EBM News Kannada
Leading News Portal in Kannada

ಆಘ್ಘಾನ್ ಆಟಗಾರರೊಂದಿಗೆ ಟ್ರೋಫಿ ಜತೆ ಫೋಸ್ ನೀಡಿದ ಟೀಮ್ ಇಂಡಿಯಾ

0

ಬೆಂಗಳೂರು: ಹಲವಾರು ಕಾರಣಗಳಿಂದಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯ ಸ್ಮರಣೀಯವೆನಿಸಿದೆ.

ಐಸಿಸಿ ಖಾಯಂ ಸದಸ್ಯತ್ವ ಪಡೆದ ಬಳಿಕ 12ನೇ ಟೆಸ್ಟ್ ತಂಡವಾಗಿ ಅಫಘಾನಿಸ್ತಾನ ಪದಾರ್ಪಣೆಗೈದಿತ್ತು. ಆದರೆ ಭಾರತ ವಿರುದ್ಧ ಟೆಸ್ಟ್ ಪಂದ್ಯವನ್ನು ಕೇವಲ ಎರಡೇ ದಿನಗಳಲ್ಲಿ ಶರಣಾಗಿತ್ತು.

ಅಫಘಾನಿಸ್ತಾನ ಕ್ರಿಕೆಟ್ ತಂಡದ ಬೆಳವಣಿಗೆಗೆ ಬಿಸಿಸಿಐ ನಿರಂತರ ಬೆಂಬಲ ನೀಡುತ್ತಲೇ ಬಂದಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಘ್ಘಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಮಟ್ಟದ ನಿರ್ವಹಣೆ ನೀಡದೇ ಹೋಗಿರಬಹುದು. ಆದರೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ನಡುವೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಫೋಟೋಗೆ ಫೋಸ್ ನೀಡುವ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ, ಅಫಘಾನಿಸ್ತಾನ ತಂಡದ ಆಟಗಾರರನ್ನು ಆಹ್ವಾನಿಸುವ ಮೂಲಕ ಗಮನ ಸೆಳೆದರು.

ಬಳಿಕ ಇತ್ತಂಡಗಳು ಜತೆಯಾಗಿ ಫೋಸ್ ನೀಡುವ ಮೂಲಕ ಚಿತ್ರವನ್ನು ಕ್ಲಿಕ್ಕಿಸಿದರು. ಟೀಮ್ ಇಂಡಿಯಾ ನಾಯಕ ರಹಾನೆ ಅವರ ಇಂತಹದೊಂದು ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ ಒಡ್ಡಿದ 474 ರನ್‌ಗಳಿಗೆ ಉತ್ತರವಾಗಿ ಅಫಘಾನಿಸ್ತಾನ ತನ್ನ ಎರಡು ಇನ್ನಿಂಗ್ಸ್‌ಗಳಲ್ಲಿ 109 ಹಾಗೂ 103 ರನ್‌ಗಳಿಗೆ ಆಲೌಟಾಗುವ ಮೂಲಕ ಇನ್ನಿಂಗ್ಸ್ ಹಾಗೂ 262 ರನ್ ಅಂತರದ ಹೀನಾಯ ಸೋಲಿಗೊಳಗಾಗಿತ್ತು.

Leave A Reply

Your email address will not be published.