ಬೆಂಗಳೂರು, ಜೂನ್ 10: ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಸತತವಾಗಿ ಏರಿಕೆಯಾಗಿರುವುದನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
”ಸತತ ನಾಲ್ಕು ದಿನದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಲಾಗಿದೆ. ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದಂತೆ ಸಾಮಾನ್ಯರ ಮೇಲೆ ಹೊರೆ ಹಾಕುವುದನ್ನು ಮೋದಿ ಬಹಳ ವೇಗವಾಗಿ ಮಾಡ್ತಾರೆ. ಅದೇ ಕಚ್ಚಾ ತೈಲಾ ಬದರ ಇಳಿಕೆಯಾದಾಗ ಬೆಲೆ ಇಳಿಸುವುದಕ್ಕೆ ಹಠ ಮಾಡ್ತಾರೆ.
ಸುದೀರ್ಘ ಲಾಕ್ಡೌನ್ ಇದ್ದ ಕಾರಣ ಸುಮಾರು 83 ದಿನಗಳ ಬಳಿಕ ಜೂನ್ 7 ರಂದು ಮೊದಲ ಸಲ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಲಾಯಿತು. ನಂತರ ಜೂನ್ 8, ಜೂನ್ 9 ಹಾಗೂ ಜೂನ್ 10 ಸಹ ಬೆಲೆ ಏರಿಕೆ ಮಾಡಲಾಗಿದೆ.