EBM News Kannada
Leading News Portal in Kannada

ಆಸ್ಟ್ರೇಲಿಯವನ್ನು ಸೋಲಿಸಿ ಸರಣಿ ಜಯಗಳಿಸಿದ ಭಾರತ

0



ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 6 ರನ್‌ ಗಳಿಂದ ಜಯಗಳಿಸಿದೆ.

ಭಾರತ ನೀಡಿದ 160 ರನ್‌ ಗಳ ಬೆನ್ನತ್ತಿದ ಆಸ್ಟ್ರೇಲಿಯ 2.3 ನೇ ಓವರ್‌ ನಲ್ಲಿ ಜೋಶ್‌ ಪಿಲಿಪ್‌ (4) ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಆಟಗಾರ ಟ್ರಾವೆಸ್‌ ಹೆಡ್‌ 28 ರನ್‌ ಗಳಿಸಿ ಉತ್ತಮ ಹೋರಾಟದ ಆಟ ಪ್ರದರ್ಶಿಸಿದರು. ಆದರೆ ರವಿ ಬಿಷ್ಣೋಯೊ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿ, ಆಸ್ಟ್ರೇಲಿಯಕ್ಕೆ ಆಘಾತ ನೀಡಿದರು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ ಗೆ ಬಂದ ಬೆನ್ ಮೆಕ್ಡರ್ಮಾಟ್ 36 ಎಸೆತಗಳಲ್ಲಿ 5 ಸಿಕ್ಸರ್‌ ಸಹಿತ 54 ರನ್‌ ಗಳಿಸಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಆಸ್ಟ್ರೇಲಿಯಾಗೆ ಗೆಲುವಿನ ಭರವಸೆ ನೀಡಿದರು. ಬೆನ್ ಅವರು 14.6 ನೇ ಓವರ್‌ನಲ್ಲಿ ಅರ್ಷದೀಪ್‌ ಸಿಂಗ್‌ ಎಸೆತದಲ್ಲಿ ರಿಂಕು ಸಿಂಗ್‌ ಗೆ ಕ್ಯಾಚಿತ್ತು ವಿಕೆಟ್‌ ಒಪ್ಪಿಸಿದರು.

ನಾಯಕನ ಆಟವಾಡಿದ ಮಾಥ್ಯೂ ವೇಡ್‌ ಕ್ರೀಸ್‌ ಗೆ ಅಂಟಿಕೊಂಡು ತಂಡವನ್ನು ಗೆಲುವಿನ ದಡಕ್ಕೆ ಕೊಂಡಯೊಯ್ಯಲು ಪ್ರಯುತ್ಸನಿಸಿದರಾದರೂ ಭಾರತದ ಬೌಲರ್‌ ಮುಖೇಶ್‌ ಕುಮಾರ್‌ ಒಂದೇ ಓವರ್‌ನಲ್ಲಿ 2 ವಿಕೆಟ್‌ ಕಿತ್ತು ಆಸ್ಟ್ರೇಲಿಯಕ್ಕೆ ಗೆಲುವಿನ ಹಾದಿ ಕಠಿಣವಾಗಿಸಿದರು. ವೇಡ್‌ 22 ರನ್‌ ಗಳಿಸಿದ್ದಾಗ ಅರ್ಶದೀಪ್‌ ಸಿಂಗ್‌ ಓವರ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಗೆ ಕ್ಯಾಚಿತ್ತಾಗ ಭಾರತ ತಂಡಕ್ಕೆ ಜಯ ನಿಶ್ವಿತವಾಯಿತು.

ಭಾರತದ ಪರ ಮುಖೇಶ್‌ ಕುಮಾರ್‌ 3 ವಿಕೆಟ್‌ ಪಡೆದರು. ಅರ್ಶದೀಪ್‌ ಸಿಂಗ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಪಡೆದರು. ಅಕ್ಸರ್‌ ಪಟೇಲ್‌ 4 ಓವರ್‌ ಗಳಲ್ಲಿ ಕೇವಲ 14 ರನ್‌ ನೀಡಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 1 ವಿಕೆಟ್‌ ಪಡೆದರು.

ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ 4-1ರಿಂದ ಜಯಗಳಿಸುವ ಮೂಲಕ ಭಾರತ, ಸರಣಿ ತನ್ನದಾಗಿಸಿಕೊಂಡಿತು.

Leave A Reply

Your email address will not be published.