ಕೊಹ್ಲಿ ಮಷಿನ್ ಅಲ್ಲ: ಶಾಸ್ತ್ರಿ
‘ಕೌಂಟಿ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ಹೊರಗುಳಿಯಲೇಬೇಕಿತ್ತು. ಏಕೆಂದರೆ ಅವರು ಮಷಿನ್ ಅಲ್ಲ. ಅವರೂ ಒಬ್ಬ ಮನುಷ್ಯ. ಇಂಧನ ತುಂಬಿಸಿ ಓಡಿಸಲು ಅವರು ರಾಕೆಟ್ ಅಲ್ಲ. ಅವರಿಗೂ ವಿಶ್ರಾಂತಿಯ ಅಗತ್ಯವಿದೆ,’ ಎಂದು ಟೀಮ್ ಇಂಡಿಯಾದ ಪ್ರಧಾನ ಕೋಚ್ ಶಾಸ್ತ್ರಿ ತಿಳಿಸಿದ್ದಾರೆ.
ಮೇ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಕೊಹ್ಲಿ ಅವರ ಕುತ್ತಿಗೆಗೆ ಗಾಯವಾಗಿತ್ತು ಎಂದು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಕಾರಣದಿಂದ ಕೌಂಟಿ ಕ್ರಿಕೆಟ್‌ನಲ್ಲಿ ಕೊಹ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿತ್ತು. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಮುಂದಿನ ತಿಂಗಳು ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಪರ ಕೊಹ್ಲಿ ಆಡಬೇಕಿತ್ತು.