ಭಾರತಕ್ಕೆ ಸುಲಭ ತುತ್ತಾದ ಪಾಕಿಸ್ತಾನ; ಸೆಮೀಸ್ಗೆ ಟೀಂ ಇಂಡಿಯಾ! ಟೂರ್ನಿಯಿಂದ ಪಾಕ್ ಔಟ್ – Kannada News | Asian Champions Trophy 2023 India beat Pakistan by 4 0 face Japan in semi final
Asian Champions Trophy 2023: ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಹಾಕಿ ತಂಡಗಳ ನಡುವಿನ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಕಿ ತಂಡವನ್ನು 4-0 ಗೋಲುಗಳ ಅಂತರದಿಂದ ಏಕಪಕ್ಷೀವಾಗಿ ಮಣಿಸಿದೆ.
ಭಾರತ- ಪಾಕಿಸ್ತಾನ
ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ (Chennai’s Mayor Radhakrishnan Stadium) ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ಹಾಕಿ ತಂಡಗಳ ನಡುವಿನ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy 2023) ಲೀಗ್ ಪಂದ್ಯದಲ್ಲಿ ಭಾರತ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಕಿ ತಂಡವನ್ನು 4-0 ಗೋಲುಗಳ ಅಂತರದಿಂದ ಏಕಪಕ್ಷೀವಾಗಿ ಮಣಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಟೀಂ ಇಂಡಿಯಾ (Team India) ಸುಲಭವಾಗಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭದಿಂದಲೇ ಪಾಕ್ ಎದುರು ಟೀಂ ಇಂಡಿಯಾ ಮುನ್ನಡೆ ಸಾಧಿಸಿತ್ತು. ಈ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಒಂದೇ ಒಂದು ಗೋಲು ಬಿಟ್ಟುಕೊಡಲಿಲ್ಲ.
ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದರೆ, ಭಾರತದ ಎದುರು ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ, ಈ ಪಂದ್ಯಾವಳಿಯಿಂದ ಹೊರಬಿದ್ದಿದೆ. ಇದೀಗ ಭಾರತ ಹಾಕಿ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಜಪಾನ್ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಹಾಗೆಯೇ ಎರಡನೇ ಸೆಮಿಫೈನಲ್ ಪಂದ್ಯ ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ನಡುವೆ ನಡೆಯಲಿದೆ.
India outshines Pakistan, seizing a spectacular 4-0 victory and marching confidently into the semifinals!💙
🇮🇳 India 4-0 Pakistan 🇵🇰#HockeyIndia #IndiaKaGame #HACT2023 #IndvsPak@CMO_Odisha @CMOTamilnadu @asia_hockey @FIH_Hockey @IndiaSports @Media_SAI @sports_odisha pic.twitter.com/XApEYnWV4v
— Hockey India (@TheHockeyIndia) August 9, 2023
ಪಾಕ್ ತಂಡಕ್ಕೆ ಅವಕಾಶವೇ ಸಿಗಲಿಲ್ಲ
ಪಂದ್ಯ ಆರಂಭಗೊಂಡ ಮೊದಲ 2 ನಿಮಿಷದಲ್ಲಿಯೇ ಪಾಕಿಸ್ತಾನ ತಂಡ ತನ್ನ ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶಿಸಲು ಆರಂಭಿಸಿತು. ಆದರೆ ಟೀಂ ಇಂಡಿಯಾದ ತಂತ್ರದ ಮುಂದೆ ಪಾಕಿಸ್ತಾನದ ಆಕ್ರಮಣಕಾರಿ ಶೈಲಿ ತಣ್ಣಗಾಯಿತು. ಇದಾದ ಬಳಿಕ ಭಾರತ ತಂಡ, ಇಡೀ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕಮ್ ಬ್ಯಾಕ್ ಮಾಡುವ ಅವಕಾಶವನ್ನೇ ನೀಡಲಿಲ್ಲ. ಪಂದ್ಯದ 36ನೇ ನಿಮಿಷದಲ್ಲಿ ಟೀಂ ಇಂಡಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಜುಗರಾಜ್ ಸಿಂಗ್ ಗೋಲಾಗಿ ಪರಿವರ್ತಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಅದನ್ನೂ ಕೂಡ ತಂಡದ ನಾಯಕ ಮತ್ತೊಮ್ಮೆ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಭಾರತಕ್ಕೆ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲಾಗಲಿಲ್ಲ. ಹೀಗಾಗಿ ವಿರಾಮದ ವೇಳೆಗೆ ಭಾರತ 2-0 ಮುನ್ನಡೆ ಸಾಧಿಸಿತ್ತು. ನಾಯಕ ಹರ್ಮನ್‌ಪ್ರೀತ್ 14 ಮತ್ತು 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ಎರಡೂ ಗೋಲುಗಳನ್ನು ಬಾರಿಸಿದರು.
Harmanpreet Singh’s mighty pair of goals elevate him as the Hero of the match, while Vivek Sagar Prasad shines as the game’s outstanding young talent.
🇮🇳 India 4-0 Pakistan 🇵🇰#HockeyIndia #IndiaKaGame #HACT2023 #INDvPAK @CMO_Odisha @CMOTamilnadu @asia_hockey @FIH_Hockey… pic.twitter.com/ZNFjgoolCw
— Hockey India (@TheHockeyIndia) August 9, 2023
ಅಂಪೈರ್ಗಳ ವಿರುದ್ಧ ಗರಂ ಆದ ಪಾಕಿಸ್ತಾನದ ಕೋಚ್
ವಿರಾಮದ ವೇಳೆ ಅಂಪೈರ್ಗಳ ವಿರುದ್ಧ ಗರಂ ಆದ ಪಾಕಿಸ್ತಾನದ ಕೋಚ್ ಮೊಹಮ್ಮದ್ ಸಕ್ಲಿನ್, ‘ಪಾಕಿಸ್ತಾನ ಉತ್ತಮವಾಗಿ ಆಡಿದರೂ ಅಂಪೈರ್ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಅಂಪೈರ್ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರುವಾಗ ಪಾಕ್ ತಂಡ ಎಷ್ಟು ಚೆನ್ನಾಗಿ ಆಡಿದರೆ ಏನು ಪ್ರಯೋಜನ’ ಎಂದು ಅಂಪೈರ್ಗಳನ್ನು ದೂರಿದರು.
ಬಳಿಕ ಆರಂಭವಾದ ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದನ್ನು ಗೋಲಾಗಿ ಪರಿವರ್ತಿಸಿದ ಯುಗರಾಜ್ ಭಾರತದ ಪರ ಮೂರನೇ ಗೋಲು ದಾಖಲಿದರು. ಈ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಪಾಕಿಸ್ತಾನಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ, ಪಾಕಿಸ್ತಾನಕ್ಕೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಆಕಾಶದೀಪ್ ಸಿಂಗ್ ಕೊನೆಯ ಸೆಷನ್ನ 55ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:26 am, Thu, 10 August 23