ರಾಜ್ ಕೋಟ್ :ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಸರಣಿಯ ಮೂರನೇ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಗ್ಲೆನ್ ಮ್ಯಾಕ್ಸ್ ವೆಲ್ ಭಾರತೀಯ ಆಟಗಾರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಭಾರತ ತಂಡದ ಮೂರು ಪ್ರಮುಖ ವಿಕೆಟ್‌ಗಳನ್ನು ಕಿತ್ತ ಮ್ಯಾಕ್ಸ್ ವೇಲ್ 6 ಓವರ್ ಗಳಲ್ಲಿ 4.33 ಸರಾಸರಿಯಲ್ಲಿ 26 ರನ್ ನೀಡಿ ಮೂರು ವಿಕೆಟ್ ಪಡೆದರು.
ವಾಷಿಂಗ್ಟನ್ ಸುಂದರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದಿರುವ ಮ್ಯಾಕ್ಸ್ ವೇಲ್ ಗೆ ಇನ್ನೂ ನಾಲ್ಕು ಓವರ್ ಬೌಲಿಂಗ್ ಮಾಡಲು ಅವಕಾಶವಿದೆ. ಆಸ್ಟ್ರೇಲಿಯ ನೀಡಿರುವ 353 ರನ್ ಗಳ ಕಠಿಣ ಸವಾಲು ಬೆನ್ನತ್ತಿರುವ ಭಾರತ ತಂಡ 30 ಓವರ್ ಗಳಲ್ಲಿ 185 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. 20 ಓವರ್ ಬಾಕಿಯಿದ್ದು ಗೆಲ್ಲಲು 168 ರನ್ ಗಳ ಅವಶ್ಯಕತೆಯಿದೆ.
8.39 ರನ್ ರೇಟ್ ಅವಶ್ಯವಿದ್ದು ಈಗ 6.36 ರನ್ ರೇಟ್ ಇದೆ. ಭಾರತದ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ರಾಜ್ ಕೋಟ್ ಸಾಕ್ಷಿಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ
Warra catch by maxwell
Rohit played brilliantly as always pic.twitter.com/cRTtisPKv9— Ahsaan Elahi (@Callme_ahsaan) September 27, 2023