EBM News Kannada
Leading News Portal in Kannada

ಈ ಪಂದ್ಯವನ್ನು ಸೋಲುವಂತಿಲ್ಲ, ‘9pm for 9min’ ಬಗ್ಗೆ ಕೊಹ್ಲಿ-ರೋಹಿತ್ ಸಂದೇಶ

0

ಕೊರೊನಾವೈರಸ್ ಹಿನ್ನೆಲೆಯಲ್ಲಿ ಇಡೀ ಭಾರತ ಪ್ರಸ್ತುತ 21 ದಿನಗಳ ಲಾಕ್‌ಡೌನ್‌ನಲ್ಲಿದೆ. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೊರೊನಾ ವೈರಸ್ ವಿಚಾರವಾಗಿ ಕಳೆದ ಶುಕ್ತವಾರ ವಿಡಿಯೋ ಸಂದೇಶವನ್ನು ನೀಡುತ್ತ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಶೇಷವಾದ ಕರೆಯೊಂದನ್ನು ನೀಡಿದರು. ಈ ಹೋರಾಟದಲ್ಲಿ ನೇರವಾಗೊ ಭಾಗಿಯಾದ ವೈದ್ಯಕೀಯ ಸಿಬ್ಬಂದಿಗಳಿಗೆ ಬೆಂಬಲವಾಗಿ ನಿಂತಿರುವುದಾಗಿ ತೋರಿಸಲು ಭಾನುವಾರದಂದು ದೀಪ ಬೆಳಗುವಂತೆ ಮನವಿ ಮಾಡಿದ್ದರು.

ದೇಶಕ್ಕೆ ಬಂದಿರುವ ಕಠಿಣ ಸಂದರ್ಭ ಎಂದು ಹೇಳಿ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕರಿಬ್ಬರು ಟ್ವಿಟ್ಟರ್‌ನಲ್ಲಿ ವಿಶೇಷ ಸಂದೇಶವನ್ನು ಕೋರಿದ್ದಾರೆ. ಈ ಸಂದೇಶದಲ್ಲಿ ತಮ್ಮ ಅಭಿಮಾನಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದ ಬಲವು ಅದರ ಅಭಿಮಾನಿಗಳಲ್ಲಿದ್ದರೆ ದೇಶದ ಶಕ್ತಿ ಅಲ್ಲಿನ ಜನರಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಭಾರತವು ಒಟ್ಟಾಗಿರುವುದನ್ನು ಜಗತ್ತಿಗೆ ತೋರಿಸಬೇಕಾದ ಸಮಯ ಇದು, ಮತ್ತು ಶೀಘ್ರದಲ್ಲೇ ಅದರಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

Leave A Reply

Your email address will not be published.