EBM News Kannada
Leading News Portal in Kannada

ಭರ್ಜರಿ ಶತಕ ಸಿಡಿಸಿ ಮಿಂಚಿದ ಚೇತೇಶ್ವರ ಪೂಜಾರ – Kannada News | Royal London Cup 2023: Cheteshwar Pujara Smashes Century

0


Royal London Cup 2023: ರಾಯಲ್​ ಲಂಡನ್​ ಕಪ್​ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಸಸೆಕ್ಸ್ ತಂಡಕ್ಕೆ ಗೆಲುವು ದಕ್ಕಲಿಲ್ಲ.

Royal London Cup 2023: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ​ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ನಾರ್ಥಾಂಪ್ಟನ್ ತಂಡದ ವಿರುದ್ಧ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಟಾಮ್ ಹೈನ್ಸ್​ ಕೇವಲ 13 ರನ್​ಗಳಿಗೆ ಔಟ್ ಆದರೆ, ಟಾಮ್ ಅಲ್ಸೋಪ್ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಪೂಜಾರ ಕ್ರೀಸ್​ ಕಚ್ಚಿ ನಿಲ್ಲುತ್ತಿದ್ದಂತೆ ರನ್​ ಗಳಿಕೆ ವೇಗವನ್ನು ಹೆಚ್ಚಿಸಿದರು. ಅಲ್ಲದೆ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.

ಆದರೆ ಮತ್ತೊಂದೆಡೆ ಸಸೆಕ್ಸ್ ತಂಡವು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇದಾಗ್ಯೂ ತಮ್ಮ ಅನುಭವವನ್ನು ಧಾರೆಯೆರದ ಚೇತೇಶ್ವರ ಪೂಜಾರಾ 119 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 106 ರನ್ ಬಾರಿಸಿದರು. ಈ ಮೂಲಕ ಮಳೆಯಿಂದಾಗಿ ನಿಗದಿತವಾಗಿದ್ದ 45 ಓವರ್​ಗಳಲ್ಲಿ ಸಸೆಕ್ಸ್​ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 240 ರನ್​ಗಳಿಗೆ ತಂದು ನಿಲ್ಲಿಸಿದರು.

241 ರನ್​ಗಳ ಗುರಿ ಪಡೆದ ನಾರ್ಥಾಂಪ್ಟನ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಪೃಥ್ವಿ ಶಾ (26) ವಿಫಲರಾದರು. ಅಲ್ಲದೆ 115 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಕಣಕ್ಕಿಳಿದ ಇನ್ನು ಲೆವಿಸ್ 36 ರನ್ ಬಾರಿಸಿದರೆ, ರಿಕಾರ್ಡೊ 37 ರನ್​ಗಳ ಕೊಡುಗೆ ನೀಡಿದರು. ಹಾಗೆಯೇ ಕೆಳಕ್ರಮಾಂಕದಲ್ಲಿ ಟಾಮ್ ಟೇಲರ್ ಅಜೇಯ 42 ರನ್​ ಬಾರಿಸಿ 43.4 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ನಾರ್ಥಾಂಪ್ಟನ್ ತಂಡವು 3 ವಿಕೆಟ್​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿ



Leave A Reply

Your email address will not be published.