EBM News Kannada
Leading News Portal in Kannada

ತನ್ನ ಚೊಚ್ಚಲ ಅರ್ಧಶತಕವನ್ನು ರೋಹಿತ್ ಶರ್ಮಾ ಮಗಳಿಗೆ ಅರ್ಪಿಸಿದ ತಿಲಕ್ ವರ್ಮಾ: ಯಾಕೆ ಗೊತ್ತೇ? – Kannada News | Tilak Varma dedicated his maiden T20I half century to Rohit Sharma’s daughter Samaira

0

Vinay Bhat |

Updated on: Aug 07, 2023 | 10:35 AM

Tilak Varma, IND vs WI 2nd T20I: ತಿಲಕ್ ವರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ತನ್ನ ದ್ವಿತೀಯ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇದೀಗ ತಿಲಕ್ ತಮ್ಮ ಅರ್ಧಶತಕವನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮಗಳು ಸಮೈರಾಗೆ ಅರ್ಪಿಸಿದ್ದಾರೆ.

Aug 07, 2023 | 10:35 AM

ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾರತದ ತಿಲಕ್ ವರ್ಮಾ ಅರ್ಧಶತಕ ಸಿಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆಗಿ ಕಾಲಿಟ್ಟಿದ್ದಾರೆ. 41 ಎಸೆತಗಳಲ್ಲಿ 51 ರನ್ ಗಳಿಸಿ ತಿಲಕ್ ಭಾರತದ ಮಾನ ಉಳಿಸಿದರು.

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡ ಬಳಿಕ ಕ್ರೀಸ್​ಗೆ ಬಂದ ತಿಲಕ್ ವರ್ಮಾ ತಂಡದ ಸ್ಕೋರ್ 150 ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ, ತಿಲಕ್ ಅವರು 4 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಿಡಿಸಿ 41 ಎಸೆತಗಳಲ್ಲಿ 51 ರನ್ ಚಚ್ಚಿದರು.

ಈ ಮೂಲಕ ತಿಲಕ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ತನ್ನ ದ್ವಿತೀಯ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇದೀಗ ತಿಲಕ್ ತಮ್ಮ ಅರ್ಧಶತಕವನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮಗಳು ಸಮೈರಾಗೆ ಅರ್ಪಿಸಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಿಲಕ್ ವರ್ಮಾ ಅವರು, ಸಮೈರಾ ಅವರೊಂದಿಗಿನ ಉತ್ತಮವಾದ ಬಾಂಧವ್ಯದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಚೊಚ್ಚಲ ಶತಕ ಅಥವಾ ಅರ್ಧಶತಕ ಗಳಿಸಿದಾಗ ನನ್ನ ಆಚರಣೆಯನ್ನು ಅವಳಿಗೆ ಅರ್ಪಿಸುವುದಾಗಿ ಭರವಸೆ ನೀಡಿದ್ದೆ ಎಂದು ಬಹಿರಂಗಪಡಿಸಿದರು.

"ಈ ಅರ್ಧಶತಕ ರೋಹಿತ್ ಭಾಯಿ ಅವರ ಮಗಳು ಸ್ಯಾಮಿಗಾಗಿ" ಎಂದು ತಿಲಕ್ ವರ್ಮಾ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದರು. “ನಾನು ಸ್ಯಾಮಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ಶತಕ ಅಥವಾ ಅರ್ಧಶತಕ ಗಳಿಸಿದಾಗ, ನಿನಗಾಗಿ ಸಂಭ್ರಮಾಚರಣೆ ಮಾಡುತ್ತೇನೆ ಎಂದು ಅವಳಿಗೆ ಭರವಸೆ ನೀಡಿದ್ದೆ, ”ಎಂದು ತಿಲಕ್ ಹೇಳಿದ್ದಾರೆ.

“ಈ ಅರ್ಧಶತಕ ರೋಹಿತ್ ಭಾಯಿ ಅವರ ಮಗಳು ಸ್ಯಾಮಿಗಾಗಿ” ಎಂದು ತಿಲಕ್ ವರ್ಮಾ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದರು. “ನಾನು ಸ್ಯಾಮಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ಶತಕ ಅಥವಾ ಅರ್ಧಶತಕ ಗಳಿಸಿದಾಗ, ನಿನಗಾಗಿ ಸಂಭ್ರಮಾಚರಣೆ ಮಾಡುತ್ತೇನೆ ಎಂದು ಅವಳಿಗೆ ಭರವಸೆ ನೀಡಿದ್ದೆ, ”ಎಂದು ತಿಲಕ್ ಹೇಳಿದ್ದಾರೆ.

ಈ ಅರ್ಧಶತಕದೊಂದಿಗೆ ತಿಲಕ್ ವರ್ಮಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಭಾರತ ಪರ ಅರ್ಧಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರನಾಗಿದ್ದಾರೆ. ಈ ಮೂಲಕ ರಿಷಭ್ ಪಂತ್ ದಾಖಲೆಯನ್ನು ಕೂಡ ಮುರಿದಿದ್ದಾರೆ.

ರೋಹಿತ್ ಶರ್ಮಾ ಅವರು 20 ವರ್ಷ, 143 ದಿನಗಳಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೊದಲ ಅರ್ಧಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಆಟಗಾರನಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಇದೀಗ ತಿಲಕ್ ಇದ್ದು, 20 ವರ್ಷ, 271 ದಿನಗಳಲ್ಲಿ ಈ ಸಾಧನೆ ಗೈದಿದ್ದಾರೆ. ರಿಷಭ್ ಪಂತ್ ಮೂರನೇ ಸ್ಥಾನಕ್ಕೆ ಕುಸಿದಿದ್ದು 21 ವರ್ಷ, 38 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

T20I ನಲ್ಲಿ ರೋಹಿತ್ ಅವರ ಚೊಚ್ಚಲ ಅರ್ಧಶತಕವು 2007 T20 ವಿಶ್ವಕಪ್‌ನಲ್ಲಿ ಬಂದಿತ್ತು. ಅತ್ತ ರಿಷಭ್ ಪಂತ್ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ಈ ಸಾಧನೆಯನ್ನು ಮಾಡಿದ್ದರು. ಇದೀಗ ತಿಲಕ್ ವರ್ಮಾ ವಿಂಡೀಸ್ ವಿರುದ್ಧದ ಎರಡನೇ ಟಿ20 ಯಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.