ಈ ದಿನದಿಂದ ವಿಶ್ವಕಪ್ ಟಿಕೆಟ್ ಮಾರಾಟ ಆರಂಭ; ಭಾರತ- ಪಾಕ್ ಪಂದ್ಯದ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ವಿವರ – Kannada News | ICC ODI World Cup 2023 Tickets registration from Aug 15 Check Details in kannada
ICC ODI World Cup 2023: ಪಂದ್ಯಗಳ ದಿನಾಂಕಗಳ ಬದಲಾವಣೆಯ ಮಾಹಿತಿ ಜೊತೆಗೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟದ ಬಗ್ಗೆಯೂ ಐಸಿಸಿ ಮಾಹಿತಿ ನೀಡಿದ್ದು, ಆಗಸ್ಟ್ 15 ರಿಂದ ಟಿಕೆಟ್‌ಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 25 ರಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀಸಿದಬಹುದಾಗಿದೆ.

ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ
ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ನ (ICC ODI World Cup 2023) ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಆಗಸ್ಟ್ 9 ರಂದು ಬಿಡುಗಡೆ ಮಾಡಿದೆ. ನೂತನ ವೇಳಾಪಟ್ಟಿಯಲ್ಲಿ ಐಸಿಸಿ (ICC) ಒಟ್ಟು 9 ಪಂದ್ಯಗಳ ದಿನಾಂಕವನ್ನು ಬದಲಾಯಿಸಿದೆ. ಈ 9 ಪಂದ್ಯಗಳಲ್ಲಿ ಟೀಂ ಇಂಡಿಯಾದ 2 ಪಂದ್ಯಗಳು ಸೇರಿದ್ದರೆ, ಪಾಕಿಸ್ತಾನದ 3 ಪಂದ್ಯಗಳು ಸೇರಿವೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಈಗ ಅಕ್ಟೋಬರ್ 14 ರಂದು ನಡೆಯಲಿದೆ. ಹಾಗೆಯೇ ನವೆಂಬರ್ 12 ರಂದು ನಡೆಯಬೇಕಿದ್ದ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ನವೆಂಬರ್ 11 ರಂದು ನಡೆಯಲಿದೆ. ಪಂದ್ಯಗಳ ದಿನಾಂಕಗಳ ಬದಲಾವಣೆಯ ಮಾಹಿತಿ ಜೊತೆಗೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟದ ಬಗ್ಗೆಯೂ ಐಸಿಸಿ ಮಾಹಿತಿ ನೀಡಿದ್ದು, ಆಗಸ್ಟ್ 15 ರಿಂದ ಟಿಕೆಟ್‌ಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಆಗಸ್ಟ್ 25 ರಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀಸಿದಬಹುದಾಗಿದೆ. ಟಿಕೆಟ್ ಮಾರಾಟದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯಿಸಿದ್ದು, ‘ಕ್ರಿಕೆಟ್ ಅಭಿಮಾನಿಗಳು 2 ರೀತಿಯಲ್ಲಿ ಟಿಕೆಟ್ ಖರೀದಿಸಬಹುದು. ಟಿಕೆಟ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುತ್ತವೆ’ ಎಂದು ಜಯ್ ಶಾ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಐಸಿಸಿ ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ ಆಗಸ್ಟ್ 25 ರಿಂದ ಆನ್‌ಲೈನ್ ಟಿಕೆಟ್ ಮಾರಾಟ ಆರಂಭವಾಗಲಿದೆ. ಆದಾಗ್ಯೂ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್‌ಗಳನ್ನು ಸೆಪ್ಟೆಂಬರ್ 15 ರಿಂದ ಖರೀದಿಸಬಹುದಾಗಿದೆ.
ICC World Cup 2023 Revised Schedule: ಭಾರತ- ಪಾಕ್ ಸೇರಿದಂತೆ 9 ಪಂದ್ಯಗಳ ದಿನಾಂಕ ಬದಲಾವಣೆ! ಇಲ್ಲಿದೆ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ
ಜೈ ಶಾ ಹೇಳಿದ್ದೇನು?
ಐಸಿಸಿ ವೆಬ್‌ಸೈಟ್ ಹೊರತುಪಡಿಸಿ 7-8 ಚಾನೆಲ್‌ಗಳ ಮೂಲಕ ಆಫ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ಕ್ರಿಕೆಟ್ ಅಭಿಮಾನಿಗಳು, ಟಿಕೆಟ್‌ನ ಪ್ರಿಂಟ್ ಅನ್ನು ಕ್ರೀಡಾಂಗಣದಲ್ಲಿ ತಮ್ಮೊಂದಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಯ್ ಶಾ ಹೇಳಿದ್ದಾರೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಕ್ರಿಕೆಟ್ ಅಭಿಮಾನಿಗಳು ಆಗಸ್ಟ್ 15 ರಿಂದ ಐಸಿಸಿ ವೆಬ್‌ಸೈಟ್‌ನಲ್ಲಿ (https://www.cricketworldcup.com/register) ವಿಶ್ವಕಪ್ ಟಿಕೆಟ್‌ಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ನಂತರ ಹೆಚ್ಚಿನ ಮಾಹಿತಿಯನ್ನು ಐಸಿಸಿ ಒದಗಿಸುತ್ತದೆ. ಏತನ್ಮಧ್ಯೆ, ಟೀಂ ಇಂಡಿಯಾದ ಪಂದ್ಯದ ಟಿಕೆಟ್‌ಗಳನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರ ನಡುವೆ ಖರೀದಿಸಬಹುದಾಗಿದೆ. ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಸೆಪ್ಟೆಂಬರ್ 3 ರಂದು ಖರೀದಿಗೆ ಲಭ್ಯವಿರುತ್ತವೆ.
ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ ವೇಳಾಪಟ್ಟಿ
- ಆಗಸ್ಟ್ 25 ರಂದು ಟೀಂ ಇಂಡಿಯಾವನ್ನು ಹೊರತುಪಡಿಸಿದ ಅಭ್ಯಾಸ ಪಂದ್ಯಗಳು ಮತ್ತು ಇತರ ಪಂದ್ಯಗಳ ಟಿಕೆಟ್ ಖರೀದಿಗೆ ಅವಕಾಶವಿರಲಿದೆ.
- ಆಗಸ್ಟ್ 30 ರಂದು ಗುವಾಹಟಿ ಮತ್ತು ತಿರುವನಂತಪುರದಲ್ಲಿ ನಡೆಯಲ್ಲಿರುವ ಭಾರತದ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
- ಆಗಸ್ಟ್ 31 ರಂದು ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲ್ಲಿರುವ ಭಾರತದ ಪಂದ್ಯಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರಲಿವೆ.
- ಸೆಪ್ಟೆಂಬರ್ 1 ರಂದು ಧರ್ಮಶಾಲಾ, ಲಕ್ನೋ ಮತ್ತು ಮುಂಬೈನಲ್ಲಿ ನಡೆಯಲ್ಲಿರುವ ಭಾರತದ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
- ಸೆಪ್ಟೆಂಬರ್ 2 ರಂದು ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಡೆಯಲ್ಲಿರುವ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
- ಸೆಪ್ಟೆಂಬರ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ಭಾರತದ ಪಂದ್ಯಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರಲಿವೆ.
- ಸೆಪ್ಟೆಂಬರ್ 15 ರಂದು ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 8:19 am, Thu, 10 August 23