Virat Kohli: ಐಪಿಎಲ್ ವೈಫಲ್ಯಕ್ಕೆ ಕ್ಷಮೆ ಕೋರಿದ ವಿರಾಟ್: ಆರ್ಸಿಬಿ ಅಭಿಮಾನಿಗಳಿಗೆ ಕೊಹ್ಲಿ ‘ಕನ್ನಡ ಸಂದೇಶ’
ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗದೆ ಸತತ 11ನೇ ವರ್ಷವೂ ಪ್ರಶಸ್ತಿ ಕನಸು ಕೈಗೂಡದೆ ಇರುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷ ಮೆ ಕೋರಿದ್ದಾರೆ.
ಅಲ್ಲದೆ ”ನಿಮ್ಮ ಪ್ರೋತ್ಸಾಹ ಮತ್ತು ಸಹಕಾರ ಸದಾ ಹೀಗೆ ನಮ್ಮ ಮೇಲಿರಲಿ. ಮುಂದಿನ ವರ್ಷ ಇನ್ನೂ ಚೆನ್ನಾಗಿ ಆಡುತ್ತೇವೆ. ಧನ್ಯವಾದಗಳು,” ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಕನ್ನಡದಲ್ಲಿಯೇ ಪ್ರಕಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಐಪಿಎಲ್-11ರಲ್ಲಿ ಆರ್ಸಿಬಿ ಪ್ರದರ್ಶನದ ಕುರಿತಾಗಿ ವಿಡಿಯೊ ಸಂದೇಶವನ್ನು ಪ್ರಕಟಿಸಿರುವ ಕೊಹ್ಲಿ, ”ನಾವು ಆಡಿದ ರೀತಿಗೆ ನಮಗೆ ತುಂಬಾ ಬೇಸರವಾಗಿದೆ. ಅಭಿಮಾನಿಗಳ ನಿರೀಕ್ಷೆಗಳನ್ನು ಮತ್ತೊಮ್ಮೆ ಹುಸಿಗೊಳಿಸಿದ್ದಕ್ಕಾಗಿ ಕ್ಷ ಮೆ ಕೋರುತ್ತೇನೆ. ‘ನೀವು ಗೆಲ್ಲುತ್ತೀರಿ ಅಥವಾ ಕಲಿಯುತ್ತೀರಿ’ ಎಂಬ ಪರಿಕಲ್ಪನೆಯಲ್ಲಿ ನಂಬಿಯಿಟ್ಟವನು ನಾನು. ನಾವು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಹೊರ ಹಾಕಿ ಕಠಿಣ ಪ್ರದರ್ಶನ ತೋರಿದೆವು. ಆದರೆ ಒಂದಂತೂ ನಿಜ. ಈ ಸಾಲಿನಲ್ಲಿ ಏನು ಕಲಿತಿದ್ದೇವೋ, ಅವೆಲ್ಲವನ್ನೂ ಬಳಸಿಕೊಂಡು ಹಿಂದೆಂದಿಗಿಂತಲೂ ಉತ್ತಮವಾಗಿ ಮುಂದಿನ ವರ್ಷ ಪುಟಿದೆದ್ದು ನಿಲ್ಲುತ್ತೇವೆ,” ಎಂದು ಬರೆದುಕೊಂಡಿದ್ದಾರೆ.