EBM News Kannada
Leading News Portal in Kannada

ಪುರುಷರ 5000 ಮೀ.ಓಟ: ಅವಿನಾಶ್ ಸಾಬ್ಳೆಯ ರಾಷ್ಟ್ರೀಯ ದಾಖಲೆ ಮುರಿದ ಗುಲ್ವೀರ್ ಸಿಂಗ್

0ಚೆನ್ನೈ: ಪೋರ್ಟ್‌ಲ್ಯಾಂಡ್ ಟ್ರ್ಯಾಕ್ ಫೆಸ್ಟಿವಲ್‌ನಲ್ಲಿ ರವಿವಾರ ನಡೆದ ಪುರುಷರ 5,000 ಮೀ.ಓಟದಲ್ಲಿ 13:18.92 ಸೆಕೆಂಡ್‌ನಲ್ಲಿ ಗುರಿ ತಲುಪಿದ ಗುಲ್ವೀರ್ ಸಿಂಗ್ ಅವರು ಅವಿನಾಶ್ ಸಾಬ್ಳೆ ಅವರ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.

ಗುಲ್ವೀಸ್ 13:19.30 ಸೆಕೆಂಡ್‌ನಲ್ಲಿ ಗುರಿ ತಲುಪಿ ಅವಿನಾಶ್ ಅವರ ದಾಖಲೆಯನ್ನು ಮುರಿದು ಜೀವನಶ್ರೇಷ್ಠ ಸಾಧನೆ ಮಾಡಿದರು.

ಈ ವರ್ಷದ ಮಾರ್ಚ್‌ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ದಿ ಟೆನ್ ಟ್ರ್ಯಾಕ್ ಮೀಟ್‌ನಲ್ಲಿ ಪುರುಷರ 10,000 ಮೀ. ಓಟದಲ್ಲಿ ಗುಲ್ವೀರ್ ಹಳೆಯ ದಾಖಲೆಯೊಂದನ್ನು ಮುರಿದಿದ್ದರು. ಗುಲ್ವೀರ್ 27.41.81 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು. ಈ ಮೂಲಕ ಸುಮಾರು 16 ವರ್ಷಗಳ ಹಿಂದೆ 2008ರಲ್ಲಿ ಸುರೇಂದರ್ ಸಿಂಗ್ ಪುರುಷರ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ನಿರ್ಮಿಸಿದ್ದ ದಾಖಲೆ(28.02.89)ಯನ್ನು ಮುರಿದರು.

ಆದರೆ ಗುಲ್ವೀರ್ ಪ್ರಯತ್ನವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಕಾಗಲಿಲ್ಲ. 41 ಸೆಕೆಂಡ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸಮಯ ತಲುಪುವುದರಿಂದ ವಂಚಿತರಾದರು.

26ರ ಹರೆಯದ ಗುಲ್ವೀರ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 5,000 ಮೀ.ಓಟದಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು. ಹಾಂಗ್‌ಝೌ ಗೇಮ್ಸ್‌ನಲ್ಲಿ 10,000 ಮೀ.ಓಟದಲ್ಲಿ ಕಂಚು ಜಯಿಸಿ ವೃತ್ತಿಜೀವನದಲ್ಲಿ ಮಹತ್ವದ ಸಾಧನೆ ಮಾಡಿದ್ದರು.

Leave A Reply

Your email address will not be published.