EBM News Kannada
Leading News Portal in Kannada

ಐರ್ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ

0ಹೊಸದಿಲ್ಲಿ: ಜಸ್ಪ್ರಿತ್ ಬುಮ್ರಾ ನಾಯಕತ್ವದ ಟೀಮ್ ಇಂಡಿಯಾ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸಲು ಮಂಗಳವಾರ ಐರ್ಲ್ಯಾಂಡ್ ಗೆ ಪ್ರಯಾಣ ಬೆಳೆಸಿದೆ. 3 ಪಂದ್ಯಗಳ ಸರಣಿಯು ಡಬ್ಲಿನ್ ನಲ್ಲಿ ಆಗಸ್ಟ್ 18ರಿಂದ ಆರಂಭವಾಗಲಿದೆ. ಆ ನಂತರ ಆಗಸ್ಟ್ 20 ಹಾಗೂ 23ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರತ ಕ್ರಿಕೆಟ್ ತಂಡವು ಐರ್ಲ್ಯಾಂಡ್ ಗೆ ನಿರ್ಗಮಿಸುತ್ತಿರುವ ಚಿತ್ರಗಳನ್ನು ಬಿಸಿಸಿಐ ಹಂಚಿಕೊಂಡಿದೆ.

ಬಿಸಿಸಿಐನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಮುಖ ಆಟಗಾರರಾದ-ಬುಮ್ರಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್ ಹಾಗೂ ಶಿವಂ ದುಬೆ ಅವರು ಐರ್ಲ್ಯಾಂಡ್ ಗೆ ತೆರಳುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದೆ.

ಈ ಸರಣಿಯ ಮೂಲಕ ಬುಮ್ರಾ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಆಡಿರುವ ಬುಮ್ರಾ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಬುಮ್ರಾಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಭಾರತ ತಂಡ: ಜಸ್ಪ್ರಿತ್ ಬುಮ್ರಾ(ನಾಯಕ), ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ವಾಶಿಂಗ್ಟನ್ ಸುಂದರ್, ಶಿವಂ ದುಬೆ, ಶಹಬಾಝ್ ಅಹ್ಮದ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮಹೇಶ್ ಕುಮಾರ್, ಅವೇಶ್ ಖಾನ್.@SaqlainHameeed

Leave A Reply

Your email address will not be published.