EBM News Kannada
Leading News Portal in Kannada

ಯೋಯೋ ಟೆಸ್ಟ್ ನಲ್ಲಿ ಕೊಹ್ಲಿ ಪಾಸ್, ಅಂಬಟಿ ರಾಯುಡು ಫೇಲ್!

0

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಆಟಗಾರರಿಗೆ ನಡೆಸಲಾದ ಯೋಯೋ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತೀರ್ಣರಾಗಿದ್ದಾರೆ, ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಟಿ ರಾಯುಡು ವಿಫಲರಾಗಿದ್ದು, ಇಂಗ್ಲೆಂಡ್ ಸರಣಿಯಿಂದ ಹೊರ ಹೋಗುಳಿಯುವುದು ಖಚಿತವಾಗಿದೆ.

ಟೀಂ ಇಂಡಿಯಾದ ಟ್ರೈನರ್ ಶಂಕರ್ ಬಸು ಮತ್ತು ಇತರ ಸಿಬ್ಬಂದಿಯಿಂದ ಯೋಯೋ ಟೆಸ್ಟ್ ತೆಗೆದುಕೊಂಡ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸುರೇಶ್ ರೈನಾ, ಭುವನೇಶ್ವರ್ ಕುಮಾರ್, ಕೇದಾರ್ ಜಾದವ್ ಸೇರಿದಂತೆ ಎಲ್ಲಾ ಆಟಗಾರರೂ ಯೋಯೋ ಟೆಸ್ಟ್ ನಲ್ಲಿ ಯಶಸ್ವಿಯಾಗಿದ್ದು, ಅಂಬಟಿ ರಾಯುಡು ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಗೆ ಹೇಳಿದ್ದಾರೆ.

ಟೀಂ ಇಂಡಿಯಾದ ಯಾವುದೇ ಪ್ರವಾಸ ಕೈಗೊಳ್ಳುವ ಮುನ್ನ ತಂಡದ ಆಟಗಾರರ ಆರಂಭಿಕ ಫಿಟ್ನೆಸ್ ತಿಳಿದುಕೊಳ್ಳುವ ಸಲುವಾಗಿ ಯೋಯೋ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಟಗಾರರ ಫಿಟ್ನೆಸ್ ಕುರಿತಂತೆ ಸಂಪೂರ್ಣ ವಿವರ ಸಿಗುತ್ತದೆ.

Leave A Reply

Your email address will not be published.