EBM News Kannada
Leading News Portal in Kannada

Brian Lara: ಟೆಸ್ಟ್ ಮ್ಯಾರಥಾನ್ ಇನ್ನಿಂಗ್ಸ್​ಗೆ 16 ವರ್ಷ..!; ಹೇಗಿತ್ತು ಗೊತ್ತಾ ಲಾರಾ ದಾಖಲೆಯ ಆಟ?

0

ಅದು 2004ರ ಏಪ್ರಿಲ್ 12, ಆಂಟಿಗುವಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ವಿಂಡೀಸ್ ತಂಡದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​​​ ಬ್ರಿಯಾನ್ ಲಾರಾ ಈ ಪಂದ್ಯವನ್ನು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅವಿಸ್ಮರಣೀಯವಾಗಿಸಿದರು. ಅಂದಹಾಗೆ ಲಾರಾರ ಮ್ಯಾರಥಾನ್ 400 ರನ್ ಬಂದಿದ್ದು ಇದೇ ಪಂದ್ಯದಲ್ಲಿ, ಈ ಇನ್ನಿಂಗ್ಸ್​ಗೆ ಇಂದು ಹದಿನಾರು ವರ್ಷದ ಸಂಭ್ರಮ!.

ಮೊದಲ ದಿನದಂತ್ಯಕ್ಕೆ ಲಾರಾ ಗಳಿಕೆ ಕೇವಲ 36, ಆದರೆ ಎರಡನೇ ದಿನ ಮುಗಿಯುವ ವೇಳೆಗೆ 300ರ ಗಡಿ ದಾಟಿದ ಲಾರಾ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು. ಮೂರನೇ ದಿನ ಭೋಜನ ವಿರಾಮದ ವೇಳೆಗೆ ಲಾರಾ ಗಳಿಕೆ ಭರ್ತಿ 400. ಈ ಸುದೀರ್ಘ ಇನ್ನಿಂಗ್ಸ್​ನ ಅಲ್ಲಲ್ಲಿ ಲೆಗ್ ಬಿಫೋರ್ ಹಾಗೂ ರನೌಟ್​​ನಿಂದ ಲಾರಾ ಪಾರಾಗಿದ್ದರು.

ಹೋಮ್ » ನ್ಯೂಸ್ » ಕ್ರೀಡೆ
Brian Lara: ಟೆಸ್ಟ್ ಮ್ಯಾರಥಾನ್ ಇನ್ನಿಂಗ್ಸ್​ಗೆ 16 ವರ್ಷ..!; ಹೇಗಿತ್ತು ಗೊತ್ತಾ ಲಾರಾ ದಾಖಲೆಯ ಆಟ?
Brian Lara 400: ಲಾರಾ ದಾಖಲೆಯ 400 ರನ್ ಗಳಿಸಿದ್ದು ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ. ಹಿಂದಿನ ಮೂರೂ ಪಂದ್ಯದಲ್ಲಿ ಲಾರಾ ಬ್ಯಾಟ್​​ನಿಂದ 36ಕ್ಕಿಂತ ಹೆಚ್ಚು ರನ್ ಬಂದಿರಲಿಲ್ಲ. ಮೂರು ಟೆಸ್ಟ್ ಹಾಗೂ ಆರು ಇನ್ನಿಂಗ್ಸ್​​ನಿಂದ ದಾಖಲಾಗಿದ್ದು ಕೇವಲ 100 ರನ್..!
Brian Lara: ಟೆಸ್ಟ್ ಮ್ಯಾರಥಾನ್ ಇನ್ನಿಂಗ್ಸ್​ಗೆ 16 ವರ್ಷ..!; ಹೇಗಿತ್ತು ಗೊತ್ತಾ ಲಾರಾ ದಾಖಲೆಯ ಆಟ?ಬ್ರಿಯಾನ್ ಲಾರಾ.
NEWS18 KANNADA
LAST UPDATED: APRIL 12, 2020, 3:28 PM IST
SHARE THIS:

ಅದು 2004ರ ಏಪ್ರಿಲ್ 12, ಆಂಟಿಗುವಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ವಿಂಡೀಸ್ ತಂಡದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​​​ ಬ್ರಿಯಾನ್ ಲಾರಾ ಈ ಪಂದ್ಯವನ್ನು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅವಿಸ್ಮರಣೀಯವಾಗಿಸಿದರು. ಅಂದಹಾಗೆ ಲಾರಾರ ಮ್ಯಾರಥಾನ್ 400 ರನ್ ಬಂದಿದ್ದು ಇದೇ ಪಂದ್ಯದಲ್ಲಿ, ಈ ಇನ್ನಿಂಗ್ಸ್​ಗೆ ಇಂದು ಹದಿನಾರು ವರ್ಷದ ಸಂಭ್ರಮ!.

ಮೊದಲ ದಿನದಂತ್ಯಕ್ಕೆ ಲಾರಾ ಗಳಿಕೆ ಕೇವಲ 36, ಆದರೆ ಎರಡನೇ ದಿನ ಮುಗಿಯುವ ವೇಳೆಗೆ 300ರ ಗಡಿ ದಾಟಿದ ಲಾರಾ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು. ಮೂರನೇ ದಿನ ಭೋಜನ ವಿರಾಮದ ವೇಳೆಗೆ ಲಾರಾ ಗಳಿಕೆ ಭರ್ತಿ 400. ಈ ಸುದೀರ್ಘ ಇನ್ನಿಂಗ್ಸ್​ನ ಅಲ್ಲಲ್ಲಿ ಲೆಗ್ ಬಿಫೋರ್ ಹಾಗೂ ರನೌಟ್​​ನಿಂದ ಲಾರಾ ಪಾರಾಗಿದ್ದರು.

ನನಗೆ ಧೋನಿ ನಾಯಕತ್ವದಡಿ ಆಡಬೇಕೆಂಬ ಆಸೆ; ಇದು ಭಾರತ ಮಹಿಳಾ ಆಟಗಾರ್ತಿಯ ಮಾತು

582 ಎಸೆತ ಎದುರಿಸಿದ್ದ ಲಾರಾ ಇನ್ನಿಂಗ್ಸ್​​ನಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ್ದವು. 400 ರನ್ ಸಿಡಿಸಲು ಲಾರಾ ತೆಗೆದುಕೊಂಡಿದ್ದು ಬರೋಬ್ಬರಿ 13 ಗಂಟೆ..!. ಇದೇ ವೇಳೆ ರಾಮ್​ನರೇಶ್ ಸರವಣ್ ಜೊತೆಗೆ 232 ರನ್ನುಗಳ‌ ಜೊತೆಯಾಟ ಸಹ‌ ನಡೆಸಿದ್ದರು. ನಂತರದಲ್ಲಿ ರಿಡ್ಲಿ‌ ಜೇಕಬ್ಸ್ ಜೊತೆಯಾಗಿ ಅಜೇಯ 282 ರನ್ನುಗಳ ಬೃಹತ್ ಜೊತೆಯಾಟದಲ್ಲೂ ಲಾರಾ ಭಾಗಿಯಾಗಿದ್ದರು.

ಟೀಂ ಇಂಡಿಯಾದ ಈ ಖ್ಯಾತ ಬ್ಯಾಟ್ಸ್​ಮನ್ ಏಕದಿನದಲ್ಲಿ ಒಂದೂ ಶತಕ ಸಿಡಿಸಿಲ್ಲ ಎಂದರೆ ನಂಬಲೇಬೇಕುಲಾರಾ ದಾಖಲೆಯ 400 ರನ್ ಗಳಿಸಿದ್ದು ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ. ಹಿಂದಿನ ಮೂರೂ ಪಂದ್ಯದಲ್ಲಿ ಲಾರಾ ಬ್ಯಾಟ್​​ನಿಂದ 36ಕ್ಕಿಂತ ಹೆಚ್ಚು ರನ್ ಬಂದಿರಲಿಲ್ಲ. ಮೂರು ಟೆಸ್ಟ್ ಹಾಗೂ ಆರು ಇನ್ನಿಂಗ್ಸ್​​ನಿಂದ ದಾಖಲಾಗಿದ್ದು ಕೇವಲ 100 ರನ್..! ಹೀಗಾಗಿ ಲಾರಾ ಬ್ಯಾಟಿಂಗ್ ಬಗ್ಗೆ ಯಾರೂ ಸಹ ಅಷ್ಟಾಗಿ ನಿರೀಕ್ಷೆ ಹೊಂದಿರಲಿಲ್ಲ. ಆದರೆ ವಿಂಡೀಸ್​​ನ ಶ್ರೇಷ್ಠ ಕ್ರಿಕೆಟಿಗ ವೈಫಲ್ಯದಿಂದ ಫೀನಿಕ್ಸ್​​ನಂತೆ ಎದ್ದು ರನ್​ ಹೊಳೆ‌ಹರಿಸಿದ್ದು ಇಂದು ಇತಿಹಾಸ.

Leave A Reply

Your email address will not be published.