ಕರಾಚಿ : ಭಾರತದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಜಾಗತಿಕ ಮಟ್ಟದಲ್ಲಿ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದು, ಈ ಅಭಿಮಾನಿಗಳೆ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಜನಪ್ರಿಯ ಕ್ರಿಕೆಟಿರಲ್ಲಿ ಒಬ್ಬರನ್ನಾಗಿ ಮಾಡಿದ್ದಾರೆ. ಕೊಹ್ಲಿ ಅವರು ಕ್ರಿಕೆಟ್‌ನ ಸಾಂಪ್ರದಾಯಿಕ ಗಡಿಗಳನ್ನು ಮೀರಿ ವಿವಿಧ ದೇಶಗಳ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಒನ್ ಡೇ ಕಪ್-2024ರಲ್ಲಿ ಕೊಹ್ಲಿಯ ವ್ಯಾಪಕ ಜನಪ್ರಿಯತೆ ಪ್ರದರ್ಶನಗೊಂಡಿದೆ. ಸ್ಟಾಲಿಯನ್ಸ್ ಹಾಗೂ ಮಾರ್ಖೋರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಸ್ಟೇಡಿಯಮ್‌ನೊಳಗೆ ಅಭಿಮಾನಿಯೊಬ್ಬ ಕೊಹ್ಲಿ ಅವರ ಜರ್ಸಿಯನ್ನು ಪ್ರದರ್ಶಿಸಿದ್ದಾನೆ. ಇದು ಪಾಕಿಸ್ತಾನದಲ್ಲಿ ಕೊಹ್ಲಿ ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
Interesting posters and Virat Kohli shirts – Faisalabad crowd #ChampionsCup | #PakistanCricket pic.twitter.com/UZaKrXvQns
— Grassroots Cricket (@grassrootscric) September 15, 2024
ಸ್ಟಾಲಿಯನ್ಸ್ ತಂಡದ ಪರ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಬಾಬರ್ ಆಝಮ್ ಆಡುತ್ತಿದ್ದ ಕಾರಣ ಅಭಿಮಾನಿಯೊಬ್ಬನ ಈ ನಡವಳಿಕೆಯು ಹೆಚ್ಚು ಗಮನ ಸೆಳೆಯಿತು.
ಕೊಹ್ಲಿ ಅವರು ಸದ್ಯ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಮೊದಲ ಬಾರಿ ಕೊಹ್ಲಿ ಅವರು ಟೆಸ್ಟ್ ಮಾದರಿಯ ಕ್ರಿಕೆಟಿಗೆ ವಾಪಸಾಗುತ್ತಿದ್ದಾರೆ. ತನ್ನ ಮಗ ಅಕಾಯ್ ಹುಟ್ಟಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡಿರಲಿಲ್ಲ.