EBM News Kannada
Leading News Portal in Kannada

ಜೂ.24ರಿಂದ 2027ರ ಫಿಫಾ ಮಹಿಳೆಯರ ವಿಶ್ವಕಪ್ ಆರಂಭ

0



ಮ್ಯಾಡ್ರಿಡ್ : 2027ರ ಆವೃತ್ತಿಯ ಫಿಫಾ ಮಹಿಳೆಯರ ವಿಶ್ವಕಪ್ ಟೂರ್ನಿಯು ಬ್ರೆಝಿಲ್‌ನಲ್ಲಿ ಜೂನ್ 24 ಹಾಗೂ ಜುಲೈ 25ರ ನಡುವೆ ನಡೆಯಲಿದೆ ಎಂದು ಜಾಗತಿಕ ಆಡಳಿತ ಮಂಡಳಿ ಫಿಫಾ ಮಂಗಳವಾರ ತಿಳಿಸಿದೆ.

32 ತಂಡಗಳು ಭಾಗವಹಿಸುವ ಪಂದ್ಯಾವಳಿಯಲ್ಲಿ ಯುರೋಪ್ ಆಡಳಿತ ಮಂಡಳಿ ಯುಇಎಫ್‌ಎನಿಂದ 11 ತಂಡಗಳು ನೇರವಾಗಿ ಅರ್ಹತೆ ಪಡೆದಿವೆ. ಏಶ್ಯದ ಎಎಫ್‌ಸಿಯಿಂದ 6 ತಂಡಗಳು, ಆಫ್ರಿಕಾದ ಸಿಎಎಫ್ ಹಾಗೂ ಉತ್ತರ ಅಮೆರಿಕದ ತಲಾ 4 ತಂಡಗಳು ನೇರ ಪ್ರವೇಶ ಪಡೆದಿವೆ. ದಕ್ಷಿಣ ಅಮೆರಿಕದಿಂದ 3 ಹಾಗೂ ಒಶಿಯಾನಿಯಾ ಒಎಫ್‌ಸಿಯಿಂದ ಒಂದು ತಂಡ ಅರ್ಹತೆ ಪಡೆದಿದೆ.

ಉಳಿದ 3 ಸ್ಥಾನಗಳು 10 ತಂಡಗಳ ಪ್ಲೇ-ಆಫ್ ಟೂರ್ನಿಯ ಮೂಲಕ ನಿರ್ಣಯಿಸಲಾಗುತ್ತದೆ. ಈ ಟೂರ್ನಿಯನ್ನು 2026ರ ನವೆಂಬರ್ ಹಾಗೂ 2027ರ ಫೆಬ್ರವರಿ ನಡುವೆ 2 ಹಂತದಲ್ಲಿ ಆಡಲಾಗುತ್ತದೆ.

ಮೇನಲ್ಲಿ ಆತಿಥ್ಯದ ಹಕ್ಕನ್ನು ಗೆದ್ದಿರುವ ಬ್ರೆಝಿಲ್ ದೇಶವು 10ರಿಂದ 12 ತಾಣಗಳಲ್ಲಿ ಟೂರ್ನಿಯನ್ನು ಆಯೋಜಿಸಲಿದೆ. 2014ರ ಪುರುಷರ ವಿಶ್ವಕಪ್ ತಾಣಗಳನ್ನು ಬಳಸಲಾಗುತ್ತದೆ.

Leave A Reply

Your email address will not be published.