EBM News Kannada
Leading News Portal in Kannada

ನಮಾಜ್ ಮಾಡಲಿಕ್ಕಿದೆ: ಸಂದರ್ಶನ ಬೇಗ ಮುಗಿಸಿ ಎಂದ ಬಾಬರ್ ಆಝಂ – Kannada News | Babar Azam asking the reporters to hurry up as he has to go for prayers in LPL 2023

0


Babar Azam LPL 2023: ಕೊಲಂಬೊ ಸ್ಟ್ರೈಕರ್ಸ್ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬಾಬರ್ ಅವರನ್ನು ಪಂದ್ಯ ಮುಗಿದ ನಂತರ ಸಂದರ್ಭ ಮಾಡಲೆಂದಯ ವರದಿಗಾರರು ಕಾದು ಕುಳಿತಿದ್ದರು. ಈ ಸಂದರ್ಭ ಬಾಬರ್ ಆಡಿದ ಮಾತು ವೈರಲ್ ಆಗುತ್ತಿದೆ.

ಶ್ರೀಲಂಕಾದಲ್ಲಿ ಸಾಗುತ್ತಿರುವ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (Lanka Premier League) ಕೊಲಂಬೊ ಸ್ಟ್ರೈಕರ್ಸ್ ತಂಡದ ಪರ ಆಡುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸೋಮವಾರ ನಡೆದ ಲೀಗ್​ನ 10ನೇ ಪಂದ್ಯದಲ್ಲಿ ಗಾಲೆ ಟೈಟಾನ್ಸ್ (Colombo Strikers vs Galle Titans) ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟ ಬಾಬರ್ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಕೂಡ ಬರೆದರು. ಕೇವಲ 59 ಎಸೆತಗಳಲ್ಲಿ 8 ಫೋರ್, 5 ಸಿಕ್ಸರ್ ಸಿಡಿಸಿ 104 ರನ್ ಚಚ್ಚಿದರು. ಆದರೆ, ಪಂದ್ಯ ಮುಗಿದ ಬಳಿಕ ಇವರನ್ನು ಸಂದರ್ಶನಕ್ಕೆಂದು ವರದಿಗಾರರು ಬಂದಾಗ ಬಾಬರ್ (Babar Azam) ಆಡಿದ ಮಾತು ವೈರಲ್ ಆಗುತ್ತಿದೆ.

ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬಾಬರ್ ಅವರನ್ನು ಪಂದ್ಯ ಮುಗಿದ ನಂತರ ಸಂದರ್ಶನ ಮಾಡಲೆಂದು ವರದಿಗಾರರು ಕಾದು ಕುಳಿತಿದ್ದರು. ಈ ಸಂದರ್ಭ ಬಾಬರ್ ಅವರು ವರದಿಗಾರರ ಬಳಿ ”ಪ್ರಾರ್ಥನೆಗೆ ಹೋಗಲಿಕ್ಕಿದೆ, ಈಗಾಗಲೇ ತಡವಾಗಿದೆ, ಆದಷ್ಟು ಬೇಗ ಸಂದರ್ಶನ ಮುಗಿಸುವ,” ಎಂದು ಕೇಳಿಕೊಂಡರು. ಪಾಕಿಸ್ತಾನಿ ಬರಹಗಾರರೊಬ್ಬರು ಈ ಘಟನೆಯ ವಿಡಿಯೋವನ್ನು X ನಲ್ಲಿ (ಟ್ವಿಟ್ಟರ್​ನಲ್ಲಿ) ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಇದನ್ನೂ ಓದಿ

ಭಾರತ-ವೆಸ್ಟ್ ಇಂಡೀಸ್ 3ನೇ ಟಿ20 ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

ದಾಖಲೆ ಬರೆದ ಬಾಬರ್ ಅಝಂ:

ಗಾಲೆ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ಸ್ ಪರ ಇನಿಂಗ್ಸ್ ಆರಂಭಿಸಿದ ಬಾಬರ್ ಆಝಂ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ 10 ಶತಕ ಸಿಡಿಸಿದ 2ನೇ ಬ್ಯಾಟರ್​ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್​ನ ದೈತ್ಯ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಗೇಲ್ ಒಟ್ಟು 455 ಟಿ20 ಇನಿಂಗ್ಸ್​ಗಳಲ್ಲಿ 22 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಬಾಬರ್ 254 ಟಿ20 ಇನಿಂಗ್ಸ್​ಗಳಲ್ಲಿ 10 ಶತಕ ಬಾರಿಸಿರುವ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಗೇಲ್ ಬಳಿಕ ಟಿ20 ಕ್ರಿಕೆಟ್​ನಲ್ಲಿ 10 ಶತಕ ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

ಕೊಲಂಬೊ ಸ್ಟ್ರೈಕರ್ಸ್​ಗೆ 7 ವಿಕೆಟ್​ಗಳ ಜಯ:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗಾಲೆ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿತು. ನ್ಯೂಜಿಲೆಂಡ್​ನ ಟಿಮ್ ಸೈಫರ್ಟ್ 35 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿದರೆ, ಶೆವೊನ್ ಡೆನಿಯಲ್ 49 ಮತ್ತು ಲಸಿತ್ ಕ್ರೂಸ್​ಪುಲ್ 36 ರನ್ ಗಳಿಸಿದರು. ಕೊಲಂಬೊ ಪರ ನಸೀಂ ಶಾ, ಮೆಂಡಿಸ್ ಮತ್ತು ಸಂದಕನ್ ತಲಾ 1 ವಿಕೆಟ್ ಪಡೆದರು. 189 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಕೊಲಂಬೊ ಬಾಬರ್ ಅವರ 104 ಮತ್ತು ಪಥುಮ್ ನಿಸ್ಸಂಕ ಅವರ 54 ರನ್​ಗಳ ನೆರವಿನಿಂದ 19.5 ಓವರ್​ನಲ್ಲಿ ಗೆಲುವು ಕಂಡಿತು.

ತಾಜಾ ಸುದ್ದಿ



Leave A Reply

Your email address will not be published.