EBM News Kannada
Leading News Portal in Kannada

ಆಸೀಸ್ ವಿಶ್ವಕಪ್ ಗೆದ್ದ ನಂತರ ಟ್ರಾವಿಸ್ ಹೆಡ್‌ ಹೆಂಡತಿ ಮತ್ತು ಮಗಳಿಗೆ ಅತ್ಯಾಚಾರ ಬೆದರಿಕೆ!

0



ಅಹಮದಾಬಾದ್ : ರವಿವಾರ ರಾತ್ರಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ಅನ್ನು ಪ್ಯಾಟ್ ಕಮಿನ್ಸ್ ಬಳಗ ಗೆದ್ದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳನ್ನು ಭಾರತೀಯ ಅಭಿಮಾನಿಗಳ ಒಂದು ವಿಭಾಗವು ಗುರಿಯಾಗಿಸಿಕೊಂಡಿದೆ ಎಂದು freepressjournal.in ವರದಿ ಮಾಡಿದೆ.

ಆಸ್ಟ್ರೇಲಿಯಾದ 241 ರನ್ ಚೇಸ್‌ನಲ್ಲಿ 137 ರನ್ ಗಳಿಸಿ ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದ ಟ್ರಾವಿಸ್ ಹೆಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಪತ್ನಿಯರನ್ನು ಗುರಿಯಾಗಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ಸಂದೇಶಗಳನ್ನು ಕಳುಹಿಸಿ ನಿಂದಿಸಿ, ಬೆದರಿಸಿದ್ದಾರೆ ಎನ್ನಲಾಗಿದೆ. ಕೆಲವರಂತೂ ಹೆಂಡತಿ ಮಕ್ಕಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಭಾರತ ಮೂಲದ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್, ಭಾರತೀಯರಾಗಿದ್ದರೂ ಆಸೀಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ನಿಂದನೆ ಮತ್ತು ಬೆದರಿಕೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ʼಕೆಟ್ಟʼ ಅಭಿಮಾನಿಗಳಿಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

“…ದ್ವೇಷಪೂರಿತ ಕೆಟ್ಟ ವೈಯುಕ್ತಿಕ ಸಂದೇಶ ಕಳುಹಿಸಿದವರೆಲ್ಲಾ ಚೆನ್ನಾಗಿರಿ. ನೀವು ಭಾರತೀಯರಾಗಬಹುದು ಮತ್ತು ನೀವು ಬೆಳೆದ ನಿಮ್ಮ ದೇಶವನ್ನು ಬೆಂಬಲಿಸಬಹುದು. ಕೆಲವೊಮ್ಮೆ ನಿಮ್ಮ ಪತಿ ಮತ್ತು ನಿಮ್ಮ ಮಗುವಿನ ತಂದೆ ಆಡುವ ತಂಡವನ್ನು ಬೆಂಬಲಿಸಬೇಕಾಗಿ ಬರುತ್ತದೆ. ಈ ನಿಟ್ಟಿನಲ್ಲಿ ನಿಮಗೆ ಬರುತ್ತಿರುವ ಆಕ್ರೋಶವನ್ನು ಜಗತ್ತಿನ ಸಮಸ್ಯೆಗಳ ಕಡೆಗೆ ಹರಿಸಿ. ಇದನ್ನು ಹೇಳಬೇಕಾಯಿತಲ್ಲ ಎಂದು ನನಗೇ ನಂಬಲಾಗುತ್ತಿಲ್ಲ… ” ಎಂದು ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Leave A Reply

Your email address will not be published.