2024ರ ಟಿ20 ವಿಶ್ವಕಪ್ ಆಡುವ ಬಗ್ಗೆ ಸುಳಿವು ನೀಡಿದ ರೋಹಿತ್ ಶರ್ಮಾ; ವಿಡಿಯೋ ನೋಡಿ – Kannada News | Rohit Sharma confirmed his availability for T20 World Cup 2024 watch video
Rohit Sharma: ಕಳೆದ ಬಾರಿಯ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 10 ವಿಕೆಟ್‌ಗಳ ಮುಜುಗರದ ಸೋಲಿನ ನಂತರ, ರೋಹಿತ್ ಮತ್ತು ವಿರಾಟ್ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿಲ್ಲ.
Image Credit source: insidesport
ಕಳೆದ ವರ್ಷ ಅಂದರೆ, 202ರಲ್ಲಿ ನಡೆದ ಟಿ20 ವಿಶ್ವಕಪ್ (T20 World Cup) ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ (India vs England) 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂದಿನಿಂದ ಯಾವುದೇ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಚುಟುಕು ಮಾದರಿಯಲ್ಲಿ ರೋಹಿತ್ ಹಾಗೂ ಕೊಹ್ಲಿ ಯುಗ ಅಂತ್ಯವಾಗಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ. ಆದರೆ ಇದೀಗ ಮುಂದಿನ ವರ್ಷ ಅಂದರೆ 2024 ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ತಾನು ಸಹ ಆಡುವ ಬಗ್ಗೆ ರೋಹಿತ್ ಶರ್ಮಾ ಸುಳಿವು ನೀಡಿದ್ದಾರೆ. ವಾಸ್ತವವಾಗಿ ಅಮೆರಿಕಾದಲ್ಲಿ ತನ್ನ ಕ್ರಿಕಿಂಗ್‌ಡಮ್ (Crickingdom) ಹೆಸರಿನ ಕ್ರಿಕೆಟ್ ಅಕಾಡೆಮಿಯನ್ನು ರೋಹಿತ್ ಆರಂಭಿಸಿದ್ದಾರೆ. ವಿಂಡೀಸ್ ಪ್ರವಾಸ ಮುಗಿಸಿದ ಬಳಿಕ ಅಮೆರಿಕಾಕ್ಕೆ ಹಾರಿರುವ ರೋಹಿತ್, ಕ್ರಾಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ಮಾತನಾಡಿದ ರೋಹಿತ್ ಟಿ20 ವಿಶ್ವಕಪ್ ಆಡುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ವಾಸ್ತವವಾಗಿ ರೋಹಿತ್ ಶರ್ಮಾ ಅವರನ್ನು ಟಿ20 ಕ್ರಿಕೆಟ್ ಹೇಳಿ ಮಾಡಿಸಿದ ಆಟಗಾರ ಎನ್ನಲಾಗುತ್ತದೆ. ಇದಕ್ಕೆ ಪೂರಕವಾಗಿ ಈ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡಿರುವ ರೋಹಿತ್, ಈ ಚುಟುಕು ಮಾದರಿಯಲ್ಲಿ ನಾಲ್ಕು ಶತಕ ಸಿಡಿಸುವುದರೊಂದಿಗೆ, ಅತ್ಯಧಿಕ ಶತಕ ಬಾರಿಸಿದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಆದರೆ ಕಳೆದ ಬಾರಿಯ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 10 ವಿಕೆಟ್‌ಗಳ ಮುಜುಗರದ ಸೋಲಿನ ನಂತರ, ರೋಹಿತ್ ಮತ್ತು ವಿರಾಟ್ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿಲ್ಲ.
ಹಿಟ್‌ಮ್ಯಾನ್ ಸಾಮ್ರಾಜ್ಯ ವಿಸ್ತರಣೆ! ಅಮೆರಿಕದಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ರೋಹಿತ್ ಶರ್ಮಾ
ಪ್ರಸ್ತುತ ಪಾಂಡ್ಯ ಟಿ20 ತಂಡದ ನಾಯಕ
ಅವರ ಅನುಪಸ್ಥಿತಿಯಲ್ಲಿ, ಹಾರ್ದಿಕ್ ಪಾಂಡ್ಯ ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮೊದಲ ಬಾರಿಗೆ ಮುನ್ನಡೆಸಿದ್ದರು. ಆ ಬಳಿಕ ಜನವರಿ 2023 ರಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
Rohit Sharma said – More than just going & enjoying there is an other reason to come here. Bcoz you knw the WC is coming, In June there will be T20 World Cup(2024) happening, I’m pretty sure everyone is excited. We look forward to that.
Great News for all #RohitSharma𓃵 fans 🥹 pic.twitter.com/w3MNdAE95K
— 𝐂𝐡𝐚𝐢𝐭𝐡𝐮 🇮🇳 (@ChaitRo45) August 6, 2023
ನಾವು ಅದನ್ನು ಎದುರು ನೋಡುತ್ತಿದ್ದೇವೆ
ಹೀಗಾಗಿ ರೋಹಿತ್ ಮತ್ತು ವಿರಾಟ್ ಭಾರತದ ಪರ ಟಿ20 ಕ್ರಿಕೆಟ್ ಆಡುವುದು ಅನುಮಾನ ಎಂದು ಅನೇಕರು ಭಾವಿಸಿದ್ದರು. ಆದರೆ ಇದೀಗ ರೋಹಿತ್ ನೀಡಿರು ಹೇಳಿಕೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಯುಎಸ್ಎಯಲ್ಲಿ ತನ್ನ ಅಕಾಡೆಮಿಯ ಪ್ರಾರಂಭದಲ್ಲಿ ಮಾತನಾಡಿದ ಈ ಬಲಗೈ ಬ್ಯಾಟರ್, ಮುಂದಿನ ವರ್ಷದ ಟಿ 20 ವಿಶ್ವಕಪ್‌ಗಾಗಿ ಅಮೆರಿಕಾಗೆ (2024ರ ಟಿ20 ವಿಶ್ವಕಪ್ಗೆ ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ) ಭೇಟಿ ನೀಡಲು ಎದುರು ನೋಡುತ್ತಿದ್ದೇನೆ. ಇಲ್ಲಿಗೆ (ಯುಎಸ್‌ಎಯಲ್ಲಿ) ಬರಲು ಇನ್ನೊಂದು ಕಾರಣವಿದೆ. ಏಕೆಂದರೆ ಮುಂದಿನ ವರ್ಷ ವಿಶ್ವಕಪ್ ಬರಲಿದೆ ಎಂದು ನಿಮಗೆ ತಿಳಿದಿದೆ. ಮುಂದಿನ ಜೂನ್‌ನಲ್ಲಿ ಇಲ್ಲಿ ಟಿ20 ವಿಶ್ವಕಪ್ (2024) ನಡೆಯಲಿದೆ. ಈ ಮಿನಿ ವಿಶ್ವ ಸಮರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಉತ್ಸುಕರಾಗಿದ್ದಾರೆ ಎಂದು ನನಗೆ ಖಚಿತವಾಗಿದೆ. ಹಾಗಾಗಿ, ನಾವು ಅದನ್ನು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಹೇಳುತ್ತಿರುವ ವೀಡಿಯೊ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಸೆಪ್ಟೆಂಬರ್ 19, 2007 ರಂದು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಕೆ ಪದಾರ್ಪಣೆ ಮಾಡಿದ ರೋಹಿತ್, ಇಲ್ಲಿಯವರೆಗೆ ಟಿ20 ವಿಶ್ವಕಪ್‌ನ ಎಲ್ಲಾ ಎಂಟು ಆವೃತ್ತಿಗಳಲ್ಲಿ ಆಡಿದ ಏಕೈಕ ಕ್ರಿಕೆಟಿಗರಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:27 pm, Sun, 6 August 23