EBM News Kannada
Leading News Portal in Kannada

ಫುಟ್ಬಾಲ್‌ ಹಬ್ಬಕ್ಕೆ ವರ್ಣರಂಜಿತ ಚಾಲನೆ

0

ಮಾಸ್ಕೊ: ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ರಷ್ಯಾದಲ್ಲಿ ಫುಟ್ಬಾಲ್‌ ಸಂಭ್ರಮ ಕಳೆಗಟ್ಟಿತು. ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭ ಹಲವಾರು ವೈಶಿಷ್ಠ್ಯಗಳಿಗೆ ಸಾಕ್ಷಿಯಾಯಿತು. ರಷ್ಯಾದ ಖ್ಯಾತ ರೂಪದರ್ಶಿ ನಥಾಲಿಯಾ ಅವರೊಂದಿಗೆ 2010ರ ಫಿಫಾ ವಿಶ್ವಕಪ್‌ ವಿಜೇತ ಸ್ಪೇನ್‌ ತಂಡದ ನಾಯಕ ಐಕರ್‌ ಕ್ಯಾಸಿಲಾಸ್‌ ವಿಶ್ವಕಪ್‌ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದು ಪ್ರೇಕ್ಷಕರಿಗೆ ಪ್ರದರ್ಶಿಸಿದರು.

ನಂತರ ಖ್ಯಾತ ಪಾಪ್‌ ಗಾಯಕರಾದ ರಾಬಿ ವಿಲಿಯಮ್ಸ್‌, ಅಯ್ದಾ ಗ್ಯಾರಿಫುಲಿನಾ, ನಿಕ್ಕಿ ಜ್ಯಾಮ್‌ ಮತ್ತು ಎರಾ ಇಸ್ಪ್ರೇಫಿ ಅವರ ಕಂಠಸಿರಿಯಲ್ಲಿ ಮಾರ್ದನಿಸಿದ ಹಾಡುಗಳು ನೆರೆದಿದ್ದ ಫುಟ್ಬಾಲ್‌ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಅಲ್ಲದೆ ಕ್ರೀಡಾಂಗಣದ ಮಧ್ಯದಲ್ಲಿ ರಚಿಸಲಾಗಿದ್ದ ಫುಟ್ಬಾಲ್‌ ಪ್ರತಿಕೃತಿಯ ಮೇಲೆ ನಡೆದ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದವು. ನಂತರ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ಪಥ ಸಂಚಲನ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಫುಟ್ಬಾಲ್‌ ಅನ್ನು ಇಲ್ಲಿ ನಿಜಕ್ಕೂ ಪ್ರೀತಿಸುತ್ತೇದ್ದೇವೆ. 1897ರಲ್ಲಿ ಇಲ್ಲಿ ಮೊದಲ ಬಾರಿ ಅಧಿಕೃತ ಪಂದ್ಯ ನಡೆದ ನಂತರ ಫುಟ್ಬಾಲ್‌ ಬಗ್ಗೆ ಇಲ್ಲಿನ ಜನರಿಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿದೆ. ಸ್ನೇಹಪರ ರಾಷ್ಟ್ರ ರಷ್ಯಾದ ಆತಿಥ್ಯವನ್ನು ಅಭಿಮಾನಿಗಳು ಮತ್ತು ತಂಡಗಳು ಆನಂದಿಸಲಿವೆ ಎಂದು ಭಾವಿಸಿದ್ದೇನೆ. ಈ ಅದ್ಭುತ ಕ್ರೀಡೆ ನಮ್ಮೆಲ್ಲರನ್ನೂ ಒಂದಾಗಿಸಿದೆ ಎಂದರು.

Leave A Reply

Your email address will not be published.