EBM News Kannada
Leading News Portal in Kannada

IPL 2024| ಅಪರಾಧ ಪುನರಾವರ್ತನೆಯಾದರೆ ರಿಶಭ್ ಪಂತ್‍ಗೆ ಒಂದು ಪಂದ್ಯ ನಿಷೇಧ | IPL 2024

0


ಹೊಸದಿಲ್ಲಿ: ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಶಭ್ ಪಂತ್ ನಿಧಾನ ಗತಿಯ ಓವರ್ ಗಾಗಿ ಎರಡು ಬಾರಿ ದಂಡಕ್ಕೆ ಗುರಿಯಾಗಿದ್ದಾರೆ. ಅವರು ಇನ್ನೊಂದು ಬಾರಿ ಇದೇ ಅಪರಾಧವನ್ನು ಪುನರಾವರ್ತಿಸಿದರೆ, ಒಂದು ಪಂದ್ಯದ ನಿಷೇಧಕ್ಕೆ ಒಳಗಾಗುತ್ತಾರೆ.

26 ವರ್ಷದ ಆಟಗಾರ ಶುಕ್ರವಾರ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ವೇಳೆ ದೊಡ್ಡದೊಂದು ಆಘಾತವನ್ನು ನಿವಾರಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ 16ನೇ ಓವರ್ ವರೆಗೂ ಓವರ್ ದರದಲ್ಲಿ ಹಿಂದಿತ್ತು. ಆದರೆ, ಬಳಿಕ ಮುಂದಿನ ಓವರ್ ಗಳಲ್ಲಿ ಕಳೆದುಹೋದ ಸಮಯವನ್ನು ಸರಿಪಡಿಸಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್ ನಲ್ಲಿ ಒಳಗಿನ ವೃತ್ತದಿಂದ ಹೊರಗೆ ಐವರು ಫೀಲ್ಡರ್ ಗಳನ್ನು ನಿಯೋಜಿಸಿತ್ತು. ಅಂದರೆ, ತನ್ನ ಕಳೆದು ಹೋದ ಸಮಯವನ್ನು ಅದು ಸರಿಪಡಿಸಿಕೊಂಡಿದೆ ಎಂಬ ಸೂಚನೆ ಅದಾಗಿತ್ತು.

ನಿಯಮಗಳ ಪ್ರಕಾರ, ಒಂದು ತಂಡವು ಪಂದ್ಯದ ವೇಳೆ ನಿಧಾನಗತಿಯಲ್ಲಿ ಬೌಲ್ ಮಾಡಿರುವುದು ಕಂಡುಬಂದರೆ, ಅದನ್ನು ದಂಡಿಸಲಾಗುತ್ತದೆ. ಅಂದರೆ ಒಳಗಿನ ವೃತ್ತದಿಂದ ಹೊರಗೆ ಅದು ಸಾಮಾನ್ಯ ಐವರ ಬದಲು ನಾಲ್ವರು ಫೀಲ್ಡರ್ ಗಳನ್ನು ಮಾತ್ರ ನಿಯೋಜಿಸಬಹುದಾಗಿದೆ.

ಐಪಿಲ್‍ನ ಆಟದ ನಿಯಮಗಳ ಪ್ರಕಾರ, ತಂಡವೊಂದು ನಿಧಾನ ಗತಿಯ ಬೌಲಿಂಗ್ ಮಾಡಿದರೆ, ಮೊದಲ ಅಪರಾಧಕ್ಕಾಗಿ ನಾಯಕನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದೇ ಋತುವಿನಲ್ಲಿ ಇಂಥ ಅಪರಾಧ ಎರಡನೇ ಬಾರಿ ನಡೆದರೆ, ನಾಯಕನಿಗೆ 24 ಲಕ್ಷ ರೂಪಾಯಿ ಮತ್ತು ಆಡುವ ಹನ್ನೊಂದರ ಬಳಗದ ಪ್ರತಿಯೊಬ್ಬ ಆಟಗಾರನಿಗೆ 6 ಲಕ್ಷ ರೂ. ಅಥವಾ ಅವರ ಪಂದ್ಯ ಶುಲ್ಕದ 25 ಶೇಕಡ ದಂಡ ವಿಧಿಸಲಾಗುತ್ತದೆ.

ಇದೇ ಅಪರಾಧ ಮೂರನೇ ಬಾರಿ ಪುನರಾವರ್ತನೆಗೊಂಡರೆ, ದಂಡದ ಮೊತ್ತವು 30 ಲಕ್ಷ ರೂಪಾಯಿಗೆ ಏರುತ್ತದೆ ಹಾಗೂ ತಂಡದ ನಾಯಕನಿಗೆ ಒಂದು ಪಂದ್ಯದ ನಿಷೇಧ ವಿಧಿಸಲಾಗುತ್ತದೆ.

Leave A Reply

Your email address will not be published.