EBM News Kannada
Leading News Portal in Kannada

ಆರಂಭಿಕರ ವೈಫಲ್ಯ: ಪವರ್​ಪ್ಲೇನಲ್ಲೇ ಪವರ್​ ಕಳೆದುಕೊಂಡ ಟೀಮ್ ಇಂಡಿಯಾ – Kannada News | Ishan Kishan and Shubman Gill Struggling For Good Start

0


India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಸರಣಿ ಕೆರಿಬಿಯನ್ನರ ಪಾಲಾಗಲಿದೆ.

Shubman Gill-Ishan Kishan

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ (Team India) ಮುಗ್ಗರಿಸಿದೆ. ಚುಟುಕು ಕ್ರಿಕೆಟ್​ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಭಾರತ ತಂಡವು ಕೆರಿಬಿಯನ್ ನಾಡಲ್ಲಿ ಕಮಾಲ್ ಮಾಡುವಲ್ಲಿ ಎಡವುತ್ತಿದೆ. ಅದರಲ್ಲೂ ಮೊದಲೆರಡು ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್​ಗಳು ಕೈಕೊಟ್ಟಿದ್ದರು. ಇದಕ್ಕೆ ಸಾಕ್ಷಿಯೇ 2 ಪಂದ್ಯಗಳಲ್ಲೂ ಭಾರತೀಯ ಬ್ಯಾಟ್ಸ್​ಮನ್​ಗಳು ಕಲೆಹಾಕಿದ ಮೊತ್ತ.

ಮೊದಲ ಟಿ20 ಪಂದ್ಯದಲ್ಲಿ 145 ರನ್​ಗಳಿಸಿ 4 ರನ್​ಗಳಿಂದ ಸೋಲೊಪ್ಪಿಕೊಂಡಿದ್ದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 152 ರನ್​ಗಳು. ಅಂದರೆ ಅತಿರಥ ಮಹಾರಥರು ಎನಿಸಿಕೊಂಡಿರುವ ಬ್ಯಾಟರ್​ಗಳಿದ್ದರೂ ಸ್ಪರ್ಧಾತ್ಮಕ ಮೊತ್ತಗಳಿಸುವಲ್ಲಿ ಭಾರತ ತಂಡ ವಿಫಲವಾಗುತ್ತಿದೆ. ಇದಕ್ಕೆ ಒಂದು ಕಾರಣ ಉತ್ತಮ ಆರಂಭದ ವೈಫಲ್ಯತೆ.

ಆರಂಭಿಕರಿಬ್ಬರೂ ವಿಫಲ:

ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಇಬ್ಬರಿಬ್ಬರ ಜೊತೆಯಾಟದ ಅಂಕಿ ಅಂಶಗಳು.
ಅಂದರೆ ಕೊನೆಯ 8 ಇನಿಂಗ್ಸ್​ಗಳನ್ನು ತೆಗೆದುಕೊಂಡರೂ ಗಿಲ್ ಹಾಗೂ ಇಶಾನ್ ಮೊದಲ ವಿಕೆಟ್​ಗೆ ಕನಿಷ್ಠ 30 ರನ್​ಗಳ ಜೊತೆಯಾಟವಾಡಿಲ್ಲ.

27, 12, 3, 10, 17, 7, 5, 16…ಇದು ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ಅವರ ಕೊನೆಯ 8 ಟಿ20 ಇನಿಂಗ್ಸ್​ಗಳ ಜೊತೆಯಾಟ. ಅಂದರೆ ಪವರ್​ಪ್ಲೇನಲ್ಲೇ ಟೀಮ್ ಇಂಡಿಯಾ ಮೊದಲ ವಿಕೆಟ್​ ಕಳೆದುಕೊಳ್ಳುತ್ತಿರುವುದು ಸ್ಪಷ್ಟ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 6 ರನ್​ಗಳಿಸಿ ಔಟಾದರೆ, ಶುಭ್​ಮನ್ ಗಿಲ್ ಕೇವಲ 3 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2ನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ 7 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ 23 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 27 ರನ್​ ಮಾತ್ರ.

ಅಂದರೆ ಪವರ್​ಪ್ಲೇನಲ್ಲಿ ಅಬ್ಬರಿಸುವಲ್ಲಿ ಟೀಮ್ ಇಂಡಿಯಾದ ಇಬ್ಬರು ಆರಂಭಿಕರುವ ವಿಫಲರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಕೂಡ ಬೇಗನೆ ವಿಕೆಟ್ ಒಪ್ಪಿಸುತ್ತಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಇದಾಗ್ಯೂ ಮೂರನೇ ಟಿ20 ಪಂದ್ಯದಲ್ಲಾದರೂ ಇಶಾನ್ ಹಾಗೂ ಗಿಲ್ ಭಾರತ ತಂಡಕ್ಕೆ ಶುಭಾರಂಭ ಒದಗಿಸಲಿದ್ದಾರಾ ಕಾದು ನೋಡಬೇಕಿದೆ.

ಮಾಡು ಇಲ್ಲವೇ ಮಡಿ ಪಂದ್ಯ:

ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಸರಣಿ ಕೆರಿಬಿಯನ್ನರ ಪಾಲಾಗಲಿದೆ. ಹೀಗಾಗಿ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ತಾಜಾ ಸುದ್ದಿ

Leave A Reply

Your email address will not be published.