ಲಿಯೋನಲ್ ಮೆಸ್ಸಿ ಮತ್ತು ಕ್ರಿಸ್ಟಿಯನೋ ರೊನಾಲ್ಡೊ ಹೋಲಿಕೆ ಸರಿಯಲ್ಲ: ಆಡ್ರಿಯನ್ ಸಿಲ್ವಾ
ಕ್ರಾಟೊವೊ: ಫುಟ್ಬಾಲ್ ಜಗತ್ತಿನ ಧ್ರುವ ತಾರೆಗಳಂತಿರುವ ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ ಕ್ರಿಸ್ಟಿಯನೋ ರೊನಾಲ್ಡೊರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಪೋರ್ಚುಗಲ್ ನ ಆಟಗಾರ ಆಡ್ರಿಯನ್ ಸಿಲ್ವಾ ಹೇಳಿದ್ದಾರೆ.
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ತಂಡವನ್ನು ತಮ್ಮ ಹ್ಯಾಟ್ರಿಕ್ ಗೋಲಿನಿಂದ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು ಕ್ರಿಸ್ಟಿಯನೋ ರೊನಾಲ್ಡೋ.
ಇನ್ನು ಐಸ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಪೆನಾಲ್ಟಿ ಅನ್ನು ಅರ್ಜೇಂಟಿನ ತಂಡದ ಆಟಗಾರ ಲಿಯೋನಲ್ ಮೆಸ್ಸಿ ಅವರು ಕೈಚೆಲ್ಲಿದ್ದರಿಂದ ಪಂದ್ಯ 1-1 ಗೋಲಿನಿಂದ ಡ್ರಾ ಸಾಧಿಸಿತ್ತು. ಇದರಿಂದ ಕೆಲ ಅಭಿಮಾನಿಗಳು ಮೆಸ್ಸಿಗಿಂತ ರೊನಾಲ್ಡೋ ಗ್ರೇಟ್ ಎಂದು ಹೇಳುತ್ತಿದ್ದರು ಇದಕ್ಕೆ ಸಿಲ್ವಾ ಖ್ಯಾತ ಆಟಗಾರರ ಹೋಲಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ರೊನಾಲ್ಡೋ ನಮ್ಮ ನೆಚ್ಚಿನ ಆಟಗಾರ. ಅವರು ನಮ್ಮೊಂದಿಗಿದ್ದಾರೆ ಮತ್ತು ತಂಡಕ್ಕೆ ಏನು ಮಾಡಬೇಕೋ ಅದನ್ನು ಅವರು ಮಾಡುತ್ತಾರೆ. ಅವರಿಗೆ ನಾವು ಸಹ ಬೆನ್ನೆಲುಬಾಗಿ ನಿಲ್ಲಬೇಕಿದೆ. ಇನ್ನು ಸ್ಪೇನ್ ವಿರುದ್ಧದ ಪಂದ್ಯ ಡ್ರಾವನ್ನು ನಾವು ನಿರೀಕ್ಷಿಸಿರಲಿಲ್ಲ. ಆದರೆ ಸೋಲುತ್ತಿದ್ದ ಪಂದ್ಯವನ್ನು ಡ್ರಾನಲ್ಲಿ ಅಂತ್ಯ ಮಾಡಿದ್ದು ರೊನಾಲ್ಡೋರ ಸಾಹಸ ಎಂದು ಹೇಳಿದ್ದಾರೆ.