EBM News Kannada
Leading News Portal in Kannada

ಮೆಸ್ಸಿ ಫೇಲ್; ಅರ್ಜೆಂಟೀನಾ ಬಗ್ಗುಬಡಿದ ಕ್ರೊವೇಶಿಯಾ

0

ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್‌ನಲ್ಲಿ ಮಗದೊಂದು ಅಚ್ಚರಿ ಫಲಿತಾಂಶ ದಾಖಲಾಗಿದ್ದು, ಪ್ರಬಲ ಅರ್ಜೆಂಟೀನಾ ವಿರುದ್ಧ ಕ್ರೊವೇಶಿಯಾ 3-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಅರ್ಜೆಂಟೀನಾದ ಜತೆಗೆ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಕನಸು ಬಹುತೇಕ ಕಮರಿದೆ. ಅಲ್ಲದೆ ತೀರಾ ಅವಮಾನಕಾರಿ ರೀತಿಯಲ್ಲಿ ಕನಿಷ್ಠ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವುದು ಕಠಿಣವೆನಿಸಿದೆ.

ಅತ್ತ ಸತತ ಎರಡು ಗೆಲುವುಗಳನ್ನು ದಾಖಲಿಸಿರುವ ಕ್ರೊವೇಶಿಯಾ ನಾಕೌಟ್ ಹಂತದಲ್ಲಿ ತನ್ನ ಸ್ಥಾನವನ್ನು ಗಟ್ಟಿಪಡಿಸಿದೆ.

ಕ್ರೊವೇಶಿಯಾ ಪರ ಆಂಟೆ ರೆಬಿಕ್ 53ನೇ ನಿಮಿಷ, ಲೂಕಾ ಮೊಡ್ರಿಕ್ 80ನೇ ನಿಮಿಷ ಹಾಗೂ ಇವಾನ್ ರಾಕಿಟಿಕ್ ಇಂಜುರಿ ಟೈಮ್‌ನಲ್ಲಿ (90+1) ನಿಮಿಷದಲ್ಲಿ ಗೆಲುವಿನ ಗೋಲುಗಳನ್ನು ಬಾರಿಸಿದರು.

ಇದರೊಂದಿಗೆ ತಮ್ಮ ಅಂತಿಮ ವಿಶ್ವಕಪ್ ಆಡುತ್ತಿರುವ ವಿಶ್ವ ಫುಟ್ಬಾಲ್‌ನ ಅತಿ ಜನಪ್ರಿಯ ಆಟಗಾರರಲ್ಲಿ ಓರ್ವರಾಗಿರುವ ಮೆಸ್ಸಿಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವುದು ಕನಸಾಗಿಯೇ ಉಳಿಯುವ ಭೀತಿ ಕಾಡುತ್ತಿದೆ. ಇದು ಅಸಂಖ್ಯಾತ ಅಭಿಮಾನಿಗಳಲ್ಲೂ ಅತೀವ ಬೇಸರಕ್ಕೆ ಕಾರಣವಾಗಿದೆ.

Leave A Reply

Your email address will not be published.