Asia Cup 2023: ಏಷ್ಯಾಕಪ್ ಆಡ್ತಾರಾ ರಾಹುಲ್? ಟೀಂ ಇಂಡಿಯಾ ಪ್ರಕಟ ಯಾವಾಗ? ಇಲ್ಲಿದೆ ಮಾಹಿತಿ – Kannada News | Asia Cup 2023 Practice game scheduled to decide on KL Rahuls fitness availability for Asia Cup says reports
KL Rahul: ಮಾಧ್ಯಮ ವರದಿಗಳ ಪ್ರಕಾರ, ಕೆಎಲ್ ರಾಹುಲ್ ಭಾನುವಾರ ಅಥವಾ ಸೋಮವಾರ 50 ಓವರ್‌ಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಅವರ ಫಿಟ್ನೆಸ್ ಮೇಲೆ ಗಮನ ಇಡಲಾಗುತ್ತಿದ್ದು, ಇಲ್ಲಿ ರಾಹುಲ್ ಪಾಸಾದರೆ ಏಷ್ಯಾಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಕೆಎಲ್ ರಾಹುಲ್
ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ (Asia Cup 2023) ಇದುವರೆಗೂ ಟೀಂ ಇಂಡಿಯಾವನ್ನು (Team India) ಪ್ರಕಟಿಸಿಲ್ಲ. ಸುದ್ದಿಯ ಪ್ರಕಾರ, ಸೋಮವಾರದೊಳಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವೂ ಇದ್ದು, ಇಂಜುರಿ ಸಮಸ್ಯೆಯಿಂದ ಪ್ರಸ್ತುತ ಚೇತರಿಸಿಕೊಂಡಿರುವ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಅವರ ಫಿಟ್ನೆಸ್ ಬಗ್ಗೆ ಮಾಹಿತಿ ಕಲೆಹಾಕುವ ಸಲುವಾಗಿ ಟೀಂ ಇಂಡಿಯಾ ಈ ನಿರ್ಧಾರಕ್ಕೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಕೆಎಲ್ ರಾಹುಲ್ ಭಾನುವಾರ ಅಥವಾ ಸೋಮವಾರ 50 ಓವರ್‌ಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಅವರ ಫಿಟ್ನೆಸ್ ಮೇಲೆ ಗಮನ ಇಡಲಾಗುತ್ತಿದ್ದು, ಇಲ್ಲಿ ರಾಹುಲ್ ಪಾಸಾದರೆ ಏಷ್ಯಾಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಟೆಲಿಗ್ರಾಫ್ ವರದಿಯ ಪ್ರಕಾರ, ಕೆಎಲ್ ರಾಹುಲ್ ಅವರನ್ನು ಇನ್ನೂ ಫಿಟ್ ಎಂದು ಘೋಷಿಸಲಾಗಿಲ್ಲ. ಏಕೆಂದರೆ ಅವರು ಮೊದಲು ಅಭ್ಯಾಸ ಪಂದ್ಯವನ್ನು ಆಡಬೇಕೆಂದು ಎನ್ಸಿಎ ಬಯಸಿದೆ. ಹೀಗಾಗಿ ಈ ಅಭ್ಯಾಸ ಪಂದ್ಯವನ್ನು ಭಾನುವಾರ ಅಥವಾ ಸೋಮವಾರ ಆಯೋಜಿಸುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ರಾಹುಲ್ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿದ ನಂತರವೇ ಎನ್ಸಿಎ ಅವರನ್ನು ಫಿಟ್ ಎಂದು ಘೋಷಿಸಲಿದೆ.
KL Rahul: ಟೀಂ ಇಂಡಿಯಾಗೆ ಗುಡ್ ನ್ಯೂಸ್; ಏಷ್ಯಾಕಪ್‌ಗೆ ಕೆಎಲ್ ರಾಹುಲ್ ಲಭ್ಯ..!
ರಾಹುಲ್ಗಾಗಿ ಕಾದುಕುಳಿತ ಕೋಚ್
ವರದಿಯ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದಲ್ಲಿ ಕೆಎಲ್ ರಾಹುಲ್ ಉಪಸ್ಥಿತಿ ಇರಬೇಕೆಂದು ಬಯಸಿದ್ದಾರೆ. ಇದಕ್ಕೆ ಕಾರಣವೂ ಇದ್ದು, ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ ಪ್ರಸ್ತುತ ಇರುವ 4ನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ನಿವಾರಿಸಬಲ್ಲರು. ಅಲ್ಲದೆ ರಾಹುಲ್ ಆಗಮನದಿಂದ, ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಸಮತೋಲನ ಇರುತ್ತದೆ. ಈ ಕಾರಣಕ್ಕೆ ಸ್ವತಃ ರಾಹುಲ್ ದ್ರಾವಿಡ್ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಸ್ವತಃ ಲಕ್ಷ್ಮಣ್ ಅವರು ಕೆಎಲ್ ರಾಹುಲ್ ಅವರ ಫಿಟ್ನೆಸ್ ಬಗ್ಗೆ ವೈಯಕ್ತಿಕವಾಗಿ ನಿಗಾ ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
Update on KL Rahul’s fitness ahead of Asia Cup#AsiaCup2023pic.twitter.com/Drdw24MtxC
— Subhayan Chakraborty (@CricSubhayan) August 8, 2023
ರಾಹುಲ್ ಫಿಟ್ ಆಗುವ ಸಾಧ್ಯತೆ ಇದೆ
ಕೆಎಲ್ ರಾಹುಲ್ ಫಿಟ್ ಆಗುವ ಸಾಧ್ಯತೆ ಹೆಚ್ಚು. ಏಕೆಂದರೆ ಇತ್ತೀಚೆಗಷ್ಟೇ ಕೆಎಲ್ ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಂದಹಾಗೆ, ಏಷ್ಯಾಕಪ್‌ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಕೆಎಲ್ ರಾಹುಲ್‌ಗೆ ಟೀಂ ಇಂಡಿಯಾ ಅವಕಾಶ ನೀಡಬಹುದು ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಇಶಾನ್ ಕಿಶನ್‌ಗೆ ನೀಡಬಹುದು ಎಂಬ ವರದಿಗಳೂ ಇವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ