ಹೊಸದಿಲ್ಲಿ: ಭಾರತದ ತ್ರಿವಳಿ ಶೂಟರ್ ಗಳಾದ ಮನು ಭಾಕೆರ್, ಇಷಾ ಸಿಂಗ್ ಮತ್ತು ರಿದಂ ಸಂಗ್ವಾನ್ ಅವರು ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ 1759 ಅಂಕಗಳೊಂದಿಗೆ ಭಾರತೀಯ ತಂಡ ಅಗ್ರಸ್ಥಾನ ಪಡೆಯಿತು.
ಇದಕ್ಕೂ ಮುನ್ನ ಆಶಿ ಚೌಕ್ಸಿ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌತರ್ ಶರ್ಮಾ ಅವರನ್ನೊಳಗೊಂಡ ತಂಡ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿತ್ತು. ಈ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕಗಳೊಂದಿಗೆ ಹಂಗ್ಝೋಹುವಿನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಸಂಖ್ಯೆ 16ಕ್ಕೇರಿದೆ.
Photo: twitter.com/IndiaToday