EBM News Kannada
Leading News Portal in Kannada

ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ – Kannada News | PM Narendra Modi Lauds Record Breaking World Universities Championship Medal

0


World Universities Championship: ಜುಲೈ 28 ರಿಂದ ಶುರುವಾದ ವಿಶ್ವ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಗಸ್ಟ್​ 8 ರಂದು ತೆರೆಬಿದ್ದಿದೆ. 9,500 ಪ್ರತಿಭಾವಂತ ವಿದ್ಯಾರ್ಥಿ-ಕ್ರೀಡಾಪಟುಗಳು ಭಾಗವಹಿಸಿದ್ದರು.

ಚೀನಾದ ಚೆಂಗ್ಡುನಲ್ಲಿ ನಡೆದ 31ನೇ ವರ್ಲ್ಡ್​ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಒಟ್ಟು 26 ಪದಕಗಳನ್ನು ಗೆದ್ದಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಹಲವು ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತೀಯ ಯುವ ಅಥ್ಲೀಟ್​ಗಳು 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಅದ್ಭುತ ಪ್ರದರ್ಶನಗದೊಂದಿಗೆ ಭಾರತ ತಂಡವು ಪದಕ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದೆ.

ಈ ಹಿಂದೆ ನಡೆದ ವಿಶ್ವ ವಿಶ್ವವಿದ್ಯಾನಿಲಯಗಳ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತ ತಂಡವು ಒಟ್ಟು 21 ಪದಕಗಳನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 26 ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.

ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ಪ್ರದರ್ಶನ! 31ನೇ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು 26 ಪದಕಗಳ ದಾಖಲೆಯೊಂದಿಗೆ ಹಿಂತಿರುಗಿದ್ದಾರೆ. ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತೀಯರು 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರಕ್ಕೆ ಕೀರ್ತಿ ತಂದ ಮತ್ತು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದ ನಮ್ಮ ಕ್ರೀಡಾಪಟುಗಳಿಗೆ ಅಭಿವಾದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟ:

ಜುಲೈ 28 ರಿಂದ ಶುರುವಾದ ವಿಶ್ವ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಗಸ್ಟ್​ 8 ರಂದು ತೆರೆಬಿದ್ದಿದೆ. 9,500 ಪ್ರತಿಭಾವಂತ ವಿದ್ಯಾರ್ಥಿ-ಕ್ರೀಡಾಪಟುಗಳು ಭಾಗವಹಿಸಿದ್ದ ಈ ಗೇಮ್ಸ್​ನಲ್ಲಿ 18 ಸ್ಪರ್ಧೆಗಳನ್ನು ನಡೆಸಲಾಗಿತ್ತು. ಇದರಲ್ಲಿ 90 ಚಿನ್ನದ ಪದಕ, 37 ಬೆಳ್ಳಿ ಹಾಗೂ 33 ಕಂಚುಗಳೊಂದಿಗೆ ಒಟ್ಟು  160 ಪದಕಗಳನ್ನು ಗೆದ್ದಿರುವ ಚೀನಾ ವಿಶ್ವವಿದ್ಯಾಲಯವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಇನ್ನು 20 ಚಿನ್ನ, 28 ಬೆಳ್ಳಿ ಹಾಗೂ 35 ಕಂಚಿನ ಪದಕದೊಂದಿಗೆ ಒಟ್ಟು 83 ಪದಕಗಳನ್ನು ಗೆದ್ದಿರುವ ಜಪಾನ್ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ 17 ಚಿನ್ನ, 15 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 52 ಪದಕಗಳನ್ನು ತಮ್ಮದಾಗಿಸಿಕೊಂಡಿರುವ ರಿಪಬ್ಲಿಕ್ ಆಫ್ ಕೊರಿಯಾ ಮೂರನೇ ಸ್ಥಾನ ಅಲಂಕರಿಸಿದೆ.

Published On – 10:27 pm, Tue, 8 August 23

ತಾಜಾ ಸುದ್ದಿLeave A Reply

Your email address will not be published.