EBM News Kannada
Leading News Portal in Kannada

ಮಲೇಷ್ಯಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಬೃಹತ್ ಜಯ; ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ – Kannada News | Asian champions trophy 2023 India go top with 5 0 rout of Malaysia

0

ಪೃಥ್ವಿಶಂಕರ |

Updated on: Aug 07, 2023 | 11:04 AM

Asian Champions Trophy 2023: ಪಂದ್ಯಾವಳಿಯ ತನ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಮಲೇಷ್ಯಾ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 5-0 ಗೋಲುಗಳಿಂದ ಮಣಿಸಿದೆ.

Aug 07, 2023 | 11:04 AM

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಟೀಂ ಇಂಡಿತಾ ಮತ್ತೆ ತನ್ನ ಗೆಲುವಿನ ಹಾದಿಗೆ ಮರಳಿದೆ. ಪಂದ್ಯಾವಳಿಯ ತನ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಮಲೇಷ್ಯಾ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 5-0 ಗೋಲುಗಳಿಂದ ಮಣಿಸಿದೆ.

ಪಂದ್ಯಾವಳಿಯ ಮಲೇಷ್ಯಾ ಬಲಿಷ್ಠ ತಂಡ ಎನಿಸಿಕೊಂಡಿದ್ದರಿಂದ ಈ ಪಂದ್ಯದಲ್ಲಿ ಪ್ರಬಲ ಸ್ಪರ್ಧೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಹರ್ಮನ್‌ಪ್ರೀತ್ ಸಿಂಗ್ ತಂಡದ ಎದುರು ಮಲೇಷ್ಯಾ ತಂಡ ಮಂಕಾಯಿತು.

ಇನ್ನು ಈ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 7-2 ಅಂತರದಿಂದ ಜಯ ಸಾಧಿಸಿದ್ದ ಭಾರತ ಆ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 1-1 ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಇತ್ತ ಮಲೇಷ್ಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಚೀನಾ ವಿರುದ್ಧ 5-1 ಅಂತರದ ಜಯ ಸಾಧಿಸಿತ್ತು. ಹೀಗಾಗಿ ಹೈವೋಲ್ಟೆಜ್ ಪಂದ್ಯವನ್ನು ನಿರೀಕ್ಷಿಸಲಾಗಿತ್ತು. ಆದರೆ ಭಾರತ ಎದುರಾಳಿ ತಂಡವನ್ನು 5-0 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಪಂದ್ಯದ 15ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಭಾರತದ ಪರ ಮೊದಲು ಗೋಲು ದಾಖಲಿಸಿದರು. ಆ ಬಳಿಕ ಹಾರ್ದಿಕ್ ಸಿಂಗ್ 32ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿ, 2-0 ಅಂತರದ ಮುನ್ನಡೆ ಸಾಧಿಸಿದರು.

ಇನ್ನು ಚೀನಾ ವಿರುದ್ಧದ ಪಂದ್ಯದಲ್ಲಿ ಜೋಡಿ ಗೋಲು ದಾಖಲಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಕೂಡ ಒಂದು ಗೋಲು ದಾಖಲಿಸಿ ಅಂತರವನ್ನು 3-0 ಗೆ ಏರಿಸಿದರು.

ಭಾರತದ ಗೋಲು ಭೇಟೆ ಇಲ್ಲಿಗೆ ನಿಲ್ಲದೆ, ಗುರ್ಜಂತ್ ಸಿಂಗ್ ಮತ್ತು ಯುಗರಾಜ್ ಸಿಂಗ್ ಒಂದು ನಿಮಿಷದ ಅಂತರದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ಭಾರತದ ಗೋಲುಗಳ ಸಂಖ್ಯೆಯನ್ನು 5-0 ಗೆ ಏರಿಸಿದರು.

ಭಾರತ ಆಡಿರುವ ಮೂರು ಪಂದ್ಯಗಳಲ್ಲಿ 7 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಾಗೆಯೇ ಮಲೇಷ್ಯಾ ಆಡಿರುವ 3 ಪಂದ್ಯಗಳಲ್ಲಿ 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದೀಗ ಪಾಕಿಸ್ತಾನ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯವನ್ನು ಇದೇ ಬುಧವಾರ ಆಡುವುದಕ್ಕೂ ಮುನ್ನ ಭಾರತ ಹಾಕಿ ತಂಡ ಇಂದು ಸಂಜೆ 8:30 ಕ್ಕೆ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಪ್ರಸ್ತುತ ದಕ್ಷಿಣ ಕೊರಿಯಾ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿ

Leave A Reply

Your email address will not be published.