Asia Cup 2023: ಏಕದಿನ ಏಷ್ಯಾಕಪ್ಗೆ 18 ಸದಸ್ಯರ ಬಲಿಷ್ಠ ಪಾಕಿಸ್ತಾನ ತಂಡ ಪ್ರಕಟ..! – Kannada News | PCB announces 18 members Pakistan squad for Asia Cup 2023 Babar Azam lead the team
Asia Cup 2023: ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್ಗೆ 18 ಸದಸ್ಯರ ಬಲಿಷ್ಠ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಎಂದಿನಂತೆ ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕಣಕ್ಕಿಳಿಯಲಿದ್ದು, ತಂಡದ ಉಪನಾಯಕನಾಗಿ ಶಾದಾಬ್ ಖಾನ್ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ ತಂಡ (ಪ್ರಾತಿನಿಧಿಕ ಚಿತ್ರ)
ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್ಗೆ (Asia Cup 2023) 18 ಸದಸ್ಯರ ಬಲಿಷ್ಠ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರಕಟಿಸಿದೆ. ಎಂದಿನಂತೆ ಬಾಬರ್ ಅಜಮ್ (Babar Azam) ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕಣಕ್ಕಿಳಿಯಲಿದ್ದು, ತಂಡದ ಉಪನಾಯಕನಾಗಿ ಶಾದಾಬ್ ಖಾನ್ (Shadab Khan) ಆಯ್ಕೆಯಾಗಿದ್ದಾರೆ. ಇದೀಗ ಏಷ್ಯಾಕಪ್ಗೆ ಆಯ್ಕೆಯಾಗಿರುವ ಇದೇ ತಂಡ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಪಾಕಿಸ್ತಾನ ತಂಡದ ಹೊಸ ಮುಖ್ಯ ಆಯ್ಕೆಗಾರರಾಗಿ ಆಯ್ಕೆಯಾದ ಇಂಜಮಾಮ್-ಉಲ್-ಹಕ್ (Inzamam-ul-Haq) ನೇತೃತ್ವದಲ್ಲಿ ಈ ತಂಡವನ್ನು ಪ್ರಕಟಿಸಲಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ 18 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಈ ಏಕದಿನ ಸರಣಿಗೆ ಆಯ್ಕೆಯಾಗಿರುವ ತಂಡದ 17 ಮಂದಿ ಏಷ್ಯಾಕಪ್ ಆಡಲಿದ್ದಾರೆ. ಇದರಲ್ಲಿ ಏಷ್ಯಾಕಪ್ನಲ್ಲಿ ಆಡದ ಏಕೈಕ ಆಟಗಾರನೆಂದರೆ ಅದು ಸೌದ್ ಶಕೀಲ್.
ಇನ್ನು ಏಷ್ಯಾಕಪ್ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಕ್ಕಿದೆ? ಯಾರು ಅವಕಾಶ ವಂಚಿತರಾಗಿದ್ದಾರೆ ಎಂಬುದನ್ನು ನೋಡುವುದಾದರೆ.. ಸೌದ್ ಶಕೀಲ್ ಏಷ್ಯಾಕಪ್ ತಂಡದಿಂದ ಹೊರಬಿದ್ದಿದ್ದರೆ, ಫಹೀಮ್ ಅಶ್ರಫ್ ಎರಡು ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಫಹೀಮ್, ವೇಗದ ಬೌಲಿಂಗ್ ಜೊತೆಗೆ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸಬಲ್ಲರು. ಇವರೊಂದಿಗೆ ಮೊಹಮ್ಮದ್ ಹ್ಯಾರಿಸ್ ಕೂಡ ಎರಡನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
🚨 Our squad for the Afghanistan series and Asia Cup 🚨
Read more: https://t.co/XtjcVAmDV7#AFGvPAK | #AsiaCup2023 pic.twitter.com/glpVWF6oWW
— Pakistan Cricket (@TheRealPCB) August 9, 2023
KL Rahul: ಟೀಂ ಇಂಡಿಯಾಗೆ ಗುಡ್ ನ್ಯೂಸ್; ಏಷ್ಯಾಕಪ್ಗೆ ಕೆಎಲ್ ರಾಹುಲ್ ಲಭ್ಯ..!
ಶಾನ್ ಮಸೂದ್ ಔಟ್
ಇನ್ನು ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ರಮವಾಗಿ 0,1, 44, 7 ರನ್ ಕಲೆಹಾಕಿ ಕಳಪೆ ಪ್ರದರ್ಶನ ನೀಡಿದ್ದ ಶಾನ್ ಮಸೂದ್ರ್ನ್ನು ಸಹ ಏಷ್ಯಾಕಪ್ ತಂಡದಿಂದ ಕೈಬಿಡಲಾಗಿದೆ. ಮಸೂದ್ರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ ಇಂಜಮಾಮ್, ‘ಇತ್ತೀಚಿನ ದಿನಗಳಲ್ಲಿ ಎಡಗೈ ಬ್ಯಾಟರ್ನ ಪ್ರದರ್ಶನ ತೀರ ಕಡಿಮೆಯಾಗಿದೆ. ಹೀಗಾಗಿ ಈ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಇತರ ಕೆಲವು ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.
ತಂಡದಲ್ಲಿ ಇನ್ನೊಬ್ಬ ಆಲ್ರೌಂಡರ್ ಇಲ್ಲ
ಹಾಗೆಯೇ ಅಶ್ರಫ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಇಂಜಮಾಮ್, ‘ ತಂಡಕ್ಕೆ ವೇಗದ ಬೌಲಿಂಗ್ ಆಲ್-ರೌಂಡರ್ ಅಗತ್ಯವಿರುವುದರಿಂದ ಅಶ್ರಫ್ಗೆ ಆಧ್ಯತೆ ನೀಡಲಾಗಿದೆ. ಏಕೆಂದರೆ ತಂಡದಲ್ಲಿ ಇನ್ನೊಬ್ಬ ಆಲ್ರೌಂಡರ್ ಇಲ್ಲ. ನೀವು ಪಿಎಸ್ಎಲ್ ಮತ್ತು ಇತರ ಪಂದ್ಯಾವಳಿಗಳನ್ನು ನೋಡಿದರೆ, ನಮಗೆ ಆಲ್ರೌಂಡರ್ ಅವಶ್ಯಕತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಅಶ್ರಫ್ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಏಷ್ಯಾಕಪ್ನಲ್ಲಿ ಆಡುವುದರೊಂದಿಗೆ ಏಕದಿನ ವಿಶ್ವಕಪ್ನಲ್ಲೂ ನೆರವಾಗಲಿದ್ದಾರೆ’ ಎಂದಿದ್ದಾರೆ
ಏಷ್ಯಾಕಪ್ಗೆ ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 6:15 pm, Wed, 9 August 23