EBM News Kannada
Leading News Portal in Kannada

Prithvi Shaw: 24 ಬೌಂಡರಿ, 11 ಸಿಕ್ಸರ್‌ ಸಹಿತ ದಾಖಲೆಯ 244 ರನ್ ಚಚ್ಚಿದ ಪೃಥ್ವಿ ಶಾ! – Kannada News | Prithvi Shaw mashes double hundred in One Day Cup 2023 broken many records

0


Prithvi Shaw: ರಾಯಲ್ ಲಂಡನ್ ಏಕದಿನ ಕಪ್ 2023 ರಲ್ಲಿ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿರುವ ಪೃಥ್ವಿ ಶಾ, ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದು ಅಬ್ಬರದ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಈ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಪೃಥ್ವಿ ಶಾ

ತನ್ನ ಕಳಪೆ ಫಾರ್ಮ್​ನಿಂದಾಗಿ ಪ್ರಸ್ತುತ ಟೀಂ ಇಂಡಿಯಾದಿಂದ (Team India) ಹೊರಗಿರುವ ತಂಡದ ಸ್ಫೋಟಕ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ಇಂಗ್ಲಿಂಷ್ ಕೌಂಟಿ ಕ್ರಿಕೆಟ್​ನಲ್ಲಿ ಆಡುತ್ತಿದ್ದಾರೆ. ರಾಯಲ್ ಲಂಡನ್ ಏಕದಿನ ಕಪ್ 2023 (Royal London One-Day Cup 2023) ರಲ್ಲಿ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿರುವ ಪೃಥ್ವಿ ಶಾ, ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದು ಅಬ್ಬರದ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಈ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಹಾಗೆಯೇ ಈ ಹಿಂದೆ ಇಂಗ್ಲೆಂಡ್ ಬ್ಯಾಟರ್ ಒಲಿ ರಾಬಿನ್ಸನ್ (Ollie Robinson) ದಾಖಲಿಸಿದ್ದ ಅತಿ ದೊಡ್ಡ ಸ್ಕೋರ್ ದಾಖಲೆಯನ್ನು ಪೃಥ್ವಿ ಶಾ ಮುರಿದಿದ್ದಾರೆ.

ವಾಸ್ತವವಾಗಿ ಕಳೆದ ವರ್ಷ ನಡೆದ ಪಂದ್ಯಾವಳಿಯಲ್ಲಿ ರಾಬಿನ್ಸನ್ 206 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಈ ಪಂದ್ಯಾವಳಿಯಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಕಲೆಹಾಕಿದ್ದ ಬ್ಯಾಟರ್ ಎನಿಸಿಕೊಂಡಿದ್ದರು. ಆದರೆ ಇದೀಗ ಪೃಥ್ವಿ ಕೇವಲ 153 ಎಸೆತಗಳಲ್ಲಿ 244 ರನ್ ಬಾರಿಸುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದಾರೆ. ನಾರ್ಥಾಂಪ್ಟನ್ ಶೈರ್ ಹಾಗೂ ಸೋಮರ್ ಸೆಟ್ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್ ಶೈರ್ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 415 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

Prithvi Shaw: 39 ಎಸೆತಗಳಲ್ಲಿ 65 ರನ್! ಮೊದಲ ಕೌಂಟಿ ಪಂದ್ಯದಲ್ಲೇ ಅಬ್ಬರಿಸಿದ ಪೃಥ್ವಿ ಶಾ

ರನ್ ಬರಕ್ಕೆ ವಿದಾಯ

ಈ ಪಂದ್ಯದಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಕೇವಲ 129 ಎಸೆತಗಳಲ್ಲಿ 24 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 200 ರನ್ ಪೂರೈಸಿದರು. ಅಂತಿಮವಾಗಿ ಶಾ 244 ರನ್ ಕಲೆಹಾಕಿ ತಮ್ಮ ವಿಕೆಟ್ ಒಪ್ಪಿಸಿದರು. ಅವರ ಬಿರುಸಿನ ಈ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 24 ಬೌಂಡರಿ ಮತ್ತು 11 ಸಿಕ್ಸರ್‌ಗಳು ಸೇರಿದ್ದವು. ಮೊದಲೆರಡು ಪಂದ್ಯಗಳಲ್ಲಿ ಕೇವಲ 60 ರನ್ ಕಲೆಹಾಕಿದ್ದ ಪೃಥ್ವಿ ಮೂರನೇ ಪಂದ್ಯದಲ್ಲಿ ತಮ್ಮ ರನ್ ಬರವನ್ನು ಕೊನೆಗೊಳಿಸಿದರು. ಈ ದ್ವಿಶಕದೊಂದಿಗೆ ಈ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಅತಿ ವೇಗದ ದ್ವಿಶತಕ

ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ, ಶಾ 34 ರನ್‌ಗಳಿಗೆ ಹಿಟ್ ವಿಕೆಟ್‌ಗೆ ಬಲಿಯಾಗಿದ್ದರು, ಬಳಿಕ ಎರಡನೇ ಪಂದ್ಯದಲ್ಲಿ ಸಸೆಕ್ಸ್ ವಿರುದ್ಧ ಕೇವಲ 26 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿರುವ ಪೃಥ್ವಿ, ದ್ವಿಶತಕ ಬಾರಿಸುವ ಮೂಲಕ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಅವರು ಇಂಗ್ಲೆಂಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ ಎರಡನೇ ದ್ವಿಶತಕವಾಗಿದೆ.

ಐಪಿಎಲ್‌ನಲ್ಲೂ ರನ್ ಬರ ಎದುರಿಸಿದ್ದ ಪೃಥ್ವಿ

23ರ ಹರೆಯದ ಪೃಥ್ವಿ ಟೀಂ ಇಂಡಿಯಾದಿಂದ ಬಹಳ ದಿನಗಳಿಂದ ಹೊರಗುಳಿದಿದ್ದಾರೆ. 2021ರ ಜುಲೈನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದ ಶಾ. ದೇಶೀಯ ಪಂದ್ಯಾವಳಿ ಸೇರಿದಂತೆ ಐಪಿಎಲ್​ನಲ್ಲೂ ಕಳಪೆ ಫಾರ್ಮ್​ನಿಂದ ಬಳಲಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಪೃಥ್ವಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ ಕೇವಲ 106 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಸ್ಫೋಟಕ ಬ್ಯಾಟರ್​ಗೆ ಟೀಂ ಇಂಡಿಯಾ ಕದ ಭಾಗಶಃ ಮುಚ್ಚಿದೆ ಎಂದೇ ಹೇಳಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Leave A Reply

Your email address will not be published.