ಏಕದಿನದಲ್ಲಿ ಎರಡು ಹೊಸ ಚೆಂಡಿನಿಂದಾಗಿ ವಿಪತ್ತು: ಸಚಿನ್
ಹೊಸದಿಲ್ಲಿ: ಏಕದಿನದಲ್ಲಿ ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ವಿಪತ್ತು ಸೃಷ್ಟಿಯಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ದಂತಕತೆ ಸಚಿನ್ ತೆಂಡೂಲ್ಕರ್ ಆತಂಕ ತೋಡಿಕೊಂಡಿದ್ದಾರೆ.
ಪ್ರಸ್ತುತ ಸಾಗುತ್ತಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿಯಲ್ಲಿ ರನ್ ಹೊಳೆ ಹರಿಯುತ್ತಿರುವ ಬೆನ್ನಲ್ಲೇ ಏಕದಿನದಲ್ಲಿ ಎರಡು ಹೊಸ ಚೆಂಡುಗಳ ಬಳಕೆ ಬಗ್ಗೆ ಸಚಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಚೆಂಡು ಹಳೆಯದಾಗಿ ರಿವರ್ಸ್ ಸಿಂಗ್ ಆಗಲು ಸಾಕಷ್ಟು ಸಮಯ ಸಿಗುತ್ತಿಲ್ಲ ಎಂದು ಬೊಟ್ಟು ಮಾಡಿರುವ ಮಾಸ್ಟರ್ ಬ್ಲಾಸ್ಟರ್, ಡೆತ್ ಓವರ್‌ಗಳ ಅವಿಭಾಜ್ಯ ಅಂಗವಾಗಿರುವ ರಿವರ್ಸ್ ಸಿಂಗ್ ಅನ್ನು ನೋಡಲೇ ಸಿಗುತ್ತಿಲ್ಲ ಎಂದು ಇಂಗ್ಲೆಂಡ್ ಹಾಗೂ ಆಸೀಸ್ ಸರಣಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.