರಕ ಕೊರೋನಾ ವೈರಸ್​ನಿಂದಾಗಿ ಸಾವನ್ನಪ್ಪಿದ್ದಾರೆ. 50 ವರ್ಷ ಪ್ರಾಯದ ಸರ್ಫರಾಜ್ ಅವರನ್ನು ಪೇಶಾವರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ವೆಂಟಲೇಷನ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

1988 ರಲ್ಲಿ ತನ್ನ ಕ್ರಿಕೆಟ್ ಜೀವನ ಆರಂಭಿಸಿದ ಸರ್ಫರಾಜ್ 15 ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 616 ರನ್ ಗಳಿಸಿದ್ದರು. ಆರು ಏಕದಿನ ಪಂದ್ಯದಲ್ಲಿ 96 ರನ್ ಕಲೆಹಾಕಿದ್ದರು. 1994 ರಲ್ಲಿ ಇವರು ನಿವೃತ್ತಿ ಘೋಷಿಸಿದ್ದರು.

2000 ಇಸವಿಯಲ್ಲಿ ಸರ್ಫರಾಜ್ ಅವರು ಪಾಕಿಸ್ತಾನ ಹಾಗೂ ಪಾಕ್ ಅಂಡರ್-19 ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಅಖ್ತರ್ ಸರ್ಫರಾಜ್ ಅವರ ಸಹೋದರ ಜಾಫರ್ ಆಗಿದ್ದಾರೆ.

ಪಾಕಿಸ್ತಾನದಲ್ಲೂ ಕೊರೋನಾ ವೈರಸ್ ಹಾವಳಿ ಜೋರಾಗಿಯೇ ಇದೆ. 5,500 ಜನರಿಗೆ ಸೋಂಕು ತಗುಲಿದ್ದು, ಸುಮಾರು 100 ಜನ ಸಾವನ್ನಪ್ಪಿದ್ದಾರೆ.

ಇಡೀ ವಿಶ್ವದಲ್ಲಿ 19.23 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 1.19 ಲಕ್ಷ ಮಂದಿ ಅಸುನೀಗಿದ್ದಾರೆ. ಕೊರೋನಾ ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ. ಈಗಾಗಲೇ 23 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 5.86 ಲಕ್ಷ ದಾಟಿದೆ.

ಮಾರಕ ಕೋವಿಡ್​​-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 50 ಮಂದಿ ಈ ಕೊರೋನಾಗೆ ಬಲಿಯಾಗಿದ್ದಾರೆ. ಜತೆಗೆ ಸುಮಾರು 796 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮೃತರ ಸಂಖ್ಯೆ 324 ಮತ್ತು ಸೋಂಕಿತರ ಸಂಖ್ಯೆ 9300ರ ಗಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Leave A Reply

Your email address will not be published.