Ultimate magazine theme for WordPress.

ಭಾರಿ ಮೊತ್ತಕ್ಕೆ ಸೇಲ್ ಆದ ಸಲ್ಮಾನ್ ಖಾನ್‌ ಹೊಸ ಸಿನಿಮಾ

0

ಸಲ್ಮಾನ್ ಖಾನ್ ಸಿನಿಮಾಕ್ಕೆ ನೂರು ಕೋಟಿ ಗಳಿಕೆ ಎಂಬುದು ಲೆಕ್ಕವೇ ಇಲ್ಲ. ಗಳಿಕೆಯಲ್ಲಿ ಸಲ್ಮಾನ್ ಖಾನ್ ಸಿನಿಮಾಗಳನ್ನು ಮೀರಿಸುವುದು ಬಹುಕಷ್ಟ.

ಆದರೆ ಕೊರೊನಾ ಸಮಯದಲ್ಲಿ ಸ್ಟಾರ್ ನಟರ ಸಿನಿಮಾಗಳೇ ಒಟಿಟಿ ಮೂಲಕ ಬಿಡುಗಡೆಯಾಗಿ ಕಡಿಮೆ ಲಾಭಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಿವೆ. ಆದರೆ ಸಲ್ಮಾನ್ ಖಾನ್‌ ‘ಚಿತ್ರಮಂದಿರಗಳ ರಾಜ’ ಎಂದೇ ಕರೆಸಿಕೊಳ್ಳುತ್ತಾರೆ. ‘ಹಬ್ಬ ಬಂದಾಗ ಸಲ್ಮಾನ್ ಖಾನ್ ಸಿನಿಮಾ, ಸಲ್ಮಾನ್ ಸಿನಿಮಾ ಬಂದಾಗ ಹಬ್ಬ’ ಎಂಬ ಮಾತು ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ, ಹಾಗಾಗಿ ಅವರು ಒಟಿಟಿ ಕಡೆಗೆ ಮುಖ ಮಾಡುವ ಮಾತೇ ಇಲ್ಲ.

ಸಲ್ಮಾನ್ ಖಾನ್ ನಟಿಸಿರುವ ‘ರಾಧೆ’ ಸಿನಿಮಾ ಇದೀಗ ಬಿಡುಗಡೆಗೆ ತಯಾರಾಗಿದೆ. ಸಿನಿಮಾವು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಿನಿಮಾದ ವಿತರಣೆ ಹಕ್ಕು ಎಷ್ಟಕ್ಕೆ ಮಾರಾಟ ವಾಗಿದೆ ಎಂಬ ಸುದ್ದಿ ಬಾಲಿವುಡ್ಡಿಗರ ಹುಬ್ಬೇರುವಂತೆ ಮಾಡಿದೆ.

ಝೀ ಸ್ಟುಡಿಯೋ ಜೊತೆಗೆ ಭಾರಿ ಮೊತ್ತದ ಒಪ್ಪಂದವನ್ನು ಸಲ್ಮಾನ್ ಖಾನ್ ಮಾಡಿಕೊಂಡಿದ್ದಾರೆ. ‘ರಾಧೆ’ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಝೀ ಸ್ಟುಡಿಯೋಸ್‌ ಗೆ ಬರೋಬ್ಬರಿ 230 ಕೋಟಿ ರೂಪಾಯಿಗೆ ಮಾರಲಿದ್ದಾರಂತೆ ಸಲ್ಮಾನ್ ಖಾನ್!

Leave A Reply

Your email address will not be published.